ಮುಂದುವರಿದ ಭಾಗ:

ಹೆಣ್ಣು ಮಕ್ಕಳಿಗೆ ತಮ್ಮ ಹೆತ್ತವರ ಮೇಲೆ ಆಸ್ತಿಯ ವಿಚಾರವಾಗಿ ಅಷ್ಟಾಗಿ ಮನಸ್ತಾಪ ಬಂದಿರುವುದಿಲ್ಲ ಹೆತ್ತವರೇ ತಮ್ಮ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮಕ್ಕೆಂದು ಆಸ್ತಿಯಲ್ಲಿ ಒಂದು ಭಾಗ ಕೊಡಬಹುದು. ಅದು ಸಾಲದೆಂದು ಕಾನೂನು ರೀತಿಯಲ್ಲಿ ಭಾಗವನ್ನು ಪಡೆಯಬೇಕೆಂದು ಗಂಡನ ಮನೆಯವರು ಬಲವಂತ ಮಾಡಿದರೆ ತನ್ನ ಹೆತ್ತವರನ್ನು ಕೇಳಲು ಸಂಕೋಚ ಇರುತ್ತದೆ. ಗಂಡನ ಮನೆಯವರ ಕಾಟ ತಾಳಲಾರದೆ ಕೇಳಿ ಪಡೆಯಬಹುದು. ಕೆಲವೊಮ್ಮೆ ಹೆಣ್ಣು ಮತ್ತು ಗಂಡು ಮಕ್ಕಳಿಗೂ ಸಮಭಾಗವಾಗಿನೀಡಲುಹೋದರೆ ಗಂಡು ಮಕ್ಕಳು ಇದಕ್ಕೆ ಅಡ್ಡಬಂದು ಗಂಡನ ಮನೆಯವರ ಒತ್ತಾಯದಿಂದ ನ್ಯಾಯಾಲಯದ ಮೆಟ್ಟಲೇರಬಹುದು. ಇದರಿಂದ ಸಹೋದರರಲ್ಲಿ ಮನಸ್ತಾಪ ಬಂದರೂ ಹೆತ್ತವರಲ್ಲಿ ಬರುವುದಿಲ್ಲ. ಅಕಸ್ಮಾತ್ ಆಗಲೂ ಆಸ್ತಿ ಕೊಡದೇ ಇದ್ದರೆ ಕೆಲವರು ಬೇಸರ ಪಡುವುದಿಲ್ಲ. ಕೆಲವು ಗಂಡು ಮಕ್ಕಳ ರೀತಿಯಲ್ಲಿ ಜಗಳವಡಿ ಆಸ್ತಿ ಪಡೆಯಬೇಕೆನ್ನುವ ಹಂಬಲ ಕೆಲವರಿಗೆ ಇರುವುದಿಲ್ಲ.

RELATED ARTICLES  ಪ್ರವಾಸದ ಮುನ್ನ ದಿನ.

ವಿವಾಹದ ವಿಚಾರದಲ್ಲೇನಾದರೂ ಭಿನ್ನಾಭಿಪ್ರಾಯ ಬಂದರೆ ಹೆತ್ತವರನ್ನು ದೂರ ಮಾಡಿ ತಾನು ಪ್ರೀತಿಸಿದ ಹುಡುಗಲ ಜೊತೆಯಲ್ಲಿ ಹೋಗಬಹುದು. ಆದರೂ ತಾನು ಈ ರೀತಿ ಮಾಡಬಾರದಿತ್ತು ಎಂಬ ಅಪರಾದಿ ಮನೋಭಾವ ಇರುತ್ತದೆ. ಅನಿವಾರ್ಯವಾಗಿ ಪ್ರೀತಿಸಿದವನಿಗೆ ಮೋಸ ಮಾಡಲಾರದೆ ಈ ಕಡೆ ಹೆತ್ತವರಲಿ ನಿಷ್ಠೂರ ಕಟ್ಟಿಕೊಳ್ಳಲಾಗದೆ ತೊಳಲಾಡುತ್ತಾರೆ. ಕಡೇವರೆವಿಗೂ ಗಂಡನ ಮನೆಯೇ ಶಾಶ್ವತ ಎಂದು ಗಟ್ಟಿ ಮನಸ್ಸು ಮಾಡಿಕೊಂಡಿರುತ್ತಾರೆ. ಆದರೆ ಪ್ರೀತಿ ಭಾವನೆ ಹೋಗಿರುವುದಿಲ್ಲ.

ಹೆಣ್ಣು ಮಕ್ಕಳು ಎಲ್ಲಾ ವಿಚಾರಗಳಲ್ಲೂ ಹೆತ್ತವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂದರೆ ತಪ್ಪಾಗಲಾರದು. ಹೆತ್ತವರ ಆರೋಗ್ಯದ ವಿಚಾರದಲ್ಲಂತೂ ಬೇಗನೆ ಸ್ಪಂದಿಸುತ್ತಾರೆ. ಮಕ್ಕಳಂತೆ ಆರೈಕೆ ಮಾಡುತ್ತಾರೆ. ಗಂಡು ಮಕ್ಕಳು ವೈದ್ಯರನ್ನು ಸಂಪರ್ಕಿಸುವುದು ಮಾತ್ರೆಗಳನ್ನು ತೆಗೆದುಕೊಂಡು ಬರುವುದನ್ನು ಮಾಡುತ್ತಾ ಇದ್ದು, ಅಗತ್ಯ ಬಿದ್ದರೆ ಮಾತ್ರ ಹೆತ್ತವರ ಬಳಿ ಇದ್ದು ತಮ್ಮ ಸಹೋದರಿಯರ ಜೊತೆಗೆ ಸಹಾಯಕ್ಕೆ ಬರಬಹುದು. ಆದರೆ ದಿನಪೂರ್ತಿ ಕಾಲ ಕಾಲಕ್ಕೆ ಔಷದಿಗಳನ್ನು ನೀಡುತ್ತಾ ಅವರ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಹೆತ್ತವರ ಕಾಯಿಲೆ ವಾಸಿಯಾಗುವವರೆಗೂ ಯೋಗಕ್ಷೇಮ ನೋಡಿಕೊಳ್ಳಬಹುದು. ವಿವಾಹವಾಗಿ ಗಂಡನ ಮನೆಯಲ್ಲಿದ್ದರೂ ಸಹ ಹೆತ್ತವರ ಮೇಲಿನ ಕಾಳಜಿ ಹೋಗಿರುವುದಿಲ್ಲ. ತನ್ನ ಮಕ್ಕಳ ದಿನ ನಿತ್ಯದ ಕೆಲಸಗಳನ್ನು ಗಂಡನಿಗೆ ವಹಿಸಿ ಹೆತ್ತವರ ಆರೈಕೆಗೆ ಟೊಂಕ ಕಟ್ಟಿ ನಿಲ್ಲಬಹುದು.

RELATED ARTICLES  ಬಕ್ರೀದ್ ಆಚರಣೆ ಹಾಗೂ ಅದರ ಸತ್ಯಾಸತ್ಯತೆ

ಮುಂದುವರಿಯುವುದು……..