ಮುಂದುವರಿದ ಭಾಗ:

ಅವರುಗಳಲ್ಲಿನ ಪ್ರೀತಿಯ ಭಾವನೆಗಳು ಅಚ್ಚಳಿಯದೆ ಉಳಿದಿರುತ್ತವೆ ಎನ್ನಬಹುದು. ಇವರಲ್ಲಿ ಆಸ್ತಿಗಾಗಿ ಮನಸ್ತಾಪ ಬರುವುದು ಅಪರೂಪವಾಗಿರುತ್ತದೆ. ಒಂದು ವೇಳೆ ಹೆಣ್ಣುಮಕ್ಕಳನ್ನು ಒಳ್ಳೆಯ ಮನೆಗೆ ಸೊಸೆಯನ್ನಾಗಿ ಮಾಡಿದ್ದರೆ ಅವರ ಪಾಡಿಗೆ ಅವರು ಇರುತ್ತಾರೆ. ಮದ್ಯಮ ವರ್ಗ ಅಥವ ಬಡವರಾಗಿದ್ದರೆ ಸಹೋದರರೇ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಕೊಟ್ಟು ತಮ್ಮಂತೆ ಸಹೋದರಿಯರು ಸಂತೋಷವಾಗಿರಲಿ ಎಂದು ಬಯಸಬಹುದು. ತಂದೆಯು ಆಸ್ತಿ ಪಾಲು ಮಾಡದೆ ತೀರಿಕೊಂಡಾಗ ಗಂಡನ ಮನೆಯವರ ಬಲವಂತಕ್ಕೆ ಆಸ್ತಿಯಲ್ಲಿ ಪಾಲು ಕೇಳಬಹುದು.

ಹಿಂದಿನವರು ಸಹೋದರ ಮತ್ತು ಸಹೋದರಿಯರ ಸಂಬಂಧ ಪ್ರೀತಿಯ ಭಾವನೆಗಳು ಅಳಿಸಿ ಹೋಗಬಾರದೆಂದು ಅಣ್ಣ ತಂಗಿ ಹಬ್ಬವಾದ ಭೀಮನ ಅಮಾವಾಸ್ಯೆ, ನಾಗರ ಪಂಚಮಿ ರಾಖಿ ಹಬ್ಬವನ್ನು ಆಚರಿಸುತ್ತಾರೆ. ಗೌರಿಹಬ್ಬದಲ್ಲೂ ಗೌರಿ ಬಾಗಿನ ನೀಡುವ ಮೂಲಕ ಸಂಬಂಧ ಪ್ರೀತಿಯ ಭಾವನೆಗಳು ಹೋಗದಿರುವಂತೆ ಮಾಡಿದ್ದಾರೆ.

RELATED ARTICLES  ವಿವೇಕಾನಂದರ ಪ್ರತಿಮೆಯನ್ನು ಸಿದ್ಧಪಡಿಸಿ ಶಾಲೆಗೆ ಕೊಡುಗೆ ನೀಡಿದ ಪಾಲಕ.

ಅಕಸ್ಮಾತ್ ತಂದೆ ಕಾಲವಾದರೂ ಹೆಣ್ಣು ಮಕ್ಕಳಿಗೆ ತನ್ನ ಸಹೋದರ ಇದ್ದಾನೆಂಬ ಧೈರ್ಯ ಇರುತ್ತದೆ. ಅದೇರೀತಿ ಹೆಣ್ಣು ಮಕ್ಕಳು ವಿವಾಹವಾಗದೆ ಮನೆಯಲ್ಲಿದ್ದಾಗ ತಾಯಿ ತೀರಿಕೊಂಡರೆ ಸಹೋದರಿಯೇ ಎರಡನೇ ತಾಯಿಯಾಗಿ ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾಳೆ. ಎಂದಿಗೂ ತನ್ನ ಸಹೋದರರನ್ನು ಕಷ್ಟದಲ್ಲಿರಲು ಬಿಡುವುದಿಲ್ಲ. ಸಹೋದರರು ಇದಕ್ಕೆ ಹೊರತಾಗಿಲ್ಲ. ತಂದೆ ತೀರಿಹೋದರೂ ಮನೆಯ ಜವಾಬ್ದಾರಿ ವಹಿಸಿಕೊಂಡು ಒಳ್ಳೆಯ ಕಡೆ ಸಂಬಂಧವನ್ನು ನೋಡಿ ಸಹೋದರಿಯರ ವಿವಾಹವನ್ನು ನೆರವೇರಿಸುತ್ತಾರೆ. ಅಷ್ಟೇ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಅಕಸ್ಮಾತ್ ಯಾರಾದರೂ ಮೃತರಾದರೆ ಮಾತ್ರ ಪ್ರೀತಿಯ ಭಾವನೆಗಳು ಕಾಲ ಕಳೆದಂತೆ ಕಳೆದು ಹೋಗುತ್ತದೆ. ನೆನಪು ಮಾತ್ರ ಇರುತ್ತದೆ.

RELATED ARTICLES  ನಮ್ಮ ಮುಂದೆ ಶ್ರೀಗುರುಮೂರ್ತಿ ಬಂದು ನಿಂತರೂ ನಮ್ಮ ಚಿತ್ತ ಅವರೆಡೆ ಇಲ್ಲವಾದರೆ ನಮಗೆ ಆ ಭಾವನೆಯೂ ಆಗುವದಿಲ್ಲ!

ಹೆತ್ತವರು ಮತ್ತು ಒಡಹುಟ್ಟಿದವರ ಪ್ರೀತಿಯ ಭಾವನೆಗಳು ಒಂದು ರೀತಿಯಾದರೆ ತಂದೆ ಕಡೆ ಅಥವಾ ತಾಯಿಯ ಕಡೆ ಇರುವ ಸಂಬಂಧಿಕರ ಮೇಲೆ ಅಷ್ಟಾಗಿ ಪ್ರೀತಯ ಭಾವನೆಗಳು ಬರದಿದ್ದರೂ ಸಹ ಇವರು ನಮ್ಮ ಹತ್ತಿರದ ಸಂಬಂಧಿಗಳು ಎಂಬ ಅಭಿಮಾನ ಇರುತ್ತದೆ. ತಾಯಿಯ ಹೆತ್ತವರು ಹಾಗೂ ಸಹೋದರರ ಸಂಬಂಧ ಸ್ವಲ್ಪ ಪ್ರೀತಿಯ ಭಾವನೆಯಿಂದ ಕೂಡಿರುತ್ತದೆ. ಕಾರಣವೇನೆಂದರೆ ಸಹೋದರಿಯರು ತವರು ಮನೆಗೆ ಬಂದಾಗ ಅವರ ಹೆತ್ತವರು ಮತ್ತು ಸಹೋದರ ಸಹೋದರಿಯರು ಬಹಳ ಪ್ರೀತಿಯಿಂದ ನೋಡಿಕೊಳ್ಳುವುದರಿಂದ ಸಹೋದರಿಯg Àಮಕ್ಕಳಿಗೆ ತಾತ ಅಜ್ಜಿ, ಸೋದರಮಾವ ಸೋದರತ್ತೆ ಎಂಬ ಪ್ರೀತಿ ಭಾವನೆ ಬಂದಿರುತ್ತದೆ.

ಮುಂದುವರಿಯುವುದು……..