ಮುಂದುವರಿದ ಭಾಗ:

ಹೆಣ್ಣು ಮಕ್ಕಳ ವಿವಾಹದ ಸಮಯದಲ್ಲಿಯೂ ಕೂಡ ತಾಯಿಯ ಸೋದರನೇ ಮದುವೆಯ ಮಂಟಪಕ್ಕೆ ತನ್ನ ಸಹೋದರಿಯ ಮಗಳನ್ನು ಕರೆದುಕೊಂಡು ಬರಬೇಕೆನ್ನುವ ರೂಢಿ ಇರುವುದರಿಂದ ಸೋದರಮಾವನಲ್ಲಿ ಅವಿನಾವ ಸಂಬಂಧ ಇರುತ್ತದೆ.

ಅವಿಭಕ್ತ ಕುಟುಂಬವಾಗಿದ್ದಲ್ಲಿ ಅಣ್ಣ ತಮ್ಮಂದಿರ ಮಕ್ಕಳು ಚಿಕ್ಕವರಿದ್ದಾಗ ಅವರ ಚಿಕ್ಕಪ್ಪ ಮತ್ತು ದೊಡ್ಡಪ್ಪನನ್ನು ಕಂಡರೆ ವಿಶ್ವಾಸದಿಂದ ಇರುತ್ತಾರೆ. ದಿನ ಕಳೆದಂತೆ ಮನೆಯಲ್ಲಿ ಯಾವುದಾದರೂ ಕಾರಣಕ್ಕೆ ಮನಸ್ತಾಪ ಬಂದಾಗ ಎಲ್ಲರೂ ಬೇರೆ ಬೇರೆಯಾಗುವುದರಿಂದ ಪ್ರೀತಿಯ ಭಾವನೆಗಳು ಕಳೆದು ಹೋಗಬಹುದು. ಯಾರಾದರೂ ಕೇಳಿದರೆ ಲೋಕಾರೂಢಿಯಾಗಿ ಚಿಕ್ಕಪ್ಪ ಮತ್ತು ದೊಡ್ಡಪ್ಪನ ಮಕ್ಕಳು ಎಂದಷ್ಟೇ ಹೇಳಬಹುದು. ಆಗ ಅಷ್ಟಾಗಿ ಯಾವ ರೀತಿಯ ಭಾವನೆಗಳು ಇರುವುದಿಲ್ಲ. ಈಗ ವಿಭಕ್ತ ಕುಟುಂಬಗಳೇ ಜಾಸ್ತಿ ಇರುವುದರಿಂದ ಚಿಕ್ಕಪ್ಪ ಮತ್ತು ದೊಡ್ಡಪ್ಪರವರನ್ನೂ ಸಹ ಬೇರೆ ಸಂಬಂಧಿಕರಂತೆ ನೋಡಬಹುದು.

RELATED ARTICLES  ಧಾರ್ಮಿಕ ಹಿನ್ನೆಲೆಯ ಜೊತೆಗೆ ಶೈಕ್ಷಣಿಕ ಸಾಂಸ್ಕೃತಿಕ ಮಹತ್ವ ಸಾರುವ ಗಣೇಶ ಚತುರ್ಥಿ

ಕೆಲವು ಸಂಸಾರಗಳಲ್ಲಿ ಅಮ್ಮನ ಹೆತ್ತವರ ಜೊತೆ ಒಡನಾಟ ಇರುವಷ್ಟು ತಂದೆಯ ಹೆತ್ತವರ ಕಡೆ ಒಡನಾಟ ಕಡಿಮೆ ಎನ್ನಬಹುದು. ಅವರೂ ಸಹ ತಾತ ಅಜ್ಜಿಯರೇ ಆದರೂ ಯಾವುದಾದರೂ ಮನಸ್ತಾಪ ಬಂದಲ್ಲಿ ಬಂದಿರುವ ಸೊಸೆಗೆ ಜೊತೆಯಲ್ಲಿರಲು ಗದೆ ಗಂಡನಿಗೆ ಒತ್ತಡ ಹಾಕಿ ಬೇರೆ ಸಂಸಾರವನ್ನು ಮಾಡಿದಾಗ ತಾತ ಅಜ್ಜಿಯ ಪ್ರೀತಿ ಲಭ್ಯವಾಗದೇ ಇರಬಹುದು. ಮಗನಾಗಲೀ ಅಥವಾ ಮಗಳಾಗಲೀ ಹೆತ್ತವರನ್ನು ಬಿಟ್ಟು ವಿದೇಶದಲ್ಲಿ ನೆಲಸಿದರೆ ವಿದೇಶಗಳಲ್ಲಿ ಅವರು ಪರದೇಶಿಗಳಾಗುತ್ತಾರೆ. ಹೆತ್ತವರಿದ್ದರೂ ವಿದೇಶಕ್ಕೆ ಹೋಗಿ ಅನಾಥರಾಗುತ್ತಾರೆ. ಹೆತ್ತವರಿಗೆ ಮಕ್ಕಳಿದ್ದರೂ ಅನಾಥರಾಗುತ್ತಾರೆ.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

ಮಕ್ಕಳು ಹೊರದೇಶಕ್ಕೆ ಹೋಗುವಾಗ ಐದಾರು ವರ್ಷದಲ್ಲಿ ವಾಪಸ್ ಬರುತ್ತೇವೆ ಎಂದು ಹೇಳಿ ಹೋದಾಗ ನಮ್ಮ ಮಕ್ಕಳು ವಿದೇಶದಲ್ಲಿದ್ದಾರೆ ಎಂದು ಎಲ್ಲರೆದುರು ಅಭಿಮಾನದಿಂದ ಮತ್ತು ಹೆಮ್ಮೆಯಿಂದ ಹೇಳಿಕೊಳ್ಳುತ್ತ ಇದ್ದ ಜೀವಗಳು ಐದಾರುವರ್ಷಗಳ ನಂತರ ಬರುತ್ತಾರಲ್ಲಾ ಎಂಬ ಧೈರ್ಯದಿಂದ ಇದ್ದು, ಅವರು ಸ್ವದೇಶಕ್ಕೆ ಮರಳುವುದು ಹುಸಿಯಾದಾಗ ಬಹಳವಾದ ನಿರಾಸೆಯಿಂದ ಏಕೆ ಮಕ್ಕಳು ವಿದೇಶಕ್ಕೆ ಹೋದರೋ ಈ ದೇಶದಲ್ಲಿಯೇ ಸ್ವಲ್ಪ ಕಡಿಮೆ ಸಂಬಳ ಬಂದಿದ್ದರೂ ನೆಮ್ಮದಿಯಿಂದ ಜೀವನ ನಡೆಸಬಹುದಿತ್ತು. ಮಕ್ಕಳು ಕಣ್ಣುಮುಂದೆ ಇರುತ್ತಿದ್ದರು ಎಂದುಪಶ್ಚಾತ್ತಾಪ ಪಡಬಹುದು.

ಮುಂದುವರಿಯುವುದು……..