ಮುಂದುವರಿದ ಭಾಗ:

ಆದರೆ ಸ್ನೇಹಿತ ಎಂದು ಹೇಳಬಹುದು ಬುದ್ದಿ ಬಂದಾಗಿನಿಂದ ಸಾಯುವವರೆಗೂ ಒಂದೇ ರೀತಿಯ ಸ್ನೇಹದಿಂದ ಇರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದಾದರೂ ಒಂದು ವಿಷಯದಲ್ಲಿ ಮನಸ್ತಾಪ ಬಂದರೂ ಹಳೆಯ ಸ್ನೇಹಿತನಲ್ಲವೇ? ಎಂದು ಉದಾರ ಮನಸ್ಸಿನಿಂದ ಮರೆತು ವ್ಯವಹರಿಸುವುದುಂಟು. ಇನ್ನು ಕೆಲವರು ಎಷ್ಟೇ ಹಳೆಯ ಸ್ನೇಹವಿದ್ದರೂ ಖಡಾ ಖಂಡಿತವಾಗಿ ತಿರಸ್ಕರಿಸುವುದುಂಟು.

ಒಬ್ಬ ಮನುಷ್ಯ ತನ್ನಜೀವನದಲ್ಲಿ ಸಾಕಷ್ಟು ಮುಂದುವರೆದು ಶ್ರೀಮಂತನಾದರೆ ಅವನ ಸ್ನೇಹಿತ ದುರಾದೃಷ್ಟವಶಾತ್ ಬಡವನಾಗಿಯೇ ಇದ್ದರೆ ಶ್ರೀಮಂತನಾದ ಸ್ನೇಹಿತನಿಗೆ ಮಾತನಾಡಿಸಲೂ ಸಹ ತಾಳ್ಮೆ ಇರುವುದಿಲ್ಲ. ಎಲ್ಲೋ ಕೆಲವರು ಮಾತ್ರ ತನ್ನ ಹಳೆಯ ಸ್ನೇಹಿತ ಎಂದು ಸಹಾಯ ಮಾಡಬಹುದು.

ಪವಿತ್ರವಾದ ಸ್ನೇಹಕ್ಕೆ ಯಾವುದೇ ಜಾತಿ ಧರ್ಮ, ಮೇಲು ಕೀಳು ಶ್ರೀಮಂತ ಬಡವ ಯಾವುದೂ ಇರುವುದಿಲ್ಲ. ಯಾರೂ ಸಹ ಜಾತಿ ಧರ್ಮ ನೋಡಿ ಸ್ನೇಹವನ್ನು ಮಾಡುವುದಿಲ್ಲ. ಸ್ನೇಹ ಮಾಡಲು ಎಲ್ಲರೂ ಒಂದೇ ಎಂಬ ಭಾವನೆ ಇರುತ್ತದೆ. ಯಾರು ಯವಾಗ ಸ್ನೇಹಿತರಾಗುವರೆಂದು ಹೇಳಲು ಆಗುವುದೊಲ್ಲ. ಒಂದೇ ಊರಿನಲ್ಲಿದ್ದು ಮುಖ ಪರಿಚಯವಿದ್ದವರೂ ಮಾತನಾಡಿಸದೇ ಇದ್ದವರು ಕೆಲವೊಮ್ಮೆ ಆಶ್ಚರ್ಯಕರ ರೀತಿಯಲ್ಲಿ ಯಾವುದಾದರೂ ಘಟನೆ ನಡೆದು ಸ್ನೇಹಿತರಾಗಬಹುದು. ‘ಎಲ್ಲಾ ಸ್ನೇಹಿತರು ಪರಿಷಯಸ್ಥರೇ ಆದರೆ ಎಲ್ಲಾ ಪರಿಚಯಸ್ಥರು ಸ್ನೇಹಿತರಲ್ಲ’.

RELATED ARTICLES  ಕಾವ್ಯಗಳನ್ನು ಏಕೆ ಓದಬೇಕು!

ಯಾರ ಸ್ನೇಹವೂ ಪರಿಪೂರ್ಣವಲ್ಲ. ಆತ್ಮೀಯ ಸ್ನೇಹಿತರು ಎಂದು ಹೇಳಬಹುದು ಆದರೂ ಸ್ವಲ್ಪವಾದರೂ ಮನಸ್ಸಿನಲ್ಲಿ ಅಳುಕು ಇದ್ದೇ ಇರುತ್ತದೆ. ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಗೊಂದಲವಾಗಿರುತ್ತದೆ. ಯಾರನ್ನು ಯಾರೂ ಪೂರ್ಣವಾಗಿ ನಂಬುವುದಿಲ್ಲ. ಯಾರಾದರೂ ಸಣ್ಣ ಸಹಾಯ ಮಾಡಿದರೆ ಕುರುಡುತನದಿಂದ ಭಾವುಕರಾಗಿ ಸ್ನೇಹಿತರನ್ನಾಗಿ ಮಾಡಿಕೊಳ್ಳಬಾರದು. ಅವರ ಪೂರ್ವೋತ್ತರಗಳನ್ನು ತಿಳಿದು ಸ್ನೇಹಿರಾಗಲು ಯೋಗ್ಯರೇ? ಎಂಬುದನ್ನು ಮನವರಿಕೆ ಮಾಡಿಕೊಂಡ ನಂತರ ನಂಬಿದರೆ ಒಳ್ಳೆಯದು.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

ದುಡುಕಿ ಸ್ನೆಹ ಮಾಡಿಕೊಂಡು ಅವರ ಮಾತಿಗೆ ಮರುಳಾಗಿ ವ್ಯವಹಾರವನ್ನು ಮಾಡಿದರೆ ಮೋಸಹೋಗುವ ಸಂಭವ ಇರುತ್ತದೆ. ಯಾರನ್ನೇ ಸ್ನೇಹ ಮಾಡಿದರೂ ಅವರು ಎಷ್ಟೇ ನಂಬಿಕಸ್ಥರಾಗಿದ್ದರೂ ಸಹ ಶೇಕಟಾ 75% ರ ಭಾಗ ಮಾತ್ರ ನಂಬಿದರೆ ಒಳ್ಳೆಯದು. ಮನುಷ್ಯ ಎಂದ ಮೇಲೆ ಒಳ್ಳೆಯವರು ಕೆಟ್ಟವರು ಇದ್ದೇ ಇರುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಒಳ್ಳೆಯವರು ಕೆಟ್ಟವರಾಗಬಹುದು. ಕೆಟ್ಟವರು ಎಂದು ಕೊಂಡಿದ್ದವರು ಸಹ ಒಳ್ಳೆಯವರಾಗಬಹುದು. ಎಲ್ಲವೂ ಅವರವರ ಮನಸ್ಥಿತಿಗೆ ಅನುಗುಣವಾಗಿರುತ್ತದೆ. ಒಡಹುಟ್ಟಿದವರು ಮೋಸಮಾಡಿ ಹಣವನ್ನು ಲಪಟಾಯಿಸಿದರೆ ನಮ್ಮವರು ತಿಂದುಕೊಳ್ಳಲಿ ಎಂದು ಸಮಾಧಾನ ಪಡಬಹುದು. ಆದರೆ ಹೊರಗಿನವರು ಮೋಸ ಮಾಡಿದರೆ ತಡೆದುಕೊಳ್ಳಲು ಆಗುವುದಿಲ್ಲ.

ಮುಂದುವರಿಯುವುದು……..