ಹಿಂದೂ ಧರ್ಮ ಎನ್ನುವುದು ಸನಾತನವಾದುದು. ವರ್ಣಗಳು ನಾವು ಮಾಡಿಕೊಂಡು ಅದರ ತಿಕ್ಕಾಟದಲ್ಲಿ ದಿನ ಹಗಲು ರಾತ್ರಿ ಗುದ್ದಾಟ ನಡೆಸುತ್ತಿರುವುದು ಪ್ರಸ್ತೂತ. ನಾವೇ ಶ್ರೇಷ್ಠ ಎಂದು ಕೂಗುತ್ತ ದಿನಕ್ಕೊಂದು ಚಳುವಳಿ ಎನ್ನುವ ಮಾತು ಆಡುತ್ತ ನಡೆಯುತ್ತಿರುವವರಿಗೆ ಯಾವುದು ನಿಜವಾದ ಶ್ರೇಷ್ಠ ಎಂದು ಅರಿಯಲು ಕೂಡ ಪುರಸೊತ್ತಿಲ್ಲ. ಒಂದು ಕಡೆ ನಾವು ಅಲ್ಪರು, ತುಳಿಯಲ್ಪಟ್ಟವರು ಹಾಗಾಗಿ ವಿಶ್ವವೇ ನಮ್ಮದಾಗಬೇಕು ಎನ್ನುವವರಾದರೆ. ಮತ್ತೊಂದು ಕಡೆ ಬಹುsಸಂಖ್ಯಾತರು ತುಳಿಯುತ್ತಿರುವವರು ಎಂದೆನಿಸಿಕೊಳ್ಳುತ್ತಿರುವವರ ಪಾಡು ಆ ದೇವರಿಗೆ ಪ್ರೀತಿ. ಯಾರ ಸಹಾಯವೂ ಇಲ್ಲ ಇತ್ತ ನಿಜವಾಗಿ ಸ್ವತಂತ್ರರೂ ಅಲ್ಲ. ದಿನದಿನಕ್ಕೂ ನಾವು ಅಲ್ಪರು ನಮ್ಮನ್ನು ಬಹುಸಂಖ್ಯಾತರು ತುಳಿಯುತ್ತಾರೆ ತುಳಿಯುತ್ತಾರೆ ಎನ್ನುತ್ತಲೇ ಬಹುಸಂಖ್ಯಾತರನ್ನು ಮಟ್ಟ ಹಾಕಿ ತುಳಿಯಲು ಪ್ರಾರಂಭಿಸಿ ಬಹಳ ಕಾಲವಾಯಿತು. ಆದರೂ ಇವರು ಕೂಗಲಾರರು ಬೊಬ್ಬೆ ಹಾಕಲಾರರು.
ಇರಲಿ ಆದರೆ ಸನಾತನ ಧರ್ಮ ಹಿಂದೂ ಧರ್ಮ ಎನ್ನುವುದನ್ನು ಆಧಾರ ಸಮೇತ ಬಹಳ ಸಲ ನಿರುಪಿಸಲಾಗಿದೆ. ಯಾರು ಒಪ್ಪಲಿ ಬಿಡಲಿ ಸತ್ಯವನ್ನು ತಿರುಚಿ ಬರೆದರು ಇತಿಹಾಸ ಇತಿಹಾಸವೇ. ಸತ್ಯ ಒಂದಿಲ್ಲ ಒಂದು ದಿನ ಬೂದಿ ಸರಿಸಿಕೊಂಡು ಹೊರಗೆ ಬಂದೇ ಬರುತ್ತದೆ. ಹಿಂದೂತ್ವ ಮನಸತ್ವವನ್ನು ಕ್ಷಣಕಾಲ ಹತ್ತಿಕ್ಕಿ ಬೀಗಬಹುದು ಆದರೆ ಹತ್ತಿಕ್ಕಿ ನಡೆವವರು ಎಂದೂ ಸಾಧನೆಯನ್ನು ಮುಟ್ಟಲಾರರು.
