(ಸನ್ಮಾರ್ಗವೇ ಜೀವನದ ಹರುಷ. ಲೇಖನ ಮಾಲೆಗಳು)

ಮನುಷ್ಯನ ಜೀವನದಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಇದೆ. ಆದರೆ ಅದಕ್ಕೆ ತಕ್ಕಂತೆ ಮನುಷ್ಯನೂ ನಡೆದುಕೊಂಡು ಶಾಂತಿಯಿಂದ ಜೀವನ ನಡೆಸಿಕೊಂಡು ಹೋದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಕ್ಷಣಿಕವಾದ ಲಾಭಕ್ಕಾಗಿ ತಿಳಿದೂ ತಪ್ಪು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಬಾರದು.

ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? ಈ ಪ್ರಶ್ನೆ ಮನುಷ್ಯನು ತಾನು ತಪ್ಪು ಮಾಡಿದ್ದೇನೆಂದು ಅವನಿಗೆ ಅನ್ನಿಸಿದಾಗ ಮಾತ್ರ ಉಧ್ಬವಿಸುತ್ತದೆ. ಇಲ್ಲದಿದ್ದಲ್ಲಿ ಎಷ್ಟೇ ತಪ್ಪು ಮಾಡಿದ್ದರೂ ಸಹ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾ ಇರುತ್ತಾನೆ. ಮನುಷ್ಯ ತಪ್ಪು ಮಾಡಿ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ ಅಂತಹ ಮನುಷ್ಯನ ಮನಸ್ಸು ಪರಿವರ್ತನೆಯಾಗಿದೆ ಕ್ಷಮೆಗೆ ಅರ್ಹನಾಗಿದ್ದಾನೆ ಎನ್ನುತ್ತಾರೆ. ಆದರೆ ಇದು ಎಲ್ಲಾ ತಪ್ಪುಗಳಿಗೆ ಅನ್ವಯಿಸುವುದಿಲ್ಲ. ಕಂಡು ಅಥವಾ ಕಾಣದೆ ಮಾಡುವ ಕೆಲವು ಸಣ್ಣ ಪುಟ್ಟ ತಪ್ಪುಗಳಿಗೆ ಮಾತ್ರ ಅನ್ವಯಿಸಬಹುದು. ಆದರೆ ದೊಡ್ಡ ತಪ್ಪುಗಳ ಅಥವಾ ಅಪರಾಧಗಳಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುತ್ತದೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಬಹುದು.

RELATED ARTICLES  ಮನುಷ್ಯನ ದೇಹ 'ಹೆಚ್ಚೇನು ಸಾಧಿಸುವುದಕ್ಕಾಗಿ ಇದೆ!

ನಡೆಯುವ ಕಾಲು ಎಡವುದಿಲ್ಲವೇ? ಎಂಬ ಮಾತಿನಖತೆ ಮನುಷ್ಯನಾದವನು ತನ್ನ ಜೀವಿತ ಕಾಲದಲ್ಲಿ ಅನೆಕ ರೀತಿಯ ತಪ್ಪುಗಳನ್ನು ಮಾಡಿರುತ್ತಾನೆ. ಇದರಲ್ಲಿ ಹಲವಾರು ತಪ್ಪುಗಳು ಬೆಳಕಿಗೆ ಬಂದಿರುವುದಿಲ್ಲ. ತಪ್ಪು ಮಾಡದೇ ಇರುವ ಮನುಷ್ಯ ಸಿಗುವುದೇ ಇಲ್ಲ ಎನ್ನಬಹುದು. ಮನುಷ್ಯನು ಅಡಿಗಡಿಗೂ ಮಾಡುವ ತಪ್ಪುಗಳನ್ನು ಹೇಳುತ್ತ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಒಂದು ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಎಲ್ಲರೂ ಒಂದೇ ರೀತಿಯ ತಪ್ಪನ್ನು ಮಾಡುತ್ತಾರೆ ಎಂದು ಹೇಳಲು ಬರುವುದಿಲ್ಲ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಒಬ್ಬರು ಮಾಡುವ ತಪ್ಪಿಗೂ ಬೇರೆಯವರು ಮಾಡುವ ತಪ್ಪಿಗೂ ಕೆಲವೊಮ್ಮೆ ಸಾಮ್ಯತೆ ಇರುತ್ತದೆ. ಆದರೆ ತಪ್ಪು ಮಾಡಿರುವ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ಉದಾಹರಣೆಗೆ ಒಬ್ಬ ಮನುಷ್ಯ ಅಥವಾ ಬೇರೆ ಕೆಲವರು ಕಳ್ಳತನ ಮಾಡಿದ್ದರೂ ಅದು ಬೇರೆ ರೀತಿಯಲ್ಲಿದ್ದರಬಹುದು ಆದರೆ ಹಣ ಪಡೆಯುವ ಉದ್ದೇಶ ಒಂದೇ ಆಗಿರುತ್ತದೆ. ಆದರೆ ವಿಧಾನಗಳು ನಾನಾ ರೀತಿಯಲ್ಲಿ ಇರುತ್ತದೆ. ಜೀವನದಲ್ಲಿ ತನ್ನ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದಿರುವುದು ಮೊದಲನೇ ತಪ್ಪು. ಈ ತಪ್ಪು ಹಲವರು ರೀತಿಯಲ್ಲಿ ನಡೆಯಬಹುದು. ಆದರೆ ಈ ರೀತಿಯ ತಪ್ಪುಗಳಲ್ಲಿ ಹೆಚ್ಚು ಕಡಿಮೆ ಸಾಮ್ಯತೆ ಇರುತ್ತದೆ.

ಮುಂದುವರಿಯುವುದು………