ಮುಂದುವರಿದ ಭಾಗ:

ಯುವಕರು ಹಾಗೂ ಗಂಡಸರ ಜೀವನದಲ್ಲಿ ಗಂಡಸರೇ ಸ್ನೇಹಿತರಾಗಿ ಬರಬಹುದು ಯಾವುದಾದರೂ ಕಾರಣಕ್ಕೆ ಮನಸ್ತಾಪ ಬಂದು ಸ್ನೇಹವೆಂಬ ಭಾವನೆ ಕಳೆದು ಹೋಗಬಹುದು. ಅಥವಾ ಕೆಲವರು ಸಾಯುವವರೆಗೂ ಶಾಶ್ವತವಾಗಿ ಸ್ಹೇಹದಿಂದ ಇರಬಹುದು. ಇದು ಅವರ ಖಾಸಗಿ ಜೀವನಕ್ಕೆ ಸಂಬಂಧಪಟ್ಟಿರುವುದರಿಂದ ಯಾವುದೂ ಅತಿ ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲ.

ಕೆಲವರ ಆತ್ಮೀಯ ಸ್ನೇಹಿತರು ಮೃತರಾದರೆ ಬೇರೆ ಸ್ನೇಹಿತನ ಮನಸ್ಸಿನಲ್ಲಿ ನನ್ನ ವಯಸ್ಸಿನವನು ಮೃತನಾದ ಯಾವುದೇ ಯೋಚನೆ ಇಲ್ಲ. ಆದರೆ ಅದೇ ವಯಸ್ಸಿನವನಾದ ನಾನಿನ್ನು ಬದುಕಿದ್ದೇನೆ ಇನ್ನೂ ಏನೇನು ಕಷ್ಟಗಳನ್ನು ಅನುಭವಿಸಬೇಕೋ? ಸ್ನೇಹಿತನು ಹೋದಂತೆ ನಾನೂ ಹೋಗಬಾರದೆ ಎಂದು ಹಂಬಲಿಸುವವರುಂಟು. ಆ ವೇಳೆಗೆ ಜೀವನ ಎಂಬುದು ಎಷ್ಟು ಕಷ್ಟವಾಗಿರುತ್ತದೆ ಎಂದು ಅವರ ಮನಸ್ಸಿನ ಭಾವನೆಯಿಂದ ತಿಳಿಯುತ್ತದೆ.

RELATED ARTICLES  ಜಪ-ತಪ-ಸಾಧನೆಗಳ ಸಾರ..

ಗಂಡಸರು ಹಾಗೂ ಯುವಕರು ಯಾರದ್ದಾದರೂ ಯುವತಿಯೇ ಇನ್ನೊಬ್ಬ ಯುವತಿಯ ಸ್ನೇಹವನ್ನು ಮಾಡಿದರೆ ಹಲವಾರು ಪ್ರಕರಣಗಳಲ್ಲಿ ಆ ಸ್ನೇಹವನ್ನು ಮರೆತು ಬಿಡಬಹುದು. ಆದರೆ ಒಬ್ಬ ಹುಡುಗ ಅಥವಾ ಹುಡುಗಿಯು ಕಾಲೇಜಿನಲ್ಲಿ ಅಥವಾ ಕೆಲಸ ಮಾಡುವ ಸ್ಥಳಗಳಲ್ಲಿ ಪರಿಚಯವಾದರೆ ಅದು ಸ್ನೇಹಕ್ಕೆ ತಿರುಗುತ್ತದೆ. ಸಾಮಾನ್ಯವಾಗಿ ಅದು ಸ್ನೇಹವಾಗಿ ಉಳಿದಿರುವುದಿಲ್ಲ. ಪರಿಚಯ ಸ್ನೇಹಕ್ಕೆ ತಿರುಗಿ, ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಯ ಮನಸ್ಸು ಬೆಳೆಸಿಕೊಂಡು ವಿವಾಹವಾಗಬೇಕೆನ್ನುವವರೆಗೂ ಮುಂದುವರೆಯುತ್ತದೆ.

RELATED ARTICLES  ಅಕ್ಕರೆ ಮತ್ತು ಮಗು

ಇದಕ್ಕೆ ಹೆತ್ತವರು ಒಪ್ಪದೇ ಇದ್ದಾಗ ಬಹಳ ದುಃಖವಾಗಿ ಕಡೆಗೆ ದುರ್ಬಲ ಮನಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳಬಹುದು. ಆದರೆ ಕೆಲವರು ಹೆತ್ತವರ ಆಶಯದ ವಿರುದ್ದ ತಾವು ಪ್ರೀತಿಸಿದ ಹುಡುಗ/ಹುಡುಗಿಯರು ವಿವಾಹವನ್ನು ಮಾಡಿಕೊಂಡು ಬೇರೆ ಹೋಗಬಹುದು. ಆಗ ಹೊಸ ಸ್ನೇಹವು ಪ್ರೀತಿಗೆ ತಿರುಗಿ ಹೆತ್ತವರ ಪ್ರೀತಿಯ ಭಾವನೆಗಳನ್ನು ಕಳೆದುಕೊಳ್ಳುವ ಸನ್ನಿವೇಶ ಬಂದೊದಗುತ್ತದೆ. ಹೊಸ ನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋದಂತೆ ಆಗುತ್ತದೆ.

ಮುಂದುವರಿಯುವುದು……..