ಮುಂದುವರಿದ ಭಾಗ:

ಹೆತ್ತವರು, ಒಡಹುಟ್ಟಿದವರು, ಸಂಬಂಧಿಕರು, ಸ್ನೇಹಿತರುಗಳ ಮೇಲಿನ ಭಾವನೆಗಳು ಒಂದು ರೀತಿಯಾದರೆ ದೇವರಲ್ಲಿ ಭಕ್ತಿಯ ಭಾವನೆ ಬರಲು ಮುಖ್ಯ ಕಾರಣ ಹೆತ್ತವರು. ಮಕ್ಕಳಿಗೆ ಹುಟ್ಟಿದಂದಿನಿಂದ ದೇವರು, ಗುರುಗಳು, ಹೆತ್ತವರು, ಒಡಹುಟ್ಟಿದವರಾರು ಎಂಬುದು ತಿಳಿದಿರುವುದಿಲ್ಲ. ದಿನಕ್ರಮೇಣ ಎಲ್ಲರೂ ಹೇಳಿಕೊಟ್ಟಂತೆ ಸಂಬಂಧಗಳನ್ನು ಗುರ್ತಿಸುತ್ತದೆ. ಆಗ ಅಮ್ಮ ಯಾರು? ಅಪ್ಪ ಯಾರು? ಒಡಹುಟ್ಟಿದವರು ಯಾರು? ಸಂಬಂಧಿಕರು ಯಾರು? ಬೇರೆಯವರು ಯಾರು? ಎಂದು ಬೆಳೆಯುತ್ತಾ ತಿಳಿದುಕೊಳ್ಳುತ್ತದೆ. ಹೆತ್ತವರು ದೇವಸ್ಥಾನಕ್ಕೆ ಹೋಗಿ, ದೇವರ ಮೂರ್ತಿಯನ್ನು ತೋರಿಸಿ, ಕೈ ಮುಗಿಯುತ್ತಾ, ಮಾಮಿಗೆ ಕೈ ಮುಗಿಯಪ್ಪಾ ಎಂದು ಹೇಳಿದರೆ ಮಗುವೂ ಕೂಡ ಹೆತ್ತವರಂತೆ ಕಣ್ಣುಮುಚ್ಚಿಕೊಂಡು ಕೈ ಮುಗಿಯುತ್ತದೆ. ಅದು ದೇವರಿಗೆ ಬೆನ್ನು ಮಾಡಿ ನಮಸ್ಕರಿಸಬಹುದು.

RELATED ARTICLES  ಸಾಧನೆ ಮಾಡುತ್ತಾ ಇರುವಾಗ ಸ್ಫುರಿಸಿದ ಕಾವ್ಯವೆಂದರೆ ಗುರುಕೃಪೆಯೆಂದೇ ತಿಳಿಯಬೇಕು! ಶ್ರೀಧರರ ವಾಣಿಯಿದು.

ದೊಡ್ಡವರು ಸರಿಯಾಗಿ ಹೇಳಿಕೊಟ್ಟಾಗ ತನ್ನ ಹೆತ್ತವರನ್ನು ಅನುಕರಿಸುತ್ತದೆ. ತನಗೆ ಬುದ್ದಿ ಬಂದ ಮೇಲೆ ಭಕ್ತಿ ಎಂಬ ಭಾವನೆ ಮೂಡುತ್ತದೆ. ಅದುವರೆವಿಗೆ ಭಕ್ತಿ ಗೌರವ ಏನು ಎಂದು ತಿಳಿದಿರುವುದಿಲ್ಲ. ಮನೆಯಲ್ಲಿ ಹೆತ್ತವರು ದೇವರ ಪೂಜೆ ಮಾಡುತ್ತಿದ್ದರೆ ಅವರ ಜೊತೆಗೆ ತಾನೂ ಮಾಡಲು ಮಗು ಹಂಬಲಿಸುತ್ತದೆ. ದೊಡ್ಡವರಾಗುತ್ತಿದ್ದಂತೆ ದೇವರ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ದೇವರ ಧ್ಯಾನವನ್ನು ಮಾಡಿ ಭಕ್ತಿಯನ್ನು ಮೂಡಿಸಿಕೊಳ್ಳುತ್ತಾರೆ. ಇನ್ನೂ ದೊಡ್ಡವರಾಗಿ ಕೆಲಸಕ್ಕೆ ಸೇರಿದ ನಂತರ ಕೆಲಸದ ಒತ್ತಡದಿಂದ ದೇವರ ಪ್ರಾರ್ಥನೆ ಮಾಡಲು ಸಮಯವಿಲ್ಲದೆ ಸ್ನಾನ ಮಾಡಿ ಕೈ ಮುಗಿದು ಹೋಗಬಹುದು. ರಜೆ ದಿನಗಳಲ್ಲ ಹಬ್ಬಗಳಲ್ಲಿ ಬಿಡುವಾಗಿದ್ದರೆ ಮಾತ್ರ ದೇವಸ್ಥಾನಕ್ಕೆ ಹೋಗಬಹುದು. ಬೇರೆಯವರ ಬಲವಂತಕ್ಕೆ ಒಮ್ಮೊಮ್ಮೆ ಹೋಗಬಹುದು. ಬರ ಬರುತ್ತಾ ದೇವರ ಮೇಲೆ ತಮ್ಮದೇ ಆದ ಸಿದ್ದಾಂತವನ್ನು ಮಾಡಿಕೊಳ್ಳಬಹುದು.

RELATED ARTICLES  ನಮ್ಮ ಯೋಧರು (ಕವನ)

ಓದುತ್ತಿರುವ ದಿನಗಳಲ್ಲಿ ದೇವರ ಮೇಲೆ ನಂಬಿಕೆ ಇಟ್ಟುಕೊಂಡರೆ ಒಂದು ರೀತಿಯ ಧೈರ್ಯವಿದ್ದಂತೆ ಇರುತ್ತದೆ. ಪರೀಕ್ಷೆಯ ದಿನಗಳಲ್ಲಿ ದೇವರಿಗೆ ವಂದಿಸಿ ಹೋಗುವುದು ರೂಢಿ. ದೇವರೇನು ಬಂದು ಪರೀಕ್ಷೆಯಲ್ಲಿ ಬರೆಯುತ್ತಾನೆಯೇ? ಎನ್ನಬಹುದು. ಅದು ನಿಜ ಪರೀಕ್ಷೆಯಲ್ಲಿ ಯಾವ ದೇವರು ಬಂದು ಬರುವುದಿಲ್ಲ. ಆದರೆ ದೇವರ ಮೇಲೆ ಇಟ್ಟಿರುವ ನಂಬಿಕೆ ಇಟ್ಟು ಓದಿದರೆ ಮನಸ್ಸಿಗೆ ಒಂದು ರೀತಿಯ ಧೈಯ್ ಬಂದು ಓದಿದ ಪಾಠ ನೆನಪಿನಲ್ಲಿ ಉಳಿಯುವಂತಾಗುತ್ತದೆ. ಮನಸ್ಸಿನಲ್ಲಿ ರ್ಧೈವಿಲ್ಲದಿದ್ದರೆ ಹತ್ತು ಸಲ ಓದಿದರೂ ಓದಿದ್ದು ತಲೆಯಲ್ಲಿ ನಿಲ್ಲುವುದಿಲ್ಲ. ಪರೀಕ್ಷೆಯಲ್ಲಿ ಭಯ ಬಂದು ಓದಿರುವುದನ್ನು ಬರೆಯಲು ಆಗದೆ ಇರಬಹುದು.

ಮುಂದುವರಿಯುವುದು……..