ಮುಂದುವರಿದ ಭಾಗ:

ಕೆಲವೊಮ್ಮೆ ಯಾವುದು ಸತ್ಯ? ಯಾವುದು ಮಿಥ್ಯ? ಎಂದು ತಿಳಿಯದೆ ವಿನಾ ಕಾರಣ ಹೆತ್ತವರ ಮೇಲಿನಪ್ರೀತಿ ಕಡಿಮೆಯಾಗುತ್ತಾ ಬರುತ್ತದೆ. ಹೆತ್ತವರ ಮೇಲಿನ ಅಸಮಾಧಾನದ ಕಂದಕ ದಿನಕಳೆದಂತೆ ದೊಡ್ಡದಾಗುತ್ತಾ ಹೋಗುತ್ತದೆ. ಹೆತ್ತವರು ಕಂದಕವನ್ನು ಮುಚ್ಚಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಒಪ್ಪದೆ ಕಡೆಯಲ್ಲಿ ಹೆತ್ತವರು ಇಹಲೋಕ ತ್ಯಜಿಸಿದ ಮೇಲೆ ಸತ್ಯದ ಅರಿವಾಗಿ ಪಶ್ಚಾತ್ತಾಪ ಪಡುತ್ತಾರೆ. ಪಶ್ಚಾತ್ತಾಪ ಪಡದೆ ಇರುವವರೂ ಸಹ ಇರಬಹುದು.

ಹೆತ್ತವರ ಮತ್ತು ಗಂಡು ಮಕ್ಕಳ ಪ್ರೀತಿಯ ಭಾವನೆಗಳು ಅನೇಕ ಕಾರಣಗಳಿಂದ ಪರಸ್ಪರ ಕಳೆದುಹೋಗಬಹುದು. ಆದರೆ ಹೆತ್ತವರು ಮತ್ತು ಹೆಣ್ಣು ಮಕ್ಕಳ ಭಾವನೆಗಳು ಅವರುಗಳು ಬುದಕಿರುವ ತನಕವೂ ಕಳೆದು ಹೋಗುವುದಿಲ್ಲ ಎನ್ನಬಹುದು. ಪರಸ್ಪರ ಭಾವನೆಗಳು ಹೋಗುವುದಕ್ಕೆ ಕಾರಣಗಳೇ ಇರುವುದಿಲ್ಲ. ಎಷ್ಟೇ ಪ್ರಭಲ ಕಾರಣಗಳಿದ್ದರೂ ನಮ್ಮಮಗಳಲ್ಲವೇ ಎಂಬ ಮನೋಭಾವ ಇರುತ್ತದೆ. ಅಮ್ಮ ಮಗಳ ಬಾಂಧವ್ಯ ಅಮರ ಎಂದೇ ಹೇಳಬಹುದು. ಒಂದು ವೇಳೆ ಯಾವುದಾದರೂ ವಿಷಯದಲ್ಲಿ ಕೋಪಬಂದರೂ ದಿನ ಕಳೆದಂತೆ ಮಗಳೆಂಬ ವಾಂಛಲ್ಯ ಬಂದಿರುತ್ತದೆ.

RELATED ARTICLES  ಸ್ನೇಹ (ಕವನ)

ಹೆಣ್ಣು ಮಕ್ಕಳು ತಮ್ಮ ತಮ್ಮ ಗಂಡನ ಮನೆಯಲ್ಲಿದ್ದರೂ ತವರಿನದೇ ಚಿಂತೆಯಾಗಿರುತ್ತದೆ. ಮದುವೆಗೆ ಮೊದಲು ತವರಿನಲ್ಲಿದ್ದಾಗ ಹೆಚ್ಚಾಗಿ ಹೆತ್ತವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದು ಕಾಲ ಕಾಲಕ್ಕೆ ಅವರಿಗೆ ಕಾಫಿ, ತಿಂಡಿ ಊಟ ಮಾತ್ರೆಗಳನ್ನು ಕೊಡುವುದಿದ್ದರೆ ಸರಿಯಾದ ಸಮಯಕ್ಕೆ ಜ್ಞಾಪಿಸಿಕೊಂಡು ಕೊಡುತ್ತಿದ್ದದ್ದೇ ರೂಢಿ ಮಾಡಿಕೊಂಡಿದ್ದರೆ ಗಂಡನ ಮನೆಗೆ ಬಂದ ನಂತರವೂ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುತ್ತಿದ್ದಾರೆಯೋ ಇಲ್ಲವೋ ಎಂದು ಮಾತ್ರೆಗಳನ್ನು ತಎಗೆದುಕೊಳ್ಳದಿದ್ದರೆ ಅದನ್ನು ಸಹ ಜ್ಞಾಪನ ಮಾಡಿಕೊಂಡು ಹೊಸದರಲ್ಲಿ ಫೋನ್ ಮಾಡಿ ವಿಚಾರಿಸಿಕೊಳ್ಳುವುದುಂಟು.

RELATED ARTICLES  ಜಿಗಿಯುವ ಮುನ್ನ ಜಾಗರೂಕತೆ ಇರಬೇಕು ಎಂದರು ಶ್ರೀಧರರು.

ಹಲವಾರು ವರ್ಷಗಳ ನಂತರ ಕ್ರಮೇಣ ಇವುಗಳ ನೆನಪು ಕಡಿಮೆಯಾದರೂ ಅಂದರೆ ಕಾಲ ಕಾಕ್ಕೆ ಎಲ್ಲವನ್ನು ತೆಗೆದುಕೊಳ್ಳುತ್ತಿದ್ದಾರೆಂದು ಅವರಿಂದ ಮನದಟ್ಟು ಮಾಡಿಕೊಂಡು ನಂತರದ ದಿನಗಳಲ್ಲಿ ಆ ವಿಚಾರಗಳನ್ನು ಮರೆಯುತ್ತಾ ಬರಬಹುದು. ಆದರೂ ಯಾವ ಸಮಯದಲ್ಲಾದರೂ ಫೋನ್ ಮಾಡಿದರೂ ಆಗಲೂ ತಿಂಡಿ ಊಟ ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುತ್ತಾರೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಬಹುದು.

ಮುಂದುವರಿಯುವುದು……..