ಭಾರತೀಯ ಪರಂಪರೆಯಲ್ಲಿ ಗೋವು ಅತ್ಯಂತ ಪವಿತ್ರ ಹಾಗೂ ಪಾವನವಾಗಿದೆ .ಗೋವು ಪ್ರತೀ ಗೋಪಾಲಕನಿಗೆ ಲಕ್ಷ್ಮಿಯೇ ಆಗಿದ್ದಾಳೆ .ಮಾನವನ ಜೀವನವನ್ನು ಉನ್ನತಿಗೇರಿಸುವ ಗೋವನ್ನು ಈ ಕಾರಣದಿಂದಲೇ ” ಗೋಮಾತೆ ” ,” ಕಾಮಧೇನು ” ಎಂದು ಪೂಜಿಸಲಾಗುವುದು .

ಅನಾದಿ ಕಾಲದಿಂದ ಅಥವಾ ಸನಾತನ ಕಾಲದಿಂದಲೂ ” ಗೋ ಸಂಸ್ಕೃತಿ ” ನಮ್ಮ ದೇಶದಲ್ಲಿದೆ .ಹಿಂದೆ ನಮ್ಮ ದೇಶದಲ್ಲಿ ಬಹಳಷ್ಟಿದ್ದಂತಹ  ಗೋತಳಿಗಳು ಹಲವಾರು ವರ್ಷಗಳಿಂದ ನಶಿಸುತ್ತಾ ಬಂದಿದೆ .ಇದಕ್ಕೆಕಾರಣ ಗೋವುಗಳನ್ನು ಕೊಂದು ತಿನ್ನುವುದು ,ಚರ್ಮ, ಎಲುಬು ,ಕೊಂಬುಗಳ ವ್ಯಾಪಾರ ಮುಂತಾದ ಹೀನ ದಂಧೆಗಳೇ ಆಗಿವೆ .

ಬಹಳ ವರ್ಷಗಳ ಹಿಂದೆ ನಮ್ಮ ದೇಶೀಯ ಗೋವುಗಳು ಮತ್ತು ವಿದೇಶೀಯ ಗೋವುಗಳ ‘ ತಳಿ ಸಂಕರ ‘ ನಡೆಯಿತು .ಇದರಿಂದಾಗಿ ಜನಿಸಿದ ತಳಿಗಳು ” ಭಾರತೀಯ ತಳಿ” ಅಥವಾ ” ವಿದೇಶೀಯ ತಳಿ ” ಗಳೂ ಆಗಿರಲಿಲ್ಲ .

IMG 20170727 WA0003

” ತಳಿ ಸಂಕರ” ಕ್ಕೆ ಮುಖ್ಯ ಕಾರಣವೆಂದರೆ ,ನಮ್ಮ ದೇಶೀಯ ಗೋತಳಿಗಳು ಕಡಿಮೆ ಹಾಲು ಕೊಡುತ್ತವೆ ಮತ್ತು ವಿದೇಶೀಯ ಗೋತಳಿಗಳು ಹೆಚ್ಚು ಹಾಲು ಕೊಡುತ್ತವೆ ಎಂಬಂತಹ ತಪ್ಪು ಕಲ್ಪನೆ ನಮ್ಮ ಗೋಪಾಲಕರಲ್ಲಿ ಉಂಟಾದುದೇ ಆಗಿದೆ .

RELATED ARTICLES  ಧರ್ಮಮೂರ್ತಿ ಶ್ರೀರಾಮನ ಬಗ್ಗೆ ಶ್ರೀಧರರು ಹೇಳಿದ ಮಾತು ಹೀಗಿದೆ.

ಇಂದು ನಾವು ಭಾರತೀಯ ಗೋ ತಳಿಯ A2 ಹಾಲಿನ ಮಹತ್ವವನ್ನು ನಮ್ಮ ದೇಶದ ಜನರಿಗೆ   ತಿಳಿಸುವಂತ ಮಹತ್ಕಾರ್ಯವಾಗಬೇಕಾಗಿದೆ .ಈಗಾಗಲೇ ವಿದೇಶಗಳಲ್ಲಿ ,ಭಾರತೀಯ ಗೋತಳಿಗಳ ಕ್ಷೀರ, ಗೋಮೂತ್ರ ,ಗೋಮಯದ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಮಾಡಿ ಅದರ ಮಹತ್ವವನ್ನು ಅವರು ತಿಳಿದಿರುತ್ತಾರೆ .ನಮ್ಮ ಭಾರತೀಯ ಜನತೆಗೆ, ಗೋಪಾಲಕರಿಗೆ ಈ ಅರಿವನ್ನು ಮೂಡಿಸುವಂತಹ ಮಹತ್ಕಾರ್ಯವನ್ನು  ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳಾದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಮತ್ತು ಅವರ ಶಿಷ್ಯ ಕೋಟಿ ಕೈಗೊಂಡಿದೆ .

