ಮುಂದುವರಿದ ಭಾಗ:

ಮನುಷ್ಯ ಇನ್ನೊಬ್ಬರಲ್ಲಿ ವಿಶ್ವಾಸ ಗಳಿಸಿಕೊಳ್ಳುವುದು ಬಹಳ ಕಷ್ಟಪಡಬೇಕಾಗುತ್ತದೆ. ಮನುಷ್ಯ ಸಂಘಜೀವಿ ಯಾಗಿರುವುದರಿಂದ ಸ್ನೇಹಿತರು ಅವಶ್ಯಕವಾಗಿ ಬೇಕು. ಇದಕ್ಕಾಗಿ ಬೇರೊಬ್ಬರಲ್ಲಿ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಾನೆ. ಮನುಷ್ಯರಲ್ಲಿ ಪ್ರೀತಿ ಭಾವನೆಗಳು ಒಂದು ನಂಬಿಕೆ ಮೇಲೆ ನಡೆದುಕೊಂಡು ಹೋಗುತ್ತಿರುತ್ತದೆ. ನಂಬಿಕೆಗೆ ಚ್ಯುತಿ ಬಂದಲ್ಲಿ ಭಾವನೆಗಳು ಕಳೆದುಹೋಗುತ್ತದೆ. ಮನುಷ್ಯ ಯಾರಾದರೊಬ್ಬರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನದ ಭಾವನೆಗಳು ಯಾವುದಾದರೂ ಕಾರಣಗಳಿಂದ ಹೊರಟು ಹೋದರೆ ಪ್ರೀತಿ ಭಾವನೆ ಹೊಂದಿದ್ದ ಹೃದಯವು ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಹೃದಯವೇ ಶೂನ್ಯವಾದಂತೆ ಆಗುತ್ತದೆ. ಮನುಷ್ಯ ಯಾರಾದರೂ ಬೇರೆ ವ್ಯಕ್ತಿಯ ಸ್ನೇಹ ಮಾಡಿದ್ದು, ಅದು ಎಷ್ಟೇ ಹಳೆಯದಾಗಿದ್ದರೂ ಯಾವುದಾದರೂ ಕಾರಣಕ್ಕೆ ಹೊರಟು ಹೋದರೆ ಬೇರೆ ಸ್ನೇಹಿತರು ಸಿಗುವವರೆಗೆ ಮಾತ್ರ ಬೇಸರವಾಗ ಬಹುದು.

ಮನಸ್ಸಿನಲ್ಲಿ ಒಳ್ಳೆಯ ಸ್ನೇಹಿತ ಎಂದುಕೊಂಡಿದ್ದೆ ಕೈ ಕೊಟ್ಟು ಹೋದ ಎಂದು ಸುಮ್ಮನಾಗಬಹುದು. ಆದರೆ ಸಂಬಂಧಗಳಲ್ಲಿರುವ ಪ್ರೀತಿಯ ಭಾವನೆಗಳು ಹೊರಟು ಹೋದರೆ ಅದು ಯಾರು ಬಂದರೂ ಆ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ಹೆತ್ತವರಿಗೆ ಮಕ್ಕಳ ಮೇಲಿನ ಪ್ರೀತಿಯ ಭಾವನೆಗಳು ಹೊರಟು ಹೋದರೆ ಆ ಭಾವನೆಗಳನ್ನು ಹೆತ್ತವರ ಹೃದಯದಲ್ಲಿ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ನೋವಿನಿಂದ ತುಂಬಿ ಆ ಹೃದಯ ಭಾರವಾಗಿರುತ್ತದೆ. ಈ ನೋವನ್ನು ಹೋಗಲಾಡಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಪುನಃ ಮಕ್ಕಳೇ ಬಂದರೂ ಮೊದಲಿನ ಭಾವನೆ ಇರುವುದಿಲ್ಲ. ಕಡೇಗಾಲಕ್ಕಾದರೂ ಬಂದರೆಂಬ ಸಮಾಧಾನದ ಭಾವನೆ ಇರುತ್ತದೆ. ಮೊದಲಿನಂತೆ ಮಾತನಾಡಲು ಇಬ್ಬರಿಗೂ ಹಿಂಜರಿಕೆಯಾಗುತ್ತದೆ. ಕಳೆದುಹೋದ ಭಾವನೆ ಪುನಃ ಮರುಕಳಿಸುವುದಿಲ್ಲ. ಈ ಮೊದಲು ಇದ್ದ ಪ್ರೀತಿಯ ಭಾವನೆಯಿಂದ ಹೆತ್ತವರಲ್ಲಿ ಜೋರಾಗಿ ಮಾತನಾಡಿ, ಹಠಮಾಡಿ ತನ್ನ ಇಚ್ಛೆಯನ್ನು ಪೂರೈಸಿಕೊಳ್ಳುತ್ತಿದ್ದ ಮಕ್ಕಳ ಮನಸ್ಸು ಪುನರಾಗಮನದ ತರುವಾಯ ಅಷ್ಟು ಸ್ಪಂದಿಸುವುದಿಲ್ಲ.

RELATED ARTICLES  ಪಾದಯಾತ್ರೆ ಮೂಲಕ ಮತ ಯಾಚಿಸಿದ ಸೂರಜ್ ನಾಯ್ಕ ಸೋನಿ.

