ಮುಂದುವರಿದ ಭಾಗ:

ಒಂದು ವೇಳೆ ಹೆತ್ತವರಿಗೆ ಆರೋಗ್ಯದಲ್ಲಿ ಏರು ಪೇರಾದರೆ ಮೊದಲು ಆತಂಕ ಪಡುವುದು ಹೆಣ್ಣು ಮಕ್ಕಳು ಎಂದರೆ ತಪ್ಪಾಗಲಾರದು. ಎಷ್ಟೇ ಆದರೂ ಹೆಂಗರಳುಲ್ಲವೇ? ಅದಕ್ಕೆ ತ್ವರಿತವಾಗಿ ಸ್ಪಂದಿಸುತ್ತದೆ. ಒಂದು ರೀತಿಯಲ್ಲಿ ಧೈರ್ಯ ಕಡಿಮೆಯಾಗುತ್ತದೆ. ಏನಾಗುವುದೋ ಎಂಬ ಆತಂಕ ಮನೆ ಮಾಡಿರುತ್ತದೆ. ಗಂಡು ಮಕ್ಕಳು ಸ್ಪಂದಿಸುವುದಿಲ್ಲ ಎಂದು ಹೇಳಲಾಗದು. ಅವರಿಗೆ ಏನಾಗುವುದಿಲ್ಲವೆಂಬ ಧೈರ್ಯ ಇರುತ್ತದೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಹೆತ್ತವರು ಮೇಲಿನ ಕೊಠಡಿಯಲ್ಲಿದ್ದು, ಆರೋಗ್ಯದಲ್ಲಿ ಏರು ಪೇರಾಗಿ ಹೆಣ್ಣು ಮಕ್ಕಳು ಅದನ್ನು ಕಂಡು ತಮ್ಮ ಸಹೋದರರನ್ನು ಗಾಬರಿಯಿಂದ ಕರೆದಾಗ ಗಂಡು ಮಕ್ಕಳು ಅಷ್ಟಾಗಿ ಗಾಬರಿಗೊಳ್ಳದೆ ನೀನು ನೋಡುತ್ತಿರು ಬರುತ್ತೇನೆ ಎಂದು ಉತ್ತರಿಸಬಹುದು. ಆದರೂ ಹೆಣ್ಣು ಮಕ್ಕಳು ಹೆದರಿಕೊಂಡಿರುತ್ತಾರೆ.

ಹೆಣ್ಣು ಮಕ್ಕಳಿಗೆ ತನ್ನ ಹೆತ್ತವರು ಇರುವವರೆಗೂ ಒಂದು ರೀತಿಯ ಧೈರ್ಯ ಇರುತ್ತದೆ. ಹೆತ್ತವರೆಂಬ ಪ್ರೀತಿಯ ಭಾವನೆ ತವರು ಮನೆಯೆಂಬ ಅಭಿಮಾನದ ಭಾವನೆ ಇರುತ್ತದೆ. ಹೆತ್ತವರು ದೊಡ್ಡ ಹುದ್ದೆಯಲ್ಲಿದ್ದರೆ ಹೆಮ್ಮೆಯ ಭಾವನೆ ಇರುತ್ತದೆ. ಅವರಿಂದ ಸಂಸ್ಕಾರ ಭಾವನೆ ಬಂದಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ತಿರಸ್ಕಾರದ ಭಾವನೆ ಹಾಗೂ ಉದಾಸೀನತೆಯ ಭಾವನೆ ಇರುವುದಿಲ್ಲ. ಹೆಣ್ಣು ಮಕ್ಕಳು ಶ್ರೀಮಂತರ ಮನೆಯ ಸೊಸೆಯಾಗಿದ್ದು ಹೆತ್ತವರು ಬಡವರಾಗಿದ್ದೂ ಅವರನ್ನು ತಿರಸ್ಕಾರ ಭಾವನೆಯಿಂದ ನೋಡದೆ ಹೆತ್ತವರಿಗೆ ಸಹಾಯ ಮಾಡುವ ಹಂಬಲ ಇರುತ್ತದೆ. ಆದರೆ ಕೆಲವೊಮ್ಮೆ ಗಂಡು ಮಕ್ಕಳು ಶ್ರೀಮಂತ ಹುಡುಗಿಯನ್ನು ವಿವಾಹವಾಗಿದ್ದು ಹೆತ್ತವರು ಬಡವರಾಗಿದ್ದರೆ ತನಗೆಲ್ಲಿ ಅಪಮಾನವಾಗುತ್ತದೋ ಎಂದು ಕೆಲವರು ಹೆತ್ತವರನ್ನು ಕಡೆಗಣಿಸಬಹುದು.

