ಮುಂದುವರಿದ ಭಾಗ:
ಹೆತ್ತವರ ಒಡಹುಟ್ಟಿದವರ ಭಾವನೆಗಳು ಒಂದು ರೀತಿಯಾದರೆ ಅವರಿಂದ ಬೆಳೆದ ಸಂಬಂಧಿಕರಲ್ಲಿ ಹತ್ತಿರದ ಸಂಬಂಧಿಕರು ದೂರದ ಸಂಬಂಧಿಕರು ಎನ್ನುವುದುಂಟು. ಸಂಬಂದಿಕರು ಅಷ್ಟಾಗಿ ಒಂದೇ ಊರಿನಲ್ಲಿ ಇರುವುದಿಲ್ಲ. ಇದ್ದರೂ ಅದು ಬಹಳ ಅಪರೂಪವೆಂದೇ ಹೇಳಬಹುದು. ದೊಡ್ಡ ದೊಡ್ಡ ನಗರಗಳಲ್ಲಿದ್ದರೂ ಪ್ರದೇಶಗಳು ಬೇರೆಯಾಗಿರುತ್ತವೆ. ಒಂದೇ ಊರಿನಲ್ಲಿ ಹತ್ತಿರವಿದ್ದರೆ ಒಡನಾಟ ಜಾಸ್ತಿ ಇರಬಹುದು. ಸಂಬಂಧಿಕರಲ್ಲಿ ಒಂದು ರೀರಿಯ ವಿಶ್ವಾಸದ ಬಾವನೆ ಇರುತ್ತದೆ.
ಈ ವಿಶ್ವಾಸದ ಬಾವನೆಗಳು ಅನೇಕ ಕಾರಣಗಳಿಂದ ಕಳೆದುಹೋಗಬಹುದು. ಸಾಲ ನೀಡಿ ಅದನ್ನು ಹಿಂದಿರುಗಿಸದೇ ಇದ್ದಲ್ಲಿ ಯಾವುದಾದರೂ ಕೆಲಸಗಳನ್ನು ಮಾಡಿಸಲು ಹೇಳಿದ್ದರೂ ಮಾಡದಿದ್ದಾಗ ಹೀಗೆ ಅನೇಕ ಕಾಋಣಗಳಿಂದ ಭಾವನೆಗಳು ಹೋಗಬಹುದು. ಇದರಿಂದ ಯಾರೂ ತಲೆ ಕೆಡಸಿಕೊಳ್ಳುವುದಿಲ್ಲ. ಸಂಬಂಧಿಕರು ದೂರದ ಊರುಗಳಲ್ಲಿದ್ದರೆ ಯಾವುದಾದರೂ ಸಮಾರಂಭಗಳಲ್ಲಿ ಭೇಟಿಯಾಗುತ್ತಾರೆ. ಸ್ವಂತ ಸಮಾರಂಭಗಳಲ್ಲಿ ಮಾತ್ರ ಭೇಟಿಯಾಗಬಹುದಷ್ಟೇ. ಉಳಿದ ದಿನಗಳಲ್ಲಿ ವಿಚಾರ ವಿನಿಮಯಗಳು ಇರುವುದಿಲ್ಲ. ಯಾವುದಾದರೂ ಕಾರ್ಯಕ್ರಮವಿದ್ದರೆ ಹತ್ತಿರದವರಾದರೆ ಮನೆಗೆ ಹೋಗಿ ಆಹ್ವಾನಿಸುತ್ತಾರೆ. ಇಲ್ಲದಿದ್ದಲ್ಲಿ ಆಹ್ವಾನ ಪತ್ರಿಕೆಯನ್ನು ಅಂಚೆ ಮೂಲಕ ಕಳುಹಿಸುವುದುಂಟು. ಸಾಮಾನ್ಯವಾಗಿ ಎಲ್ಲರನ್ನೂ ವೈಯುಕ್ತಿಕವಾಗಿ ಆಹ್ವಾನಿಸುವುದುಂಟು.
ಸಂಬಂಧಿಕರೆಂದು ಅಷ್ಟಾಗಿ ಯಾರೂ ಫೋನ್ಗಳನ್ನು ಸಹ ಮಾಡುವುದಿಲ್ಲ. ಅಷ್ಟಾಗಿ ಅದರ ಅವಶ್ಯಕತೆಯೂ ಇರುವುದಿಲ್ಲ. ಅಪರೂಪಕ್ಕೆ ಬೆಳಗಿನ ವೇಳೆಯಲ್ಲಿ ಯಾರಿಂದಲಾದರೂ ಫೋನ್ ಬಂದರೆ ಯಾರೋ ಮೃತರಾಗಿದ್ದಾರೆಂದೇ ಗ್ರಹಿಸಿ ಅನುಮಾನದಿಂದ ಫೋನ್ ಕರೆ ಸ್ವೀಕರಿಸುವುದುಂಟು. ಸಂಬಂಧಿಕರ ಒಡನಾಟ ಏನಿದ್ದರೂ ಸಂತೋಷ ಸಮಾರಂಭಗಳಲ್ಲಿ ಅಥವಾ ಯಾರಾದರೂ ಮೃತರಾದಾಗ ಮಾತ್ರ ಮನೆಗಳಿಗೆ ಹೋಗಬಹುದು. ಬೇರೆಕಡೆ ಛತ್ರಗಳಲ್ಲಿ ಸಮಾರಂಭ ನಡೆದರೆ ಆ ಸ್ಥಳಕ್ಕೆ ಹೋಗಿ ಬರುತ್ತಾರೆ. ಅಷ್ಟಾಇ ಮನೆಗಳಿಗೆ ಹೋಗುವುದಿಲ್ಲ. ಸುಮ್ಮ ಸುಮ್ಮನೆ ಹೋಗುವುದಕ್ಕೆ ಆಗುವುದೂಇಲ್ಲ. ಅಪರೂಪಕ್ಕೆ ಸಂಬಂಧಿಕರು ಇರುವ ಊರುಗಳಿಗೆ ಹೋಗಿದ್ದರೂ ಸಂಬಂಧಿಕರ ಮನೆಗಳಿಗೆ ಸಮಯದ ಅಭಾವದಿಂದ ಹೋಗಲು ಆಗುವುದಿಲ್ಲ. ತಮ್ಮ ಕೆಲಸವನ್ನು ಪೂರೈಸಿಕೊಂಡು ವಾಪಸ್ ಬರಬಹುದು.