ಹೆತ್ತವರು ಸಹ ಮಕ್ಕಳ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಜೋರಾಗಿ ಮಾತನಾಡುತ್ತಿದ್ದೂ ನಂತರ ಮಕ್ಕಳ ಮುಂದೆ ಆ ರೀತಿ ನಡೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಜೋರಾಗಿ ಮಾತನಾಡಿದರೆ ಎಲ್ಲಿ ಪುನಃ ಮಕ್ಕಳು ಹೊರಟುಹೋಗುತ್ತಾರೋ ಎಂಬ ಆತಂಕ ಮನೆ ಮಾಡಿರುತ್ತದೆ. ಮಕ್ಕಳು ವೈಮನಸ್ಸಿನಿಂದ ಮನೆ ಬಿಟ್ಟು ಹೆತ್ತವರಿಂದ ದೂರವಾಗಿ ಹೋಗಿದ್ದು, ನಂತರದ ದಿನಗಳಲ್ಲಿ ಆ ಮಕ್ಕಳಿಗೆ ಯಾರಾದರೂ ಹಿತೈಷಿಗಳು ಅವರ ಬಳಿ ಹೆತ್ತವರ ಬಗ್ಗೆ ಬುದ್ದಿವಾದವನ್ನು ಹೇಳಿ, ಹೆತ್ತವರ ಕಡೇಗಾಲದಲ್ಲಿ ಮಕ್ಕಳು ಅವರ ಬಳಿ ಇದ್ದು, ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಹಾಗೆಯೇ ಅದು ಒಳ್ಳೆಯ ಸಂಸ್ಕಾರ ಹಾಗೂ ಕರ್ತವ್ಯವೂ ಆಗಿರುತ್ತದೆ ಹೆತ್ತವರನ್ನು ಅವರ ಕಡೇಗಾಲದಲ್ಲಿ ನೋಯಿಸಬಾರದು.

RELATED ARTICLES  ಕಳೆದುಹೋದ ಎಳೆಯ ದಿನಗಳು ಭಾಗ ೧೬

ಅತ್ಮಸಾಕ್ಷಿಗೆ ವಿರುದ್ದವಾದದ್ದು ವಯಸ್ಸಾದ ಹೆತ್ತವರ ಸೇವೆ ಮಾಡಿ ಅವರ ಆಶೀರ್ವಾದ ಪಡೆಯುತ್ತಾ ಇದ್ದರೆ ಮುಂದೆ ನಿಮ್ಮ ಮಕ್ಕಳಿಗೂ ಶ್ರೇಯಸ್ಸಾಗುತ್ತದೆ ಆದಕಾರಣ ಯಾವುದೇ ಕಾರಣಕ್ಕೂ ಹೆತ್ತವರನ್ನು ಅವರ ವಯಸ್ಸಾದ ಕಾಲದಲ್ಲಿ ಒಬ್ಬಂಟಿಯಾಗಿ ಬಿಡಬೇಡಿ ಅವರ ಜೊತೆಯಲ್ಲಿದು, ಅವರ ಯೋಗಕ್ಷೇಮವನ್ನು ನೋಡಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ವೃದ್ದಾಶ್ರಮಕ್ಕೆ ಬಿಡದೆ ನೀವೇ ಅವರ ಅಗತ್ಯ ಸೇವೆ ಮಾಡರಿ ಎಂದು ಬುದ್ದಿವಾದ ಹೇಳಿ ಮನೆಬಿಟ್ಟು ಹೋಗಿದ್ದ ಮಕ್ಕಳನ್ನು ಪುನಃ ಮನೆಗೆ ವಾಪಸ್ ಬರುವಂತೆ ಮಾಡಿದರೆ ಆಗಿನ ಸನ್ನಿವೇಶದಲ್ಲಿ ಮಕ್ಕಳು ಮನೆಗೆ ಬಂದರೆ ಎಲ್ಲವೂ ಮೌನವಾಗಿರುತ್ತದೆ. ಯಾವ ಮಾತು ಅಡಿದರೆ ಏನು ಪರಿಣಾಮ ಬೀರುತ್ತದೋ ಎಂದು ಹೆತ್ತವರು ಮತ್ತು ಮಕ್ಕಳು ಪರಸ್ಪರ ಮಾತನಾಡಲು ಹಿಂಜರಿಯಬಹುದು. ಹೆತ್ತವರ ಕಡೇಗಾಲದಲ್ಲಿ ಮನೆಬಿಟ್ಟು ಹೋಗಿದ್ದ ಮಕ್ಕಳು ಪುನಃ ಬಂದರಲ್ಲಾ ಹೇಗೋ ಎರಡು ದಿನ ಕಾಲವನ್ನು ನೂಕಿ ಕೊನೆಯುಸಿರೆಳೆಯೋಣವೆಂದು ದೆವರನ್ನು ಸ್ಮರಿಸುತ್ತಾ ಸಮಾಧಾನದಿಂದ ಇರುತ್ತಾರೆ. ಮಕ್ಕಳು ಬೇರೆಯವರ ಹಿತವಚನ ಕೇಳಿ ಮನೆಗೆ ಬಂದು ಮನಸ್ಸಿಲ್ಲದಿದ್ದರೂ ಹೆತ್ತವರನ್ನು ನೋಡಿಕೊಳ್ಳುತ್ತಾ ಹೆತ್ತವರ ಮನಸ್ಸಿಗೆ ಸಮಾಧಾನ ತರಬಹುದು.

ಮುಂದುವರಿಯುವುದು……..