(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಭರತನೆಂದರೆ ಭ್ರಾತೃಪ್ರೇಮದ ಆದರ್ಶಮೂರ್ತಿಯೇ ಸರಿ. ಆತನು ಸಸೈನ್ಯನಾಗಿ ಬರುವದನ್ನು ಕಂಡು ತಪ್ಪುಭಾವನೆಯಿಂದ ಲಕ್ಷ್ಮಣನು ಸಿಟ್ಟಿಗೆದ್ದನು. ಯುದ್ಧಸನ್ನಾಹ ಮಾಡುತ್ತಿದ್ದ ಲಕ್ಷ್ಮಣನನ್ನು ಕಂಡು ಶ್ರೀರಾಮನು ಹೇಳಿದ ಮಾತನ್ನು ನೋಡೋಣ.

ಕಿಮತ್ರ ಧನುಷಾಕಾರ್ಯಮಸಿನಾ ವಾ ಸಚರ್ಮಣಾ|
ಮಹೇಶ್ವಾಸೇ ಮಹಾಪ್ರಾಜ್ಞೇ ಭರತೇ ಸ್ವಯಮಾಗತೇ|| …………………………………….
ನೇಯಂ ಮಮ ಮಹೀ ಸೌಮ್ಯ ದುರ್ಲಭಾ ಸಾಗರಾಂಬರಾ|
ನ ಹೀಚ್ಛೇಯಮಧರ್ಮೇಣ ಶಕ್ರತ್ವಮಪಿ ಲಕ್ಷ್ಮಣ|| ……………………………………………

‘ಭ್ರಾತೃಪ್ರೇಮದಿಂದ ತಾನಾಗಿ ಬರುತ್ತಿರುವ ಅತಿ ಪ್ರಾಜ್ಞನಾದ ಈ ಭರತನ ವಿಷಯದಲ್ಲಿ ಧನುರ್ಬಾಣಾದಿ ಆಯುಧಗಳ ಪ್ರಯೋಗವೇನಿದೆ ಲಕ್ಷ್ಮಣಾ? ಆ ಅಪವಾದಿಂದ ಕೂಡಿದ ರಾಜ್ಯವು ಯಾರಿಗೆ ಬೇಕು?…………………………………….
ನಾನು ಮನಸ್ಸುಮಾಡಿದರೆ ಇಡೀ ಪೃಥ್ವಿಯನ್ನೇ ಹಸ್ತಗತಮಾಡಿಕೊಳ್ಳುವದೂ ಒಂದು ಮಹಾ ದೊಡ್ಡ ಕೆಲಸವೇ? ಆದರೆ ಮಗೂ, ಅನ್ಯಾಯದಿಂದ ಇಂದ್ರನ ಪಟ್ಟವೂ ಸಹ ನನಗೆ ಬೇಡವೆನಿಸುವಾಗ ಈ ಒಂದು ಲೋಕದ ಸಾಮ್ರಾಜ್ಯದ ಮಾತೇನು?…………………………………………….
ಲಕ್ಷ್ಮಣಾ! ನನ್ನಂತೆ ಭರತನಿಗೂ ಸಾಮ್ರಾಜ್ಯದ ಸುಖಾಪೇಕ್ಷೆಯಿಲ್ಲ. ಭರತನ ಪರಿಚಯವು ನಿನಗಿಲ್ಲವೇನೋ? ಈವರೆಗೂ ಆತನು ಯಾವುದಾದರೂ ಒಂದು ಅಪ್ರಿಯವಾದುದನ್ನು ಮಾಡಿರುವದುಂಟೇ?’

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಛತ್ರ-ಚಾಮರಾದಿಗಳಿಂದ ರಹಿತನಾಗಿ ಬಂದ ಪ್ರೀತಿಯ ಭರತನನ್ನು ಕಂಡು ಅಕ್ಕರೆಯಿಂದ ಆತನ ಯೋಗಕ್ಷೇಮವನ್ನು ವಿಚಾರಿಸಿದನು. ರಾಜನ ಧರ್ಮ, ಅಮಾತ್ಯರ-ಅಧಿಕಾರಿಗಳ ನಿಯುಕ್ತಿ-ನಿಯೋಜನೆ, ಕಾರ್ಯಾಲೋಚನೆ, ಕಾರ್ಯ ಪದ್ಧತಿ ಇವುಗಳನ್ನು ಹಿತವಚನಗಳಿಂದ ತಿಳಿಸಿ, ಸಂತೈಸಿದನು. ಅಯೋಧ್ಯಾಕಾಂಡ ನೂರನೇ ಸರ್ಗವು ರಾಜ್ಯಸೂತ್ರವನ್ನು ಹೇಗೆ ನಡೆಯಿಸುವುದೆಂಬುದರ ಪಾಠವೇ ಆಗಿದೆ. ಶ್ರೀರಾಮನ ಮುಖದಿಂದ, ಈ ಸಂದರ್ಭದಲ್ಲಿ ಬಂದ ನುಡಿಗಳಿಂದ, ಸಮಾಜ ಮತ್ತು ಸುರಾಜ್ಯ ವ್ಯವಸ್ಥೆಯ ದರ್ಶನವು ಆಗಬಹುದಾಗಿದೆ.
ಆದಾಗ್ಯೂ, ‘ತಮೇವಂ ದುಃಖಿತಂ ಪ್ರೇಕ್ಷ್ಯ,’, ಭರತನು ಇನ್ನೂ ದುಃಖಿತನಾಗಿರುವದನ್ನು ಕಂಡ ಶ್ರೀರಾಮನು, ಭರತನ ದುಃಖವನ್ನು ಪರಿಹರಿಸಲು, ಸಂತೈಸಲು ಹೇಳಿದ ಮಾತುಗಳು,

RELATED ARTICLES  ಶ್ರೀಮತಿ ವಿದ್ಯಾ ದೀವಗಿಯವರ ಬಗ್ಗೆ ಸಂದೀಪ ಭಟ್ಟ ಬರೆದ ಲೇಖನ.

ನಾತ್ಮನಃ ಕಾಮಕಾರೋಽಸ್ತಿ ಪುರುಷೋಽಯಮನೀಶ್ವರಃ|
ಇತಶ್ಚೇತರತಶ್ಚೈನಂ ನಂ ಕೃತಾಂತ ಪರಿಕರ್ಷತಿ||
ರಾಮನ ಈ ಮಾತುಗಳನ್ನು ಕೇಳಿ, ಆಲೋಚಿಸಿ, ಅಳವಡಿಸಿಕೊಂಡರೆ ನಮ್ಮ ದುಃಖವನ್ನೂ ಇವು ಪರಿಹರಿಸುವೆಂಬುದರಲ್ಲಿ ಸಂದೇಹವಿಲ್ಲ. ಇದನ್ನು ಮುಂದೆ ನೋಡೋಣ.