ಒಮ್ಮೆ ಗುರುಗಳಲ್ಲಿ ಶಿಷ್ಯನೊಬ್ಬ ಕೇಳಿದನಂತೆ ಸಾಧನೆಯನ್ನು ಯಾವ ರೀತಿಯಲ್ಲಿ ಗಳಿಸಬೇಕು. ನಮ್ಮ ಬ್ರಹ್ಮಾಂಡದಲ್ಲಿ ಜೊಳ್ಳು ಗುರುತಿಸಿ ಗಟ್ಟಿದನ್ನು ಹೇಗೆ ಕಂಡು ಹಿಡಿಯಬೇಕು ಯಾವುದು ಸತ್ಯ ಯಾವುದು ಮಿತ್ಯ? ಎಂದು. ಆಗ ಆ ಗುರುಗಳಿಗೆ ಐವತ್ತು ವರ್ಷ. ತನ್ನ ಬಾಯನ್ನು ನೋಡು ಎಂದು ಹೇಳಿ ಬಾಯಿ ತೆರೆದು ತೋರಿಸಿದರು. ಆ ಶಿಷ್ಯ ನೋಡಿದ. ನಂತರ ಗುರುಗಳು ಕೇಳಿದರು ಏನೇನು ಕಂಡೆ ಎಂದು. ಹಲ್ಲು ಮತ್ತು ನಾಲಿಗೆ ಎಂದ ಶಿಷ್ಯ. ಆಗ ಗುರುಗಳು ಇನ್ನು ಹದಿನೈದು ವರ್ಷ ಬಿಟ್ಟು ಮತ್ತೆ ಈ ಪ್ರಶ್ನೆ ಕೇಳಿ ಆಗ ನಾನು ಉತ್ತರಿಸುವೆ. ಅಲ್ಲಿಯವರೆಗೆ ನೀನು ಚೆನ್ನಾಗಿ ಅಧ್ಯಯನದತ್ತ ಗಮನ ಕೊಡು ಎಂದರು. ಶಿಷ್ಯ ಗುರುಗಳ ಮಾತಿಗೊಪ್ಪಿ ತೆರೆಳಿದ.
ಹದಿನೈದು ವರ್ಷ ಕಳೆದುಹೋದ ನಂತರ ಮತ್ತೆ ಮೀಸೆ ಗಡ್ಡ ಹೊತ್ತ ಈ ಶಿಷ್ಯ ಗುರುಗಳ ಎದುರಿಗೆ ಅದೇ ಪ್ರಶ್ನೆ ಕೇಳಿದ. ಆಗ ಗುರುಗಳು ಮತ್ತೆ ತನ್ನ ಶಿಷ್ಯನಲ್ಲಿ ತನ್ನ ಬಾಯನ್ನು ನೋಡು ಎನ್ನುತ್ತಾರೆ. ಆ ಶಿಷ್ಯ ಬಾಯನ್ನು ನೋಡಿ ಈಗ ನಿಮ್ಮ ಬಾಯಲ್ಲಿ ಹಲ್ಲು ಇಲ್ಲ, ಕೇವಲ ನಾಲಿಗೆ ಮಾತ್ರ ಕಾಣಿಸುತ್ತಿದೆ ಎಂದ.
