ಮುಂದುವರಿದ ಭಾಗ:

ಹೆತ್ತವರು ಮಕ್ಕಳ ಮೇಲಿನ ಪ್ರೀತಿ ಬಾವನೆಗಳನ್ನು ಬಲವಂತದಿಂದ ಕಳೆದುಕೊಳ್ಳುವಂತೆ ಮಕ್ಕಳು ಹೆತ್ತವರ ಮೇಲಿನ ಭಾವನೆಗಳನ್ನು ಹಲವಾರು ಕಾರಣದಿಂದ ಬೇಗನೇ ಕಳದುಕೊಳ್ಳುತ್ತಾರೆ. ಮಗುವಾದಾಗಿನಿಂದ ದೊಡ್ಡವರಾಗುವವರೆಗೆ ಪ್ರೀತಿಯಿಂದ ಸಾಕಿ ಸಲಹಿರುವುದನ್ನು ಮರೆತು ಬಿಡಬಹುದು. ಹೆತ್ತವರು ತಾವು ಸರಿಯಾಗಿ ತಿನ್ನದೆ ಬೆಳೆಯುವ ಮಕ್ಕಳೆಂದು ಎಲ್ಲವನ್ನೂ ನೀಡುತ್ತಾ ಕಷ್ಟಪಟ್ಟು ಸಾಕಿರುವುದು ಮರೆತುಹೋಗಿರುತ್ತದೆ. ಯಾವುದೋ ಮೋಹಕ್ಕೆ ಒಳಗಾಗಿ ಹೆತ್ತವರನ್ನು ಕಡೆಗಣಿಸಬಹುದು. ಹೆತ್ತವರಿಗೆ ಮಕ್ಕಳ ಮೇಲಿನ ಮಮಕಾರ ಅಷ್ಟು ಸುಲಭವಾಗಿ ಹೋಗುವುದಿಲ್ಲ.

ಎನು ಮಾಡಿದರೂ ನಮ್ಮ ಮಕ್ಕಳೇ ಅಲ್ಲವೇ ಬುದ್ದಿ ಬಂದಮೇಲೆ ಸರಿಹೋಗಬಹುದು ಎಂಬ ಆಶಾಭಾವನೆ ಹೊಂದಿರುತ್ತಾರೆ. ಮಕ್ಕಳು ಹೇಳಿದ ಮಾತನ್ನು ಕೇಳದೆ ಹೆತ್ತವರ ವಿರುದ್ದವಾಗಿ ಹೋಗುತ್ತಿದ್ದರೂ ಸಹ ವಿವಾಹವಾದ ಮೇಲೆ ಸಂಸಾರದ ಜವಾಬ್ದಾರಿ ಬರುತತದೆ, ನಂತರ ಸರಿಹೋಗಬಹುದು ಎಂದು ವಿವಾಹವನ್ನು ಮಾಡುತ್ತಾರೆ. ಮನೆಗೆ ಬರುವ ಸೊಸೆ ಒಳ್ಳೆಯವಲಾಗಿದ್ದರೆ ಗಂಡ ಇವಳ ಮಾತು ಕೇಳುವಂತಿದ್ದರೆ ಗಂಡನಿಗೆ ಬುದ್ದಿ ಹೇಳಿ ಕಷ್ಟಪಟ್ಟು ಹೆತ್ತವರ ಮೇಲೆ ಪ್ರೀತಿ ಬರುವಂತೆ ಮಾಡಬಹುದು. ಇದಕ್ಕೆ ವಿರುದ್ದವಾಗಿ ಮನೆಗೆ ಬಂದ ಸೊಸೆಯೂ ಸಹ ಗಂಡನ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಇದ್ದು ಬೆಂಕಿಗೆ ತುಪ್ಪ ಸುರಿಯುವ ರೀತಿಯಲ್ಲಿ ನಡೆದುಕೊಂಡರೆ ಆಗ ಮಕ್ಕಳ ಅಸಲಿ ಆಟ ಪ್ರಾರಂಭವಾಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಹೆತ್ತವರು ಎಷ್ಟೇ ಆಸ್ತಿ ಮಾಡಿದ್ದರೂ ಅಥವಾ ಮಾಡದೇ ಇದ್ದರು ಅವರ ಹೃದಯ ಮಕ್ಕಳಿಂದ ಬಯಸುವುದು ಒಂದೇ ಆಸೆ. ಮಕ್ಕಳು ತಮ್ಮನ್ನು ಬೇರೆ ಯಾರ ಆಶ್ರಯಕ್ಕೂ ಒಳಪಡಿಸದೆ ತಮ್ಮ ಜೊತೆಯಲ್ಲಿದ್ದು, ಸಾಯುವಾಗ ಬಾಯಲ್ಲಿ ನೀರು ಬಿಡಲೆಂದು ಹಾಗೂ ಸತ್ತಮೇಲೆ ತಮ್ಮ ಮಕ್ಕಳೇ ಎಲ್ಲಾ ಕಾರ್ಯ ಮಾಡಲೆಂದು ಬಯಸುತ್ತಾರೆ. ಜೊತೆಗೆ ಇರುವ ಆಸ್ತಿಯು ಬೇರೆಯವರ ಪಾಲಾಗದಂತೆ ಮಕ್ಕಳಿಗೆ ಜೋಪಾನ ಮಾಡಬೇಕೆಂಬುದೇ ಅವರ ಹೆಬ್ಬಯಕೆಯಾಗಿರುತ್ತದೆ.

