ಮುಂದುವರಿದ ಭಾಗ:

ಮೊದಲಿಗೆ ಹೆತ್ತವರು ತಮ್ಮ ತಮ್ಮ ಮಕ್ಕಳ ಮೇಲಿಟ್ಟಿರುವ ಭಾವನೆಗಳುನ್ನು ಕಳೆದುಕೊಳ್ಳುತ್ತಾರೆಂದರೆ ಅದಕ್ಕೆ ಮೂಲ ಕಾರಣ ಹೆತ್ತವರ ಮೇಲಿನ ನಿರ್ಲಕ್ಷ ಹಾಗೂ ಕಿರ್ತವ್ಯ ಲೋಪ ಎಂದರೆ ತಪ್ಪಾಗಲಾರದು. ಹೆತ್ತವರಿಗೆ ಮಕ್ಕಳ ಮೇಲೆ ಅಪಾರವಾದ ಪ್ರೀತಿ ಮತ್ತು ಹೆಮ್ಮೆ ಇರುತ್ತದೆ. ಆದರೆ ಮಕ್ಕಳ ನಡವಳಿಕೆಗಳಿಂದ ದಿನಕಳೆದಂತೆ ಒಂದೊಂದೇ ಭಾವನೆಗಳು ಕಳೆದುಹೋಗುತ್ತಾ ಇರುತ್ತದೆ. ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸ ಹೊಂದಿದ್ದು ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದರೆ ಮಕ್ಕಳು ಯಾವ ಪದವಿಯಲ್ಲಿದ್ದರೇನು? ಮಕ್ಕಳ ಮೇಲಿನ ಹೆಮ್ಮೆ ಮತ್ತು ಅಭಿಮಾನ ಕಡಿಮೆಯಾಗುತ್ತದೆ.

ಇನ್ನೂ ನಿರ್ಲಕ್ಷಿಸಿ ಹೆತ್ತವರನ್ನು ಆಸ್ತಿ ವಿಚಾರಗಳಿಂದ ಹಿಂಸಿಸುತ್ತಾ ಇದ್ದರೆ ಮತ್ತು ಸರಿಯಾಗಿ ನೋಡಿಕೊಳ್ಳಲಾಗದೆ ವೃದ್ದಾಶ್ರಮಕ್ಕೆ ಸೇರಿಸಿದರೆ ಆಗ ನಮ್ಮ ಮಕ್ಕಳು ಎಂದು ಹೇಳಿಕೊಳ್ಳಬಹುದೇ ಹೊರತು ಮಕ್ಕಳ ಮೇಲಿನ ಪ್ರೀತಿ ಹೊರಟು ಹೋಗುತ್ತದೆ. ಏಕೆ ನಮ್ಮ ಹೊಟ್ಟೆಯಲ್ಲಿ ಹುಣ್ಣು ಹುಟ್ಟಿದಂತೆ ಹುಟ್ಟಿದೆ ನೀನು? ಈ ರೀತಿಯಾಗುತ್ತೀಯೆಂದು ನನಗೆ ಮೊದಲೇ ತಿಳಿದಿದ್ದರೆ ನೀನು ಮಗುವಾಗಿದ್ದಾಗಲೇ ಏನಾದೂ ಮಾಡುತ್ತಿದ್ದೆ ಎಂದು ಶಪಿಸಬಹುದು. ಆ ರೀತಿ ಹೇಳಬೇಕಾದರೆ ಆ ಹೆತ್ತ ಕರುಳು ಎಷ್ಟು ವೇದನೆ ಅನುಭವಿಸರಬೇಕು? ಅಂತಹ ಸನ್ನಿವೇಶದಲ್ಲಿ ಮಕ್ಕಳು ಎಂಬ ಪ್ರೀತಿ ಅಭಿಮಾನ ಎಲ್ಲವೂ ಕಳೆದುಹೋಗಿರುತ್ತದೆ.

RELATED ARTICLES  ಯೋಗ ಭಾರತೀಯ ಋಷಿಮುನಿಗಳ ಶ್ರೇಷ್ಠ ಕೊಡುಗೆ

ಹೆತ್ತವರ ಭಾವನೆಗಳು ಮಕ್ಕಳ ನಡೆವಳಿಕೆಗಳಿಂದ ಕಡಿಮೆಯಾಗುತ್ತಾ ಹೋಗಿ ಕಡೆಗೆ ಅತೀವ ವೇದನೆಯಿಂದ ಭಾವನೆಗಳನ್ನು ಎಲ್ಲಾ ಭಾವನೆಗಳನ್ನು ಕಳೆದುಕೊಳ್ಳಬಹುದು. ಹೆತ್ತವರಿಗೆ ಮಕ್ಕಳ ಮೇಲಿನ ಪ್ರೀತಿಯು ಮಗು ತಾಯಿಯ ಹೊಟ್ಟೆಯಲ್ಲಿರುವಾದಾಗಿನಿಂದಲೇ ಹೃದಯಾಂತರಾಳದಿಂದ ಬಂದಿರುವುದರಿಂದ ಪ್ರೀತಿಯ ಭಾವನೆಗಳು ಹೋಗುವುದು ಬಹಳ ಕಷ್ಟ. ಮನುಷ್ಯರು ಒಬ್ಬರನೊಬ್ಬರು ಎಷ್ಟೇ ಅನ್ಯೋನ್ಯವಾಗಿದ್ದರೂ ಎಷ್ಟೇ ಪ್ರೀತಿ ಅಭಿಮಾನ ಹೊಂದಿದ್ದರೂ ಸಹ ಒಂದು ಸಣ್ಣ ತಪ್ಪುಗ್ರಹಿಕೆಯಿಂದ ಅರೆಕ್ಷಣದಲ್ಲಿ ಹೊರಟು ಹೋಗಬಹುದು.

RELATED ARTICLES  ಬಾಳನೌಕೆ

ದಂಪತಿಗಳು ವಿವಾಹವಾದಾಗಿನಿಂದ ಪ್ರೀತಿಯಿಂದ ಅನ್ಯೋನ್ಯವಾಗಿದ್ದರೂ ಒಂದು ಸಣ್ಣ ಅನುಮಾನ ಇಬ್ಬರ ಮನಸ್ಸಿನಲ್ಲಿ ಒಳಹೊಕ್ಕಿದರೆ ಒಬ್ಬರನೊಬ್ಬರು ಅನುಮಾನದ ರೀತಿಯಲ್ಲಿ ನೋಡಲಾರಂಭಿಸುತ್ತಾರೆ. ಗಮಡನ ಚಟುವಟಿಕೆ ಮೇಲೆ ಹೆಂಡತಿ ಹಾಗೂ ಹೆಂಡತಿ ನಡವಳಿಕೆ ಮೇಲೆ ಗಂಡನು ಕಣ್ಣಿಟ್ಟು ಸೂಕ್ಷ್ಮವಾಗಿ ನೋಡುತ್ತಾರೆ. ಅನುಮಾನವು ನಿಜವಾದರೆ ಪರಸ್ಪರ ಹೊಂದಿದ್ದ ಪ್ರೀತಿಯ ಭಾವನೆಗಳು ಹೃದಯದಿಂದ ಕಳೆದುಹೋಗುತ್ತದೆ.

ಮುಂದುವರಿಯುವುದು……..