ಒಡಹುಟ್ಟಿದವರು ಮತ್ತು ಸಂಬಂಧಿಕರ ಪ್ರೀತಿ ವಿಶ್ವಾಸದ ಭಾವನೆಗಳು ಒಂದು ರೀತಿಯಾದರೆ ಸ್ನೇಹಿತರ ಬಾವನೆಗಳು ಬಂದು ಹೋಗುವ ಭಾವನೆಗಳಾಗಿರುತ್ತದೆ. ಅಪರಿಚಿತರು ಅನಿರೀಕ್ಷಿತವಾಗಿ ಸ್ನೇಹಿತರಾಗಬಹುದು. ಆತ್ಮೀಯ ಸ್ನೇಹಿತರು ಕೆಲವೊಮ್ಮೆ ಸಹಾಯ ಮಾಡದೆ ಸ್ನೇಹವನ್ನು ಕಳೆದುಕೊಳ್ಳಬಹುದು. ಸ್ನೇಹವು ಯಾವಾಗಲೂ ಶಾಶ್ವತವಾಗಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಜೀವನದಲ್ಲಿ ಆಪ್ತ ಸ್ನೇಹಿತರು ಯಾರಾಗುತ್ತಾರೆ ಎನ್ನುವುದು ತಿಳಿಯುವುದಿಲ್ಲ. ಕೆಲವೊಮ್ಮೆ ಮುಖಪರಿಚಯವಾದರೂ ಸಹ ಅವರೇ ಸ್ನೇಹಿತರಾಗಬಹುದು. ಜೀವನದಲ್ಲಿ ಅದೆಷ್ಟೋ ಮಂದಿ ಸ್ನೇಹಿತರು ಬಂದು ಹೋಗಬಹುದು. ಶಾಲೆ ಕಾಲೇಜು ಕೆಲಸದ ಸ್ಥಳಗಳಲ್ಲಿ ಅನೇಕ ಸ್ನೇಹಿತರುಗಳು ಇದ್ದರೂ ಅವರು ಕಡೇವರೆಗೂ ಇರುವುದಿಲ್ಲ.
ಶಾಲೆ ಕಾಲೇಜುಗಳಲ್ಲಿ ಅದೆಷ್ಟೇ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರಾಗಿದ್ದರೂ ಓದು ಮುಗಿದ ಮೇಲೆ ಒಬ್ಬೊಬ್ಬರು ಒಂದೊಂದು ಕಡೆ ಹೋಗಬಹುದು. ನೆನಪು ಮಾತ್ರ ಉಳಿದಿರುತ್ತದೆ. ಒಂದೇ ಊರಿನಲ್ಲಿದ್ದರೂ ಸಹ ಕೆಲವೊಮ್ಮೆ ಆ ಸ್ನೇಹವು ಹಲವಾರು ಪ್ರಸಂಗಗಳಲ್ಲಿ ಕಳೆದು ಹೋಗಬಹುದು. ಸ್ನೆಹವಿದ್ದರೂ ವಿವಾಹಕ್ಕೆ ಹೋಗಲಿಲ್ಲವೆಂದು, ಸರಿಯಾದ ವೇಳೆಗೆ ಸಹಾಯ ಮಾಡಲಿಲ್ಲವೆಂದು, ಕೊಟ್ಟ ಸಾಲ ಹಿಂದಿರುಗಿಸಲಿಲ್ಲವೆಂದು ಹೀಗೆ ಅನೇಕ ಕಾರಣಗಳಿಂದ ಸ್ನೇಹವೆಂಬ ಸೇತುವೆ ಮುರಿದು ಬೀಳಬಹುದು. ಒಡಹುಟ್ಟಿದವರ ಮೇಲೆ ಇರುವಂತೆ ಪ್ರೀತಿಯ ಭಾವನೆ ಸ್ನೇಹಿತರುಗಳ ಮೇಲೆ ಅಷ್ಟಾಗಿ ಇರುವುದಿಲ್ಲ. ಸ್ನೇಹವೆಂಬ ಭಾವನೆ ಒಳಾಂತರ್ಯದಿಂದ ಬಂದಿರುವುದಿಲ್ಲ ಎನ್ನಬಹುದು.
ಮುಂದುವರಿಯುವುದು……..