RELATED ARTICLES  ದೂರಕ್ಕೆ ಅಥವಾ ಹಿಂದಕ್ಕೆ ಸರಿದರೆ?

ಹೆಣ್ಣು ಮಕ್ಕಳಿಗೆ ಹೆತ್ತವರ ಮೇಲೆ ಇರುವ ಕಾಳಜಿ ಪ್ರೀತಿಯ ಭಾವನೆ ತವರು ಮನೆ ಎಂಬ ಅಭಿಮಾನದ ಭಾವನೆಗಳು ಅವರ ಕಡೇ ಉಸಿರಿರುವರೆಗೂ ಇರುತ್ತದೆ. ಆದರೆ ಕೆಲವರ ನಡೆವಳಿಕೆ ಗಂಡನ ಮನೆಗೆ ಹೋದ ಮೇಲೆ ಅದಕ್ಕೆ ವಿರುದ್ದವಾಗುತ್ತವೆ. ಹೆತ್ತವರನ್ನು ಕಂಡಷ್ಟೇ ಪ್ರೀತಿ ಭಾವನೆಯಿಂದ ಗಂಡನ ಹೆತ್ತವರನ್ನು ನೋಡಿಕೊಳ್ಳಲು ಮನಸ್ಸು ಹಿಂಜರಿಯುತ್ತದೆ. ತನ್ನ ಹೆತ್ತವರಂತೆಯೇ, ಗಂಡನ ಹೆತ್ತವರು ಎಂದು ತಿಳಿಯುವುದಿಲ್ಲ.

RELATED ARTICLES  ಯಾರವಳು? (ಕವನ)

ಹೊಸದಾಗಿ ಗಂಡನ ಮನೆಗೆ ಹೋದ ಮೇಲೆ ಆ ಮನೆಯ ವಾತಾವರಣಕ್ಕೆ ಬದಲಾಗಲು ಸ್ವಲ್ಪ ಸಮಯ ಹಿಡಿದರೂ ನಂತರದ ದಿನಗಳಲ್ಲಿ ಹೊಂದಿಕೊಳ್ಳುವ ಪ್ರಯತ್ನ ಮಾಡಬೇಕು. ಗಂಡನ ಹೆತ್ತವರು ಖಂಡಿತ ಶತೃಗಳಲ್ಲ ತಮ್ಮ ಮಗನಿಗೆ ಸರಿಯಾದ ಜೋಡಿ ಎಂದು ಒಪ್ಪಿಕೊಂಡು ಪ್ರೀತಿಯಿಂದಲೇ ನಮ್ಮ ಮನೆಯ ಸೊಸೆ ಎಂದು ಸ್ವೀಕಾರ ಮಾಡಿರುತ್ತಾರೆ. ಅವರಿಗೂ ನಮ್ಮನೆ ಸೊಸೆ ಎಂಬ ಪ್ರೀತಿ ಬಾವನೆ ಇದ್ದೇ ಇರುತ್ತದೆ. ಹೆತ್ತವರ ಮನೆಯಲ್ಲಿ ಇವರು ಸರ್ವತಂತ್ರ ಸ್ವತಂತ್ರರಾಗಿರುತ್ತಾರೆ. ಹೆತ್ತವರು ಇವರ ಮೇಲಿನ ಪ್ರೀತಿಯಿಂದ ಮಕ್ಕಳ ಆಸೆಗೆ ವಿರುದ್ದವಾಗಿ ಹೋಗುವುದಿಲ್ಲ.

ಮುಂದುವರಿಯುವುದು……..