ಮುಂದುವರಿದ ಭಾಗ:

ತವರು ಮನೆಯಲ್ಲಿ ಅವರಿಷ್ಟಬಂದ ರೀತಿಯಲ್ಲಿದ್ದರೂ ಕೆಲವು ನಿಬಂಧನೆಗಳನ್ನು ಹೊರತುಪಡಿಸಿದರೆ ಉಳಿದ ವಿಚಾರಗಳಲ್ಲಿ ಯಾರೂ ಕೇಳುವುದಿಲ್ಲ. ಆದರೆ ಹೋದ ಮನೆಯಲ್ಲಿ ಅದೇರೀತಿ ಇರಬೇಕೆಂದು ಬಯಸುವುದು ಎಷ್ಟರ ಮಟ್ಟಿಗೆ ಸರಿ ಇರುತ್ತದೆ? ಹಲವಾರು ವಿಷಯಗಳಲ್ಲಿ ಸಂಪ್ರದಾಯ ಆಚರಣೆಗಳಲ್ಲಿ ಕೆಲಸ ಕಾರ್ಯಗಳಲ್ಲಿ ಅನೇಕ ವ್ಯತ್ಯಾಸಗಳು ಇರುತ್ತವೆ. ಇವೆಲ್ಲವನ್ನೂ ನೋಡಿಕೊಂಡು ಸನ್ನಿವೇಶಕ್ಕೆ ತಕ್ಕಂತೆ ನಡೆದುಕೊಂಡರೆ ಯಾವ ಮನಸ್ತಾಪವೂ ಬರುವುದಿಲ್ಲ. ಆದರೆ ತನ್ನ ಹೆತ್ತವರ ಮನೆಯಲ್ಲಿರುವಂತೆ ನಡೆದುಕೊಂಡಲ್ಲಲಿ ಅದು ಗಂಡನ ಹೆತ್ತವರಿಗೆ ಆಗುವುದಿಲ್ಲ.

ಅಂದಿನಿಂದಲೇ ಮನೆಯಲ್ಲಿ ಮನಸ್ತಾಪಗಳು ಪ್ರಾರಂಭವಾಗುತ್ತದೆ. ತಾನು ಹೇಳಿದಂತೆ ಗಂಡನ ಹೆತ್ತವರು ಕೇಳಬೇಕೆಂದು ಹೇಳಿದರೆ ಅದನ್ನು ಸಮರ್ಥಿಸಲು ಅವರು ತಯಾರಿರುವುದಿಲ್ಲ. ನಿನ್ನೆ ಮೊನ್ನೆ ಬಂದವಳು ನಮಗೇ ಉಪದೇಶ ಮಾಡಲು ಬರುತ್ತಾಳೆ ಎಂಬ ತಿರಸ್ತಾರ ಭಾವನೆ ಮೂಡುತ್ತದೆ. ಸೊಸೆಯ ಮನದಲ್ಲೂ ಇವರು ಹೇಳಿದಂತೆ ತಾನೇಕೆ ಕೇಳಬೇಕೆಂಬ ಪ್ರತಿಷ್ಠೆ ಬರುತ್ತದೆ. ಈ ವಿಷಯ ದಿನಗಳೆದಂತೆ ಮನಸ್ತಾಪ ದೊಡ್ಡದಾಗುತ್ತಾ ಹೋಗಿ ಅಂತಿಮವಾಗಿ ಬೇರೆ ಮನೆ ಮಾಡುವಂತೆ ಗಂಡನನ್ನು ಒತ್ತಾಯಿಸಬಹುದು. ಆಗ ಗಂಡನು ಇಕ್ಕಟ್ಟಿಗೆ ಸಿಲುಕುತ್ತಾನೆ. ಈ ಕಡೆ ಹೆತ್ತವರನ್ನು ಬಿಡಲಾರದೆ ಆ ಕಡೆ ಹೆಂಡತಿಯ ಮನಸ್ಸಿಗೆ ಬೇಸರ ಪಡಿಸಲಾಗದೆ ಅಡಿಕೆ ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗುತ್ತಾನೆ. ಸ್ವಲ್ಪ ದಿವಸ ಸಮಾಧಾನ ಮಾಡಬಹುದು. ಆದರೆ ಇದು ಬಹಳ ಕಾಲ ನಿಲ್ಲುವುದಿಲ್ಲ. ದಿನ ಕಳೆದಂತೆ ಪ್ರೀತಿಯ ಭಾವನೆ ಕಡಿಮೆಯಾಗುತ್ತಾ ಹೋಗುತ್ತದೆ. ವಿನಹ ಪ್ರೀತಿಯ ಭಾವನೆಗಳು ಬರುವುದೇ ಇಲ್ಲ.

