ಮುಂದುವರಿದ ಭಾಗ:

ಮನುಷ್ಯ ಸಹೃದಯನಾಗಿದ್ದಲ್ಲಿ, ಅನಿರೀಕ್ಷಿತವಾದ ತನ್ನ ತಪ್ಪಿನಿಂದ ಬೇರೆಯವರಿಗೆ ತೊಂದರೆಯಾದಲ್ಲಿ ತಕ್ಷಣ ತನ್ನ ತಪ್ಪಿನ ಅರಿವಾಗಿ ಕೂಡಲೇ ನೊಂದವರ ಬಳಿ ಹೋಗಿ ಕ್ಷಮೆ ಯಾಚಿಸಿ ಅವರಿಗೆ ತೊಂದರೆಯಾಗಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾನೆ. ಇಲ್ಲದಿದ್ದಲ್ಲಿ ತನ್ನ ತಪ್ಪಿದ್ದೂ ಸಹ ಉದ್ಧಟತನದಿಂದ ತೊಂದರೆಗೆ ಒಳಗಾದವರನ್ನು ನಿಂದಿಸಬಹುದು. ಕ್ಷಮೆ ಕೇಳುವುದರಿಂದ ತನ್ನ ಕೆಟ್ಟ ಪ್ರತಿಷ್ಠೆಗೆ ಕುಂದುಂಟಾಗುತ್ತದೆ ಎಂದು ಭಾವಿಸುತ್ತಾನೆ.

ಇನ್ನೊಬ್ಬರಲ್ಲಿ ಕ್ಷಮೆ ಯಾಚಿಸಿದರೆ ತನ್ನ ಗೌರವ ಹೆಚ್ಚುತ್ತಗದೆ ಎಲ್ಲರ ಪ್ರೀತಿಗೆ ಪಾತ್ರರಾಗಬಹುದು ಎಂದು ತಿಳಿಯುವುದಿಲ್ಲ. ಬದಲಿಗೆ ಇವನಿಂದ ಬೇರೆಯವರಿಗೆ ತೊಂದರೆಯಾಗಿದ್ದರೂ ಸಹ ಇವನೇಕೆ ಅಡ್ಡಬರಬೇಕಿತ್ತು? ಎಂಬ ಮೊಂಡುವಾದವನ್ನು ಮಾಡುತ್ತಾನೆ. ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗಳಲ್ಲಿ ಎಲ್ಲರೂ ನಡೆದಾಡಲು ಮುಕ್ತ ಅವಕಾಶ ಇರುತ್ತದೆ. ಇದನ್ನು ಯಾರೂ ಪ್ರಶ್ನಿಸಲು ಬರುವುದಿಲ್ಲ. ಆದರೂ ಒಬ್ಬ ಮನುಷ್ಯ ತನ್ನ ವಾಹನದ ಮೂಲಕ ಅಥವಾ ವೈಯುಕ್ತಿಕವಾಗಿ ತನ್ನ ತಪ್ಪಿನಿಂದ ಬೇರೆಯವರಿಗೆ ಡಿಕ್ಕಿ ಹೊಡೆದು ನಂತರ ತೊಂದರೆಗೆ ಒಳಗಾದವರನ್ನೇ ನಿಂದಿಸಿದರೆ, ತೊಂದರೆಗೆ ಒಳಗಾದವನು ತನ್ನದಲ್ಲದ ತಪ್ಪಿಗೆ ನೋವನ್ನು ಅನುಭವಿಸಬೇಕಾಗುತ್ತದೆ. ತೊಂದರೆ ಮಾಡುವ ವ್ಯಕ್ತಿ ಶ್ರೀಮಂತನಾಗಿದ್ದು, ಅವನಿಗೆ ಹೆಚ್ಚಾಗಿ ಬೆಂಬಲವಿದ್ದೂ ಒಳ್ಳೆಯ ಮನುಷ್ಯನಾಗಿದ್ದಲ್ಲಿ ಬುದ್ದಿಯನ್ನು ಹೇಳಬಹುದು. ಇಲ್ಲದಿದ್ದಲ್ಲಿ ದೊಡ್ಡರೀತಿಯ ಜಗಳವಾಗಿ ಪೋಲೀಸ್ಸ್ಟೇಷನ್ವರೆಗೂ ಹೋಗಬಹುದು.

