ಮುಂದುವರಿದ ಭಾಗ:
ಹೆತ್ತವರ ಪ್ರೀತಿಯಂತೆ ತನ್ನ ಒಡಹುಟ್ಟಿದವರ ಪ್ರೀತಿಯೂ ಬೆಳೆಯುತ್ತದೆ. ಈಗಿನ ಕಾಲದಲ್ಲಿಒಬ್ಬ ಮಗ ಅಥವಾ ಮಗಳಿದ್ದಲ್ಲಿ ಇಂತಹ ಪ್ರೀತಿ ಬರುವುದೇ ಇಲ್ಲ. ಇಬ್ಬರು ಮಕ್ಕಳಿದ್ದಲ್ಲಿ ಒಡಹುಟ್ಟಿದವರ ಪ್ರೀತಿ ದೊರಕಬಹುದು.ಮಕ್ಕಳು ಶಾಲೆಗೆ ಹೋದಾಗ ಚೆನ್ನಾಗಿ ಓದಿ ಬುದ್ದಿವಂತರಾದರೆ ಶಿಕಷಕರಿಗೆ ತಮ್ಮ ವಿದ್ಯಾರ್ಥಿಗಳ ಮೇಲೆ ಅಪಾರವಾದ ಪ್ರೀತಿ ಅಭಿಮಾನ ಬರುತ್ತದೆ. ರಾಜ್ಯಕ್ಕೆ ಮೊದಲಿಗನಾದರೆ ನನ್ನ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇವೆಲ್ಲಾ ಭಾವನೆಗಳು ಮನುಷ್ಯನ ಸಂಬಂಧಗಳಿಂದ ಉದ್ಭವವಾಗುತ್ತವೆ. ಇವೆಲ್ಲಾ ಭಾವನೆಗಳು ಹೋಗುವ ಅಂದರೆ ಮರೆತು ಹೋಗುವ ಅರ್ಥಾತ್ ಹೊರಟು ಹೋಗುವ ಸಂಭಗಳು ಇಲ್ಲದಿಲ್ಲ. ಕಾರಣಗಳು ಏನಾದರೂ ಇರಬಹುದು ಬೇರೆಯವರ ನಡವಳಿಕೆಯಿಂದ ಮನಸ್ಸು ಕಲುಷಿತಗೊಂಡರೆ ಎಂತಹ ಒಳ್ಳೆಯ ಭಾವನೆಗಳಿದ್ದರೂ ಸಹ ಕಳೆದುಕೊಳ್ಳಬಹುದು. ಯಾರಾದರೂ ಒಬ್ಬರ ಮೇಲೆ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದು, ಆ ವ್ಯಕ್ತಿಯು ವಿಶ್ವಾಸ ದ್ರೋಹ ಮಾಡಿದರೆ ಆಗ ಆ ವ್ಯಕ್ತಿಯನ್ನು ಕುರಿತು ನಿನ್ನಮೇಲೆ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದೆ ಒಳ್ಳೆಯ ಸ್ನೇಹಿತ ಸಿಕ್ಕಿದನೆಂದು ಅಭಿಮಾನದ ಜೊತೆಗೆ ಗೌರವ ಇತ್ತು ಬೇರೆಯವರ ಮುಂದೆ ನನಗೆ ಒಳ್ಳೆಯ ಸ್ನೇಹಿತ ಸಿಕ್ಕಿದ್ದಾನೆಂದು ಹೆಮ್ಮೆಯಿಂದ ಹೇಳುತ್ತಿದ್ದೆ. ಆದರೆ ಈಗ ನಿನ್ನ ಮೇಲಿದ ಎಲ್ಲಾ ಒಳ್ಳೆಯ ಭಾವನೆಗಳು ಕಳೆದುಹೋಗಿದೆ ಎಂದು ಹೇಳಬಹುದು.
ಒಂದು ಸಲ ಒಳ್ಳೆಯ ಭಾವನೆ ಹೋಗಿ ಕೆಟ್ಟ ಅಭಿಪ್ರಾಯ ಬಂದರೆ ಪುನಃ ಅಂತಹ ವ್ಯಕ್ತಿಯ ಮೇಲೆ ಒಳ್ಳೆಯ ಭಾವನೆ ಬರುವುದೇ ಇಲ್ಲ. ಬೇರೆ ಎಲ್ಲರೂ ಒಬ್ಬ ವ್ಯಕ್ತಿಯನ್ನು ಒಳ್ಳೆಯ ವ್ಯಕ್ತಿ ಎಂದು ಹೇಳಿದರೂ ಸಹ ಅವರ ಮುಂದೆ ನನಗೆ ಗೊತ್ತು ಆ ವ್ಯಕ್ತಿಯ ಯೋಗ್ಯತೆ ನೀನೇನು ಹೇಳಬೇಡ ಎಂದು ವಾದಿಸಬಹುದು.
ಒಳ್ಳೆಯ ಭಾವನೆಗಳು ಹಲವಾರು ಕಾರಣಗಳಿಂದ ಹೊರಟು ಹೋಗುತ್ತವೆ. ಸ್ವಾರ್ಥದಿಂದ ಅಹಂಕಾರ ಪಡುವುದರಿಂದ ಮೋಸ ಮಾಡುವುದರಿಂದ ಕರ್ತವ್ಯ ಲೋಪ ಮಾಡುವುದರಿಂದ ನಂಬಿಕೆ ದ್ರೋಹ ಮಾಡುವುದರಿಂದ ದ್ವೇಷದಿಂದ ಹಾಗೂ ಹೆತ್ತವರನ್ನು ಕಡೆಗಣಿಸುವದರಿಂದ ಹಾಗೂ ಇನ್ನೂ ಅನೇಕ ಕಾರಣಗಳಿಂದ ಭಾವನೆಗಳು ಕಳೆದುಹೋಗುತ್ತವೆ.
ಮುಂದುವರಿಯುವುದು……..