ಮುಂದುವರಿದ ಭಾಗ:

ಇದು ತಂದೆಯಾದವನಿಗೆ ತನ್ನ ಮಕ್ಕಳು ಸಮಾಜದಲ್ಲಿ ತಪ್ಪಿತಸ್ಥರೆಮದು ಯಾರೂ ಕೈ ತೋರಿಸಬಾರದು. ಮಕ್ಕಳು ತಪ್ಪಿತಸ್ಥರಾದರೆ ಮೊದಲು ಹೇಳುವುದು ತಂದೆಯ ಹೆಸರು. ಯಾವತ್ತೂ ತನ್ನ ಹೆಸರಿಗೆ ಮತ್ತು ತನ್ನ ವಂಶಸ್ಥರ ಮೇಲೆ ಕೆಟ್ಟ ಅಭಿಪ್ರಾಯ ಜನಗಳಲ್ಲಿ ಬರಬಾರದು ಎಂದು ಆಲೋಚಿಸುತ್ತಾನೆ. ಈ ರೀತಿಯ ಆಲೋಚನೆ ಬರುವುದು ನೀತಿವಂತ ತಂದೆಯಾಗಿದ್ದಲ್ಲಿ ಮಾತ್ರ ಬರುತ್ತದೆ. ಇಲ್ಲದಿದ್ದರೆ ಮಕ್ಕಳಿಗೆ ಭೋದನೆ ಮಾಡಲು ಹೋಗುವುದಿಲ್ಲ. ಮಕ್ಕಳು ಕೆಟ್ಟ ಹೆಸರು ತಂದರೂ ಅಥವಾ ಒಳ್ಳೆಯ ಹೆಸರು ತಂದರೂ ಮೊದಲು ತಂದೆಯ ಹೆಸರನ್ನು ಹೇಳುವುದು ರೂಢಿ. ಹೆಂಗಸರಾದರೆ ತಾಯಿಯ ಹೆಸರನ್ನು ಹೇಳಬಹುದು.

ಹೆತ್ತವರ ಪ್ರೀತಿ ಆಕಾಶದಷ್ಟು ವಿಶಾಲ ಸಮುದ್ರದಷ್ಟು ಆಳದಂತೆ ಇರುತ್ತದೆ. ಇದನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ಹೆತ್ತವರು ಬಡವರಾಗಲೀ ಅಥವಾ ಶ್ರೀಮಂತರಾಗಲೀ ಪ್ರೀತಿ ಮಾತ್ರ ಒಂದೇ ಇರುತ್ತದೆ. ಇದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.ಹೆತ್ತವರಿಂದ ಮಕ್ಕಳಿಗೆ ಸಂಸ್ಕಾರ ಮನೋಭಾವ ಬೆಳೆಯುತ್ತದೆ. ಹೆತ್ತವರು ಸಂಸ್ಕಾರವಂತರಾದರೆ ಮಕ್ಕಳು ಅದನ್ನೇ ಮುಂದುವರೆಸಿಕೊಂಡು ಹೋಗಬಹುದು. ಅಕಸ್ಮಾತ್ ಕೆಟ್ಟ ಸಹವಾಸ ಮಾಡಿದಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಮನುಷ್ಯರು ಎಲ್ಲರೂ ಸಂಸ್ಕಾರವಂತೇ ಆಗಿರುತ್ತಾರೆ. ಇದು ಎಲ್ಲರಿಗೂ ಹಿರಿಯರಿಂದ ಬಂದಿರುವ ಬಳುವಳಿ. ಕೆಲವರು ಇದಕ್ಕೆ ಅಪವಾದ ಇರಬಹುದು.

RELATED ARTICLES  ತೃಣಕ್ಕೆ ಸಮಾನ ನೀ ಮನುಜ

ತಂದೆ ಏನುಅಭ್ಯಾಸ ಕಲಿತ್ತಿದ್ದಾನೋ ಮಕ್ಕಳು ಸಹ ಅದನ್ನು ಸಉಲಭವಾಗಿ ಕಲಿಯುತ್ತಾರೆ. ಕುಡಿಯುವುದು ಸಿಗರೇಟು ಸೇವನೆ ಇವೆಲ್ಲವೂ ಮಕ್ಕಳಿಗೆ ತನ್ನ ತಂದೆಯೇ ಕಲಿಸಿದಂತೆ ಆಗುತ್ತದೆ. ಈ ರೀತಿಯ ಅಭ್ಯಾಸವನ್ನು ಮಕ್ಕಳು ಒಂದು ರೀತಿಯ ಧೈರ್ಯದಿಂದ ಮಾಡಿಕೊಳ್ಳುತ್ತಾರೆ. ನನ್ನಪ್ಪನೇ ಕಲಿತಿದ್ದಾರೆ ನಾನು ಕಲಿಯುವುದರಲ್ಲಿ ತಪ್ಪಿಲ್ಲ. ಎಂದು ಧೈರ್ಯದಿಂದ ಕಲಿಯುತ್ತಾರೆ. ಆದ್ದರಿಂದ ತಂದೆಯಾದವನು ತನ್ನ ಮಕ್ಕಳ ಮುಂದೆ ಈ ರೀತಿಯ ಅಭ್ಯಾಸಗಳನ್ನು ತೋರ್ಪಡಿಸದಿದ್ದರೆ ಒಳ್ಳೆಯದು. ಅಪ್ಪ ತಾನು ಜೀವನದಲ್ಲಿ ಒಂದು ಮಟ್ಟಕ್ಕೆ ಬಂದು ಕಲಿತಿದ್ದರೆ ಮಕ್ಕಳು ಅಪ್ಪನನ್ನು ನೋಡಿ ಚಿಕ್ಕವಯಸ್ಸಿನಿಂದಲೇ ಕಲಿಯುತ್ತಾರೆ.

RELATED ARTICLES  ಶ್ರೀಗುರು ಸರ್ವತ್ರ ವ್ಯಾಪಿಸಿಕೊಂಡಿದ್ದಾನೆ! ಹೀಗೆಂದು ಪತ್ರ ಮುಖೇನ ತಿಳಿಸಿದರು ಶ್ರೀಧರರು.

ಇದು ಬಹಳ ಅಪಾಯವಾದದ್ದು. ಇದನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುವುದು ಉತ್ತಮ. ತಂದೆಯಾದವನು ಇವುಗಳಿಗೆ ದಾಸನಾಗದಿದ್ದರೆ ಮಕ್ಕಳು ಏನಾದರೂ ಕದ್ದು ಮುಚ್ಚಿ ಅಭ್ಯಾಸ ಮಾಡಿಕೊಂಡಿದ್ದರೆ ತಂದೆಯು ಮಕ್ಕಳನ್ನು ಧೈರ್ಯವಾಗಿ ದಂಡಿಸಬಹುದು. ಆದರೆ ಈಗಿನ ಕಾಲದಲ್ಲಿ ಕೆಲವು ಸಿನಿಮಾಗಳಲ್ಲಿ ಅಪ್ಪ ಮಕ್ಕಳು ಒಟ್ಟಿಗೆ ಕುಳಿತು ಕುಡಿಯುತ್ತಿರುವ ದೃಶ್ಯವನ್ನು ತೋರಿಸುತ್ತಾರೆ. ಇದು ಸಮಾಜದ ಮೇಲೆ ಅಡ್ಡಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

ಮುಂದುವರಿಯುವುದು……..