 

ದೇಶೀಯ ಗೋತಳಿಗಳ ಬೆನ್ನ ಮೇಲೆ ಡುಬ್ಬ ಇದ್ದು ,ಇದು ಭಾರತದ ಅತೀ ಹೆಚ್ಚಿನ ಉಷ್ಣತೆ ಇರುವಂತಹ ಹವಾಮಾನದಲ್ಲಿ ಬದುಕಬಲ್ಲದು .ಆದರೆ ವಿದೇಶೀಯ ಗೋತಳಿಗಳು ಭಾರತದ ಹವಾಮಾನಕ್ಕೆ ಹೊಂದಿಕೊಳ್ಳಲಾರದು .ಅಂತೆಯೇ ದೇಶೀಯ ಗೋವುಗಳು ತನ್ನ ಜೀವಮಾನದಲ್ಲಿ ೧೫-೨೦ ಕರುಗಳನ್ನು ಹಾಕುತ್ತದೆ .ಆದರೆ ವಿದೇಶೀಯ ತಳಿಗಳು ಕೇವಲ ೪-೫ ಕರುಗಳನ್ನು ಮಾತ್ರ ಹಾಕುತ್ತದೆ .ದೇಶೀಯ ತಳಿಗಳು ನೋಡಲು ಬಲು ಸುಂದರವಾಗಿರುತ್ತದೆ .ಆದರೆ ವಿದೇಶೀಯ ತಳಿಗಳು ,ದೇಶೀಯ ತಳಿಗಳಷ್ಟು ಸುಂದರವಾಗಿ ಇರುವುದಿಲ್ಲ .

RELATED ARTICLES  ಮರೆತು ಹೋಗುವ ಬಾಳಿ ಬದುಕಿದ ದಾರಿಗಳು

ನಿರೋಗಿಯಾಗಿರುವವನಷ್ಟು ಸುಖಿ ಯಾರು ? ಗೋವುಗಳು ಸ್ವಸ್ಥವಾಗಿದ್ದರೆ ….ಸಮಾಜ ಸ್ವಸ್ಥವಾಗಿರುತ್ತದೆ .”ಗೋಧನದಷ್ಟು ದೊಡ್ಡ ಧನ ಬೇರಾವುದೂ ಇಲ್ಲ ,ಗೋಸೇವೆಯಷ್ಟು ದೊಡ್ಡ ಸೇವೆ ಮತ್ತೊಂದಿಲ್ಲ ,ಗೋದಾನದಷ್ಟು ದೊಡ್ಡ ದಾನ ಬೇರಾವುದೂ ಇಲ್ಲ ,ಸೇವೆಯ ಬದಲಿಗಾಗಿ ಅಂತ ಅಲ್ಲ …ಸೇವೆ ಮಾಡದಿದ್ದರೂ ಮಾತೆಯರ ಮಾತೆ ಗೋಮಾತೆ ಎಲ್ಲರಿಗೂ …ಜಾತಿಭೇದವಿಲ್ಲದೇ ಅಮೃತವ ನೀಡುವುದು .”

ಇಂದು ಸ್ವಸ್ಥ ಅರ್ಥ ವ್ಯವಸ್ಥೆಗೆ ,ಮಾನವನ ಉತ್ತಮಸ್ವಾಸ್ಥ್ಯಕ್ಕೆ ,ಸ್ವಸ್ಥ ದೇಶೀಯ ಗೋವುಗಳ ಅಗತ್ಯವಿದೆ .ದೇಶೀಯ ಗೋವಿನ ಹಾಲು …ಮಂದ ಬುದ್ಧಿ ,ಆಟಿಸಂ ,ಕ್ಯಾನ್ಸರ್ ಮತ್ತು ಮಧುಮೇಹಕ್ಕೆ ಪರಿಣಾಮಕಾರಿಯಾದ ಔಷಧವಾಗಿದೆ .ಅದಲ್ಲದೇ ನಾವು ಯಾವುದೇ ರೋಗಗಳಿಗೆ ಈಡಾಗದಂತಹ ರೋಗನಿರೋಧಕ ಶಕ್ತಿಯನ್ನು ನಮ್ಮಲ್ಲಿ ಉತ್ಪತ್ತಿ ಮಾಡುವುದು .

IMG 20170727 WA0007

ಹಾಗಾಗಿ..‌‌.. ಇನ್ನೂ ಕಾಲ ಮಿಂಚುವ ಮೊದಲು ನಾವು ,ನಮ್ಮ ಭಾರತೀಯ ಗೋತಳಿಗಳನ್ನು ಉಳಿಸಬೇಕಾಗಿದೆ .ಬನ್ನಿ …ನಾವೆಲ್ಲರೂ ಭಾರತ ಮಾತೆಯ ಮಡಿಲ ಮಕ್ಕಳು ..ಗೋಮಾತೆಯನ್ನು ಉಳಿಸೋಣ …ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗೋಣ …ವಂದೇ ಗೋಮಾತರಂ .

ಬರಹ :::: ” ಸುವಿಚಾರ “