RELATED ARTICLES  ನಿಂದಕರು

ಮಗನ ತೊಳಲಾಟ ನೋಡಲಾರದೆ ಅವನ ಹೆತ್ತವರೇ ಬೇರೆ ಮನೆ ಮಾಡಿಕೊಂಡು ಹೋಗಿ ನಿನ್ನ ಹೆಂಡತಿ ಮನಸ್ಸನ್ನು ಸಮಾಧಾನಪಡಿಸು ಎಂದು ಹೇಳಬಹುದು. ಹಾಗೂ ಹೀಗೆಯೇ ಮುಂದುವರೆದರೆ ಮಕ್ಕಳ ಭವಿಷ್ಯ ಕುಂಠಿತವಾಗಬಹುದು ಬಲವಂತದಿಂದ ಮಗ ಸೊಸೆಯನ್ನು ಬೇರೆ ಕಳಿಸಬಹುದು. ಬೇರೆ ಹೋದ ನಂತರ ಅತ್ತೆ ಮಾವ ಎಂಬ ಪ್ರೀತಿ ಅಭಿಮಾನ ಅಷ್ಟಾಗಿ ಉಳಿಯುವುದೇ ಇಲ್ಲ. ಹೆಸರಿಗೆ ಮಾತ್ರ ಅತ್ತೆ ಮಾವ ಎಂಬ ಸಂಬಂಧಗಳು ಇರುತ್ತವೆ. ಆದರೆ ಆಂತರ್ಯದಲ್ಲಿ ಅತ್ತೆ ಮಾವ ಎಂಬ ಭಾವನೆ ಹೊರಟು ಹೋಗಿರುತ್ತದೆ. ಇನ್ನೊಂದು ವಿಚಾರವೇನೆಂದರೆ, ವಿವಾಹದಲ್ಲಿ ವಿವಾಹದ ವಿಚಾರದಲ್ಲಿ ಹುಡುಗಿಯನ್ನು ನೋಡಲು ಗಂಡಿನ ಮನೆಯವರು ಹೋದಾಗ ಹುಡುಗನ ಮನೆಯಲ್ಲಿ ರಾಹು ಕೇತುಗಳಿವೆಯೇ? ಹಳೆಯ ಕುರ್ಚಿಗಳಿವೆಯೇ? ವಿವಾಹವಾದ ನಂತರ ಹುಡುಗನ ಹೆತ್ತವರು ಎಲ್ಲಿರುತ್ತಾರೆ? ಎಂದು ಅಸಂಭದ್ದ ಪ್ರಶ್ನೆಗಳನ್ನು ಕೇಳುವವರಿಗೆ ಅತ್ತೆ ಮಾವ ಎಂಬ ಪ್ರೀತಿ ಎಲ್ಲಿಂದ ಬರುತ್ತದೆ.? ವಿವಾಹದ ಮುಂಚೆಯೇ ಆ ಭಾವನೆಗಳು ಹೊರಟು ಹೋಗಿರುತ್ತದೆ.

RELATED ARTICLES  ಜೀವನಕ್ಕೆ ಮಹದುದ್ದೇಶವಿದೆ

ಕೆಲವು ಸನ್ನಿವೇಶಗಳಲ್ಲಿ ಮಗನು ಹೆತ್ತವರ ಇಚ್ಛೆಗೆ ವಿರುದ್ದವಾಗಿ ವಿವಾಹವಾಗಿದ್ದು, ಮನೆಗೆ ಬರುವ ಸೊಸೆ ಬಡವರಾಗಿದ್ದರೆ ಅಂತಹ ಸೊಸೆಯನ್ನು ಕಂಡರೆ ಗಂಡನ ಹೆತ್ತವರು ತಿರಸ್ಕಾರ ಭಾವದಿಂದ ನೋಡಿದರೆ ಅಂತಹ ಮನಸ್ಸುಗಳಲ್ಲಿ ಪ್ರೀತಿಯ ಭಾವನೆಗಳು ಬರುವುದಿಲ್ಲ. ಇನ್ನೆಲ್ಲಿ ಮಗ ಬೇಸರಪಟ್ಟುಕೊಂಡು ಮನೆ ಬಿಟ್ಟು ಹೊರಟು ಹೋಗುತ್ತಾನೋ? ಎಂಬ ಆತಂಕದಿಂದ ಎಷ್ಟೇ ಅಸಮಾಧಾನ ವಿದ್ದರೂ ಹೇಳಿಕೊಳ್ಳುವುದಿಲ್ಲ. ಏನಾದರೂ ಮಾಡಿ ಇವಳನ್ನು ತನ್ನ ಮಗನಿಂದ ದೂರಮಾಡಿ ಮಗನಿಗೆ ಬೇರೆ ವಿವಾಹ ಮಾಡಬೇಕೆಂಬ ಆಲೋಚನೆ ಮಾಡಿ, ಅಕಸ್ಮಾತ್ ಸೊಸೆ ಮಾಡುವ ಸಣ್ಣ ಪುಟ್ಟ ತಪ್ಪಿಗೂ ಬಂದಿರುವ ಸೊಸೆಯನ್ನು ನಿಂದಿಸುತ್ತಾ ಇದ್ದರೆ ಬಡವರ ಮನೆಯಿಂದ ಬಂದಿರುವ ಹೆಣ್ಣು ಮಗಳು ಅಸಹಾಯಕಳಾಗಿ ಕಣ್ಣೀರು ಸುರಿಸಬೇಕಾಗುತ್ತದೆ. ಅಂತಹ ಸೊಸೆಗೆ ಅತ್ತೆ ಮಾವ ಎಂಬ ಪ್ರೀತಿ ಅಭಿಮಾನ ಇದ್ದರೂ ಅದನ್ನು ಗಂಡನ ಹೆತ್ತವರು ಪರಿಗಣಿಸುವುದಿಲ್ಲ.

ಮುಂದುವರಿಯುವುದು……..