ಮುಂದುವರಿದ ಭಾಗ:

ಹೆಣ್ಣು ಮಕ್ಕಳಿಗೆ ಹೆತ್ತವರ ಮೇಲಿನ ಪ್ರೀತಿಯ ಭಾವನೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ಆದರೆ ಗಂಡನ ಹೆತ್ತವರ ಮೇಲೆ ಅದೇ ಭಾವನೆಗಳು ಬರಲು ನಾನಾ ಕಾರಣಗಳಿಂದ ಹಿಂಜರಿಯತ್ತದೆ. ಒಟ್ಟಿನಲ್ಲಿ ಮನೆಗೆ ಬರುವ ಸೊಸೆಯನ್ನು ತಮ್ಮ ಮಗಳೆಂದು ಭಾವಿಸಿದ್ದಲ್ಲಿ ಅದೇ ರೀತಿ ಗಂಡನ ಹೆತ್ತವರು ತಮ್ಮ ಹೆತ್ತವರೆಂದು ಪರಿಗಣಿಸಿ ಗೌರವಿಸಿದರೆ ಮನಸ್ತಾಪಗಳು ಬರದೆ ಪ್ರೀತಿಯ ಭಾವನೆಗಳು ಶಾಶ್ವತವಾಗಿರಬಹುದು. ಇಲ್ಲದಿದ್ದಲ್ಲಿ ಎಲ್ಲಾ ಭಾವನೆಗಳು ಕಳೆದುಹೋಗಿ ಹುಡುಕಿದರೂ ಯಾರ ಹೃದಯದಲ್ಲಿಯೂ ಸಿಗುವುದಿಲ್ಲ. ಈ ಭಾವನೆಗಳು ಇಲ್ಲದಿದ್ದರೆ ಮಾನವೀಯತೆ ಎಂಬುದು ಎಲ್ಲರ ಜೀವನದಲ್ಲಿ ಮರೀಚಿಕೆಯಾಗುತ್ತದೆ.

ಹೆಣ್ಣು ಮಕ್ಕಳಲ್ಲಿ ಭಾವನೆ ಇರುವಂತೆ ಗಂಡು ಮಕ್ಕಳಿಗೂ ಅದೇ ರೀತಿ ಭಾವನೆಗಳು ಇರುತ್ತದೆ. ತಂದೆಯಾದವನು ತನ್ನ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾನೆ. ಕಾಲ ಕಾಲಕ್ಕೆ ತಕ್ಕಂತೆ ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಹಗಲೂ ಇರುಳೆನ್ನದೆ ದುಡಿಯುತ್ತಾನೆ. ಮನುಷ್ಯ ಜನ್ಮ ಅಶಾಶ್ವತ ಎಂದು ತಿಳಿದಿದ್ದರೂ ತನ್ನ ಮಕ್ಕಳಿಗಾಗಿ ಆಸ್ತಿಗಳನ್ನು ಮಾಡುತ್ತಾನೆ. ಅದನ್ನು ತನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಜೋಪಾನ ಮಾಡುತ್ತಾನೆ. ತನ್ನ ಮಕ್ಕಳ ಶ್ರೇಯೋಭಿಲಾಶೆಯೇ ತನ್ನ ದ್ಯೇಯವೆಂದು ಪರಿಗಣಿಸಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಅದರಲ್ಲೂ ಹೆಣ್ಣು ಮಕ್ಕಳು ಎಂದರೆ ಅಗಾಧವಾದ ಪ್ರೀತಿ ಎಂದೇ ಹೇಳಬೇಕು. ಕೆಲವರು ಇದರಲ್ಲಿ ಅಪವಾದ ಇರಬಹುದು.

RELATED ARTICLES  ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ನಾಲ್ಕನೆಯ ಭಾಗ

ಅತಿ ಜಾಗರೂಕತೆಯಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸುತ್ತಾನೆ. ಆದರೆ ಅದೇರೀತಿ ಕೆಲವು ವಿಚಾರಗಳಲ್ಲಿ ಕಠಿಣ ಮನಸ್ಸಿನವನಾಗುತ್ತನೆ. ಈ ಗುಣವೇ ಕೆಲವೊಮ್ಮೆ ತಂದೆ ಮತ್ತು ಮಕ್ಕಳ ನಡುವೆ ಮಾತಿನ ಘರ್ಷಣೆಗೆ ಕಾರಣವಾಗುತ್ತದೆ. ಆದರೆ ತಂದೆಯಾದವನು ಕೆಲವೊಂದು ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಇದರಿಂದ ತಂದೆಯನ್ನು ಕಂಡರೆ ಮಕ್ಕಳಲ್ಲಿ ಪ್ರೀತಿಯ ಜೊತೆಗೆ ಸ್ವಲ್ಪ ಭಯವೂ ಇರುತ್ತದೆ. ಯಾರಿಗೆ ತಂದೆಯ ಕಂಡರೆ ಭಯ ಇರುವುದಿಲ್ಲವೋ ಆ ಮನುಷ್ಯ ಜೀವನದಲ್ಲಿ ಮುಂದುವರೆಯಲಾರ. ಅಂದರೆ ತಂದೆಯ ಮಾತನ್ನು ಕೇಳುವಂತರಾಗಿರಬೇಕು.

