ಮುಂದುವರಿದ ಭಾಗ:

ಒಬ್ಬೊಬ್ಬರ ಭಕ್ತಿ ಒಂದೊಂದು ರೀತಿ ಇರುತ್ತದೆ. ಯಾವ ರೀತಿಯಲ್ಲಿ ಸಮಾಧಾನವಾಗುವುದೋ ಅದೇರೀತಿ ದೇವರನ್ನು ಧ್ಯಾನಿಸಿ ಪೂಜಿಸಿ ಪ್ರಾರ್ಥಿಸಬಹುದು. ಇದನ್ನು ಯಾರೂ ಪ್ರಶ್ನಿಸಲಾರರು. ಹಲವಾರು ಕಾರಣಗಳಿಂದ ಮನುಷ್ಯನಿಗೆ ದೇವರ ಮೇಲೆ ಭಕ್ತಿಯ ಭಾವನೆ ಕಡಿಮೆಯಾಗಬಹುದು. ಆದರೆ ಪೂರ್ಣವಾಗಿ ಹೋಗುವುದಿಲ್ಲ. ಮನಸ್ಸಿನ ಶಾಂತಿಗಾಗಿಯಾದರೂ ದೇವರ ಧ್ಯಾನ ಮಾಡುತ್ತಾರೆ.

ಮನುಷ್ಯ ತಾನು ಚಿಕ್ಕಂದಿನಿಂದಲೂ ದೇವರನ್ನು ನಂಬಿ ಪೂಜಿಸಿ ದೊಡ್ಡವನಾದ ಮೇಲೆ ದೇವರನ್ನು ನಂಬುವುದಿಲ್ಲ ಎಂದರೂ ಅವರ ಮನಸ್ಸಿನೊಳಗೆ ಒಂದು ರೀತಿಯ ಭಕ್ತಿ ಭಾವನೆ ಇದ್ದೇ ಇರುತ್ತದೆ. ಜೊತೆಗೆ ದೇವರನ್ನು ನಿಂದಿಸಿದೆನೆಂದು ಮನಸ್ಸಿನಲ್ಲಿ ಅಳುಕು ಇರುತ್ತದೆ. ಅಪರಾಧ ಮನೋಭಾವ ಬಂದು ಏಕಾಂಗಿಯಾಗಿ ತಮ್ಮ ನೆಮ್ಮದಿಗಗಿ ದೇವರಲ್ಲಿ ಕ್ಷಮೆ ಕೋರಬಹುದು.

RELATED ARTICLES  ಹೊಟ್ಟೆರಾಯರ ಅಟ್ಟಹಾಸ…..!

ದೇವರನ್ನು ನಂಬುವುದಿಲ್ಲ ಆದರೂ ಸುಖದಿಂದ್ದೇನೆ ಎಂದರೆ ಇವರಿಗೆ ಸುಖ ನೆಮ್ಮದಿ ಬಂದಿರುವುದು ಚಿಕ್ಕಂದಿನಿಂದ ಮಾಡಿರುವ ಪೂಜೆಯಿಂದ ಹಾಗೂ ಅವರ ವಂಶಜರು ಮಾಡಿದ ಪುಣ್ಯ ಫಲದಿಂದ ಎಂದು ತಿಳಿದಿರುವುದಿಲ್ಲ. ಎಲ್ಲರ ಹಿರಿಯರುಗಳು ಅವರ ವಂಶಕ್ಕೆ ಒಳ್ಳೆಯದಾಗಲಿ ಎಂದು ದೇವರನ್ನು ಪೂಜಿಸಿ ಪ್ರಾರ್ಥಿಸುವುದರ ಜೊತೆಗೆ ತಮ್ಮ ವಂಶಜರು ಸುಖವಾಗಿರಲೆಂದು ಕಾಳಜಿ ವಹಿಸುವುದರಿಂದಲೂ ಸಹ ದೇವರನ್ನು ನಂಬುವುದಿಲ್ಲ ಎನ್ನುವವರು ಸುಖವಾಗಿರಬಹುದು.

ದೇಶದ ಬಗ್ಗೆ ಭಕ್ತಿ ಗೌರವದ ಭಾವನೆಯ ಬಗ್ಗೆ ಹೇಳುವುದಾದರೆ ದೇಶ ಭಾಷೆ ರಾಜ್ಯದ ಬಗ್ಗೆ ಪ್ರೀತಿ ಗೌರವ ಅಭಿಮಾನ ಹೆಮ್ಮೆಯ ಭಾವನೆ ಯಾವತ್ತೂ ದೇಶಭಕ್ತರ ಮನಸ್ಸಿನಿಂದ ಹೋಗುವುದಿಲ್ಲ. ಇದನ್ನು ಯಾರೂ ಯಾರಿಗೂ ಹೇಳಿಕೊಡಬೇಕಾದ ಅಗತ್ಯ ಇರುವುದಿಲ್ಲ. ಚಿಕ್ಕ ಮಕ್ಕಳಿಗೆ ಮಾತ್ರ ಇವುಗಳ ಬಗ್ಗೆ ಹೇಳಿಕೊಟ್ಟರೆ ಸಾಯುವವರೆಗೂ ಅದು ಹೋಗುವುದಿಲ್ಲ. ನಮ್ಮ ದೇಶ ರಾಜ್ಯ ಯಾವುದಾದರೂ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದರೆ ಅದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿರುತ್ತದೆ. ನಮ್ಮ ದೇಶದಲ್ಲಿ ಅನೇಕ ರಾಜ್ಯಗಳಿದ್ದು, ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಭಾಷೆ ವೈಶಿಷ್ಠ್ಯ ಇತಿಹಾಸ ಪರಂಪರೆ ಇದೆ.

RELATED ARTICLES  ಕಳೆದು ಹೋದ ಎಳೆಯ ದಿನಗಳು (ಭಾಗ 28)

ಮುಂದುವರಿಯುವುದು……