ಗುರುಗಳು ನಗುತ್ತಾ, ಮಗು ನಾಲಿಗೆ ಹುಟ್ಟಿನಿಂದ ಬಂದಿದ್ದು. ಹಲ್ಲು ಆನಂತರ ಬಂದಿದ್ದು. ಅದಲ್ಲದೆ ಅದು ಬಿದ್ದು ಮತ್ತೆ ಗಟ್ಟಿ ಹಲ್ಲು ಹುಟ್ಟಿತು. ಆ ಹಲ್ಲು ಮೂಲ ಬುಡದಲ್ಲಿ ಗಟ್ಟಿ ಇಲ್ಲ. ಅದರ ನೆಲೆಗೆ ಒಂದು ಅಸ್ತಿತ್ವವೇ ಇಲ್ಲ. ಇರುವಷ್ಟು ದಿನ ನಾಲಿಗೆಗೆ ಕಚ್ಚುತ್ತ, ತಾನಿಲ್ಲದೇ ಆಹಾರ ತಿನ್ನಲು ಸಾಧ್ಯವೇ ಇಲ್ಲ ಎನ್ನುತ್ತ, ಈ ನಾಲಿಗೆ ರುಚಿ ನೋಡುವಂಥಹ ನನ್ನ ಎಲ್ಲ ಅಧಿಕಾರ ಕಿತ್ತು ದಬ್ಬಾಳಿಕೆ ಮಾಡುತ್ತಿದೆ ಎನ್ನುತ್ತ ತಾನೆ ಈ ಬಾಯಿಗೆ ಯಜಮಾನ ಎಂದುಕೊಂಡು ಬಿಳಿಯಾಗಿ ಹೊಳೆಯಿತು. ಆದರೆ ನಾಲಿಗೆ ಯಾವುದೇ ಪ್ರತಿಕಾರ ತೋರದೆ ಸೌಮ್ಯವಾಗಿ ಸಹಾಯವಾಗಿ ಹಲ್ಲಿನಲ್ಲಿ ಸಿಕ್ಕಿರುವ ಸಣ್ಣ ಸಣ್ಣ ಆಹಾರ ತೆಗೆಯುತ್ತ ಜೊತೆಯಾಗಿ ಬದುಕಿತು. ಆದರೆ ಅಹಂಕಾರದ ಈ ಹಲ್ಲು ಕಾಲ ಕ್ರಮೇಣ ಅಳಿಸಿ ಹೋಯಿತು. ನಾಲಿಗೆ ಮಾತ್ರ ಹಾಗೆ ಉಳಿಯಿತು. ಈ ದೇಹ ಅಂತ್ಯವಾದಾಗಲೇ ಅದು ಅಂತ್ಯವಾಗುವುದು.
ನಮ್ಮ ಧರ್ಮವೂ ಹಾಗೆ ಸಕಲರನ್ನು ಪೊರೆಯುತ್ತ ಸಹಬಾಳ್ವೆಯಿಂದ ಬದುಕುವ ಮನಸ್ಸನ್ನು ನೀಡುತ್ತದೆ. ಅದನ್ನು ಹತ್ತಿಕ್ಕಲು ತಲತಲಾಂತರದಿಂದ ಸಂಚು ಹೊಂಚುಗಳು ನಡೆದರೂ ಅದು ಅದರಪಾಡಿಗೆ ಗಟ್ಟಿ ತಲೆಯೂರಿ ನಿಂತಿದೆ. ಈ ಭೂಮಿಯ ಹುಟ್ಟಿಗೂ ಹಿಂದೂ ಧರ್ಮದ ಬೇರಿಗೂ ಅಘಾದವಾದ ಸಂಬಂಧವಿದೆ. ಇಂತಹ ಧರ್ಮವನ್ನು ನಾಶ ಮಾಡುತ್ತೇನೆ ಎಂದು ಕತ್ತಿ ಫಳಕಿಸಿದರೆ ಕೇಡು ಅವರಿಗೆ ಹೊರತು ಒಳ್ಳೆತನದಲ್ಲಿ ಬದುಕುತ್ತಿರುವವರಿಗಲ್ಲ. ಭಾರತ ಸನಾತನವಾಗಿದ್ದು ಸಂಸ್ಕಾರ, ಸಂಸ್ಕøತಿಯ ನೆಲೆಗಟ್ಟಿನಿಂದ ಜನಿಸಿದೆ. ಯಾರೋ ಬಂದು ಅಳಿಸುತ್ತೇನೆ ಎಂದು ಬಿಟ್ಟರೆ ಅದು ಸುಲಭವಲ್ಲ. ಎದುರಿಸುವ ಸಾಮಥ್ರ್ಯವಿದೆ ಎಂದು ಹಲವು ಬಾರಿ ತೋರಿಸಿಕೊಟ್ಟಿದೆ ಭಾರತ. ಮತ್ತೆ ಆ ಸಾಮಥ್ರ್ಯ ಪರೀಕ್ಷೆ ನಡೆಯುತ್ತದೆಯೇ? ಭವಿಷತ್‍ಗಾಗಿ ಕಾಯಬೇಕಷ್ಟೆ.