ತಂದೆಯ ಮಾತಿಗೆ ಎದುರಾಡಿದರೆ ಏನಾಗುತ್ತದೋ ಎಂಬ ಭಾವನೆ ಇರಬೇಕು. ತಂದೆ ಯಾವಾಗಲೂ ತನ್ನ ವಂಶಕ್ಕೆ ಮತ್ತು ತನ್ನ ಮಕ್ಕಳಿಗೆ ಕೆಟ್ಟ ಹೆಸರು ಬರಬಾರದೆಂಬ ಉದ್ದೇಶ ಇರುತ್ತದೆ. ಕೆಲವೊಮ್ಮೆ ತನ್ನ ವಂಶಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದೆನಿಸದರೆ ಅಂತಹ ಮಕ್ಕಳನ್ನು ದೂರಮಾಡಲು ಹಿಂಜರಿಯುವುದಿಲ್ಲ. ಇದನ್ನು ತಿಳಿಯದೆ ಮಕ್ಕಳು ತಂದೆಯನ್ನು ನಿಷ್ಠೂರ ಮಾಡುತ್ತಾರೆಯೇ ಹೊರತು ತಾವು ಮಾಡುತ್ತಿರುವುದು ತಪ್ಪೆಂದು ಅರಿವಾಗುವುದಿಲ್ಲ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಮಕ್ಕಳಿಗೆ ಅಪ್ಪ ಎಂದರೆ ಒಂದು ದೊಡ್ಡ ಆಲದ ಮರವಿದ್ದಂತೆ. ನೆರಳಿಗಾಗಿ ಎಲ್ಲರೂ ಮರದ ಆಶ್ರಯ ಪಡಯುವಂತೆ ಮಕ್ಕಳು ಅಪ್ಪನನ್ನು ಆಶ್ರಯಿಸಿರುತ್ತಾರೆ. ಅಪ್ಪನು ಜೊತೆಯಲ್ಲಿದ್ದರೆ ಮಕ್ಕಳಿಗೆ ಒಂದು ರೀತಿಯ ಧೈರ್ಯ, ಮತ್ತು ಅಪ್ಪ ಹೆಮ್ಮೆಯ ದ್ಯೋತಕ. ಅಪ್ಪನು ಯಾವುದಾದರೂ ದೊಡ್ಡ ಹುದ್ದೆಯಲ್ಲಿದ್ದರೆ ಪ್ರಪಂಚವನ್ನೇ ಗೆಲ್ಲುತ್ತೇವೆಂಬ ಧೈರ್ಯ ಇರುತ್ತದೆ. ಆದರೆ ಅಪ್ಪನು ದೊಡ್ಡ ಹುದ್ದೆಯಲ್ಲಿದ್ದಾನೆಂದು ಮಕ್ಕಳು ಅಪ್ಪನ ಪ್ರಭಾವವನ್ನು ದುರುಪಯೋಗಪಡಿಸಿಕೊಳ್ಳಬಾರದಷ್ಟೇ. ಅಪ್ಪನು ಆದರ್ಶವಂತನಾಗಿದ್ದರೆ ಅದನ್ನೇ ಅನುಸರಿಸುವುದು ಉತ್ತಮವಾದ ಕಾರ್ಯ. ಏನು ಮಾಡಿದರೂ ನಮ್ಮ ತಂದೆಯ ಪ್ರಭಾವ ಇದೆ ಎಂದು ಅಡ್ಡದಾರಿಗೆ ಇಳಿದರೆ ತಂದೆಯಾದವನು ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಮಕ್ಕಳಾದವರು ತಂದೆಯಂತೆ ಸನ್ಮಾರ್ಗದಲ್ಲಿ ನಡೆದು ತನ್ನ ತಂದೆಯ ಹೆಸರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಜ್ವಲಿಸಿದರೆ ಅಪ್ಪನಾದವನಿಗೆ ಮಕ್ಕಳ ಮೇಲೆ ಅಪಾರವಾದ ಅಭಿಮಾನ ಮತ್ತು ಪ್ರೀತಿಯ ಭಾವನೆ ಉಂಟಾಗುತ್ತದೆ.

ಮುಂದುವರಿಯುವುದು……..