(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಆದರ್ಶ ಪುರುಷರು ಆಯಾ ಪ್ರಸಂಗಗಳಲ್ಲಿ ತಾನಾಗಿ ಆಡಿದ ನುಡಿ, ನಡೆದ ನಡೆ ಇತರರಿಗೆ ತಾರಕ ನೌಕೆಯಂತೆ ಪರಿಣಮಿಸುವದು.
ಶ್ರೀರಾಮನು ಮಾತೆ ಕೈಕೇಯಿಗೆ ಆಡಿದ ನುಡಿ
‘ತಂದೆಯಾದ ದಶರಥ ಮಹಾರಾಜನಿಗೆ ಸಂತೋಷವನ್ನುಂಟುಮಾಡದೆ -ಪಿತ್ರಾಜ್ಞೆಯನ್ನು ಪರಿಪಾಲಿಸದೆ- ಒಂದು ಮುಹೂರ್ತವೂ ಸಹ ಜೀವಿಸಿರಲು ನಾನು ಇಚ್ಛಿಸುವದಿಲ್ಲ.’

ಯತೋ ಮೂಲಂ ನರಃ ಪಶ್ಯೇತ್ ಪ್ರಾದುರ್ಭಾವಮಿಹಾತ್ಮನಃ|
ಕಥಂ ತಸ್ಮಿನ್ ನವರ್ತೇತ ಪ್ರತ್ಯಕ್ಷೇ ಸತಿ ದೈವತೇ|| …………………………………………….
ಯಾವಾತನಿಂದ ತನ್ನ ದೇಹದ ಉತ್ಪತ್ತಿಯಾಗಿರುವದೋ ಆತನೇ ಪ್ರತ್ಯಕ್ಷ ದೈವತವಾಗಿರಲು ಆತನ ವಶದಲ್ಲಿ ಯಾವಾತನು ತಾನೇ ಇರನು?

RELATED ARTICLES  ಶ್ರೀಸಮರ್ಥರು ಮಾರುತಿರಾಯನ ಅವತಾರವಾಗಿರುವದರಿಂದ ಅವರಿಗೆ ತಪಸ್ಸಿನ ಅವಶ್ಯಕತೆ ಇರಲಿಲ್ಲ

ತದ್ಬ್ರೂಹಿ ವಚನಂ ದೇವಿ ರಾಜ್ಞೋ ಯದಭಿಕಾಂಕ್ಷಿತಮ್|
ಕರಿಷ್ಯೇ ಪ್ರತಿಜ್ಞಾನೇ ಚ ರಾಮೋ ದ್ವಿರ್ನಾಭಿಭಾಷತೇ||
ಮಹಾರಾಜನ ಇಚ್ಛೆಯೇನೆಂಬುದನ್ನು ತಿಳಿಸು. ಅದನ್ನು ತಿಳಿದಮೇಲೆ ಮಾಡುವನೋ, ಇಲ್ಲವೋ ಎಂಬ ಸಂದೇಹ ಬೇಡ. ಪಿತೃವಿನ ಇಚ್ಛೆಯಂತೆ ಮಾಡುತ್ತೇನೆ. ಇದು ನನ್ನ ಪ್ರತಿಜ್ಞೆ. ರಾಮನಲ್ಲಿ ಆಡಿದ ಮಾತಿಗೆ ಎರಡಿಲ್ಲ.

RELATED ARTICLES  ಸ್ವಸ್ವರೂಪದ ಆನಂದರೂಪದಲ್ಲೇ ಕೇವಲ ನಿರ್ವಿಕಲ್ಪನಿರುತ್ತಾನೋ ಆತನೆ ಯತಿ.

ತದಪ್ರಿಯಮಮಿತ್ರಘ್ನೋ ವಚನಂ ಮರಣೋಪಮಮ್|
ಶ್ರುತ್ವಾ ನ ವಿವ್ಯಥೇ ರಾಮಃ ಕೈಕೇಯೀಂ ಚೇದಮಬ್ರವೀತ್||……………………………………..
ಬೇರೆಯವರಿಗೆ ಮೃತ್ಯುವಿನಂತೆ ಅಪ್ರಿಯವಾದ ಕೈಕೇಯಿಯ ಮಾತನ್ನು ಕೇಳಿ ಶ್ರೀರಾಮನ ಮುಖಕಾಂತಿಯು ಕುಗ್ಗಲಿಲ್ಲ. ಯಾವ ವ್ಯಥೆಯೂ ತೋರಿಬರಲಿಲ್ಲ. ರಾಜ್ಯಾಭಿಷಿಕ್ತನಾಗಲು ಬಂದ ಉತ್ಸಾಹ ಮತ್ತು ಆನಂದದ ಮುಖವು ಈಗಲೂ ಕಳೆಗುಂದದೇ ಇತ್ತು. ಆತ್ಮಸ್ಥಿತಿಯ ಮೇರೆ ಮೀರಿದ ಆನಂದದಲ್ಲಿ ಮೈ ಮರೆತಿರುವಾಗ ಬಾಹ್ಯಪ್ರಪಂಚದ ಸುಖ-ದುಃಖಗಳಿಂದ ಆತ್ಮನಿಷ್ಟರ ಮನಸ್ಸು ಚಲಿಸದು.