RELATED ARTICLES  ಚಿಂತನ -ಮಂಥನ 4 - ಆಹಾರ

ಹೆತ್ತವರಿಗೆ ಮಕ್ಕಳ ಮೇಲಿನ ಪ್ರೀತಿ ಹೋಗಲು ಎಷ್ಟು ಕಷ್ಟವಾಗುತ್ತದೋ ಇದಕ್ಕೆ ವಿರುದ್ದವಾಗಿ ಮಕ್ಕಳಿಗೆ ಹೆತ್ತವರ ಮೇಲಿನ ಪ್ರೀತಿ ಬಹುಬೇಗನೇ ಹೊರಟು ಹೋಗುತ್ತದೆ. ಮಕ್ಕಳಿಗೆ ತಮ್ಮ ಹೆತ್ತವರ ಮೇಲೆ ಪ್ರೀತಿ ಹೋಗಲು ಬಹುಮುಖ್ಯ ಕಾರಣ ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲವೆಂದು ಮತ್ತು ತನ್ನಿಚ್ಛೆಯಂತೆ ವಿವಾಹ ಮಾಡಿಸಿಲ್ಲವೆಂದು ಮತ್ತು ತಂದೆಯದವನಿಗೆ ಪತ್ನಿ ಅನಿರೀಕ್ಷಿತವಾಗಿ ಅಸುನೀಗಿದಾಗ ಮಕ್ಕಳು ಇನ್ನೂ ಚಿಕ್ಕವರಿದ್ದರೆ ಎರಡನೆ ವಿವಾಹವಾಗಿ ಆ ಮಲತಾಯಿಯು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ಮತ್ತು ಕೆಲವು ಹೆತ್ತವರಿಗೆ ಆದಾಯ ಯಾವುದೂ ಇಲ್ಲದಿರುವಾಗ ಮಕ್ಕಳೇ ತಮ್ಮ ಸಂಬಳದಿಂದ ದುಡಿದು ಹಾಕಬೇಕಾದ ಸಂದರ್ಭಗಳಲ್ಲಿ, ಮಕ್ಕಳನ್ನು ಹೆತ್ತವರು ಬೇರೆಯವರ ಎದುರಿಗೆ ಹೀಯಾಳಿಸಿದಾಗ, ಇನ್ನೂ ಅನೇಕ ಕಾರಣಗಳಿಂದ ಹೆತ್ತವರನ್ನು ದೂಷಿಸಲು ಹಾಗೂ ದ್ವೇಷಿಸಲು ಪ್ರಾರಂಭಿಸುತ್ತಾರೆ.

ಮುಂದುವರಿಯುವುದು……..