RELATED ARTICLES  ಶ್ರೀಧರರು‌ ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಆರನೆಯ ಭಾಗ

ಒಂದು ಸಣ್ಣ ತಪ್ಪಿಗೆ ತನ್ನ ಒಣಪ್ರತಿಷ್ಠೆಯಿಂದ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಮಾಡಿರುವುದು ಸಣ್ಣ ತಪ್ಪು ಅದು ತನ್ನಿಂದಲೇ ಆಗಿದೆ ಎಂದು ಕ್ಷಮೆ ಕೋರಿ ಮುನ್ನಡೆದರೆ ಅಕಸ್ಮಾತ್ ಬೇರೆ ಕಡೆ ಆ ವ್ಯಕ್ತಿ ಸಿಕ್ಕಿದರೂ ಸಹ ಒಳ್ಳೆಯ ಸ್ನೇಹಿತನಾಗಬಹುದು. ಮನುಷ್ಯನ ಜೀವನದಲ್ಲಿ ಒಂದೊಂದು ಘಟನೆಯೂ ಒಂದೊಂದು ಪಾಠವನ್ನು ಕಲಿಸುತ್ತದೆ.

ಜೀವನದಲ್ಲಿ ಕೆಲವು ಅಹಿತಕರ ಘಟನೆಗಳು ಮನುಷ್ಯನ ಮನಸ್ಸಿನಂತೆ ನಡೆಯಬಹುದು, ಎಂದರೆ ಕೆಲವೊಂದು ಮಾತ್ರ ಇವನ ಮನಸ್ಸನ್ನು ಅವಲಂಬಿಸಿರುತ್ತದೆ. ಆದರೆ ಗ್ರಹಚಾರ ಕೆಟ್ಟಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಎಷ್ಟೇ ಮನಸ್ಸನ್ನು ನಿಯಂತ್ರಿಸಿದರೂ ವಿಧಿ ಎಳೆದುಕೊಂಡು ಹೋಗಬಹುದು.

RELATED ARTICLES  ಖ್ಯಾತ ಸಿನಿಮಾ ನಟಿಗೆ ಎರಡು ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ.

ಮನುಷ್ಯನಿಗೆ ಒಳಮನಸ್ಸು ಹಾಗೂ ಹೊರಮನಸ್ಸು ಎಂಬುದು ಇರುತ್ತದೆ. ಒಬ್ಬ ಮನುಷ್ಯ ಯಾವುದಾದರೂ ಕೆಲಸ ಮಾಡುವಾಗ ಅದು ಕೆಟ್ಟದ್ದು ಇರಲೀ ಅಥವಾ ಒಳ್ಳೆಯದ್ದೇ ಇರಲೀ ಮೊದಲು ಅವನು ಮಾಡುವ ಕೆಲಸದ ಆಗುಹೋಗುಗಳ ಬಗ್ಗೆ ಒಳ ಮನಸ್ಸು ಚಿಂತಿಸುತ್ತದೆ. ಈ ಕೆಲಸ ಮಾಡುವುದರಿಂದ ತನಗೇನು ತೊಂದರೆಯಾಗಬಹುದು? ಇದರಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿ, ತೊಂದರೆಯಾಗುತ್ತದೆ ಎಂದು ಕಂಡುಬಂದಾಗ ಆ ಕೆಲಸ ಮಾಡುವುದೇ ಬೇಡ ಎಂದು ಒಳ ಮನಸ್ಸು ಹೇಳುತ್ತದೆ. ಆದರೆ ಭಂಡ ಧೈರ್ಯದಿಂದ ಏನೂ ಆಗುವುದಿಲ್ಲ ಈ ಕೆಲಸ ಮಾಡಣವೆಂದು ಹೊರಮನಸ್ಸು ಹುರಿದುಂಬಿಸುತ್ತದೆ. ಇದರಿಂದ ತೊಂದರೆಯಾದಾಗ, ಒಳ ಮನಸ್ಸು ಹೇಳಿದಂತೆ ಕೇಳಬೇಕಿತ್ತು ಎಂದು ಪರಿತಪಿಸಬಹುದು.

ಮುಂದುವರಿಯುವುದು…