(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಈ ಲೋಕದ ಜೀವನ ಜೀವಿಯ ಇಷ್ಟ ಸಿದಿ್ಧಗೆ ಒಂದು ಸಾಧನ. ಜೀವಿಗಳ ಅಪೇಕ್ಷೆ ಅನೇಕ; ಆದರೆ ಅವೆಲ್ಲದರ ಕೇಂದ್ರ ಒಂದೇ! ಅದೇ ಅನಂತ ಸುಖ; ಅಖಂಡ ಆನಂದ! ಇದನ್ನು ಸಾಧಿಸುವ ವಿಷಯದಲ್ಲಿ ಎಲ್ಲ ಪ್ರಾಣಿಗಳ ‘ಅಪೇಕ್ಷೆ’ಗಳಿಗೂ ಒಂದೇ ಬಗೆಯ ಮಹತ್ವವಿದೆ.
ಈ ಗುರಿ ಸಾಧ್ಯತೆಯ ಮಾರ್ಗದಲ್ಲಿ ಬೇರೆ-ಬೇರೆ ಪ್ರಾಣಿಗಳಲ್ಲಿ ಅಧಿಕಾರ ಭೇದವಿರಬಹುದು; ಅವುಗಳ ಸಾಧನಗಳಲ್ಲಿ ತಾರತಮ್ಯವಿರಬಹುದು; ಪ್ರಕೃತಿಯ ವೈಚಿತ್ರವು ಈ ಮಾರ್ಗವನೇ್ನ ತಿರುವು-ಮುರುವಾಗಿಸಬಹುದು. ಆದರೆ ಅವೆಲ್ಲವುಗಳ ‘ಅಪೇಕ್ಷೆ’ಯು ಮಾತ್ರ ಒಂದೇ ಕೇಂದ್ರದ ಕಡೆಗೆ ಹರಿಯುತ್ತವೆಂಬುದನ್ನು ಅಲಕ್ಷಿಸಲಾಗದು.

RELATED ARTICLES  ಕರ್ಮಪ್ರವಾಹದಲ್ಲಿ ತೇಲುತ್ತ, ಹುಟ್ಟುತ್ತ, ಸಾಯುತ್ತ ಸಾಗಿದಾಗ ಯಾವುದೋ ಪುಣ್ಯದ ಫಲವಾಗಿ ದೊರಕುವದು ನರಜನ್ಮ!

‘ಅನುಭವಗಳಿಂದ ಸಂಸ್ಕಾರಕೊಡುತ್ತ, ಪಳಗಿಸುತ್ತ ಜೀವಿಗಳನ್ನೆಲ್ಲ ಅದೇ ಕೇಂದ್ರ ಸೆಳೆಯುತ್ತ, ನಡೆಯಿಸಿಕೊಂಡು ಹೋಗುತ್ತದೆ’ ಎಂಬುವದನ್ನು ಮರೆಯಲಾಗದು. ಸೆಳೆತದ ಕೇಂದ್ರ ಒಂದೇ – ಅನಂತ, ಅಖಂಡ ಸುಖ!
ಆದರೂ ಜೀವಿಗಳಲ್ಲಿ ಇರುವ ತಾರತಮ್ಯವನ್ನು ಮರೆಯುವಂತಿಲ್ಲ. ಇತರ ಪ್ರಾಣಿಗಳಲ್ಲಿಯೂ ಮನುಷ್ಯರಲ್ಲಿಯೂ ಒಂದು ದೊಡ್ಡ ಸ್ವಾಭಾವಿಕ ಭೇದವುಂಟು. ಸುಖಪ್ರಾಪ್ತಿಗೆ ಬೇಕಾದ ಸಾಧನ ಇತರ ಪ್ರಾಣಿಗಳಲ್ಲಿ ಸೀಮಿತವಾಗಿದೆ ಮತ್ತು ಅವು ಪರಿಸ್ಥಿತಿಗೆ ಆಧೀನವಾಗಿದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಅಂದರೆ ಮನುಷ್ಯನಲ್ಲಿರುವ, ಪರಿಸ್ಥಿತಿಯನ್ನು ಗೆದ್ದು, ಅದನ್ನು ಆಳುವ, ಅನುಭವಿಸುವ ಬುದ್ಧಿಶಕ್ತಿ, ಆ ಪ್ರಾಣಿಗಳಲ್ಲಿರುವದಿಲ್ಲ. ಕೇವಲ ಇಂದ್ರಿಯಗಮ್ಯ ವಿಷಯಗಳ ಬಗ್ಗೆ ಹಪಹಪಿಸುತ್ತ, ಅಲೆಯುತ್ತ, ಸಿಕ್ಕಿದಷ್ಟು ಅನುಭವಿಸುತ್ತ ಬಾಳಿ ಸಾಯುತ್ತವೆ.
ಇಂದ್ರಿಯಗಳ ಆಳವನ್ನು ಮೀರಿದ ಕಲೆ, ವಿಜ್ಞಾನ, ವಿವೇಕಮೂಲದ ಆನಂದ ಅವುಗಳಿಗೆ ನಿಲುಕುವಂತಹದಲ್ಲ.

ನಿರಂತರ ಸುಖಾಪೇಕ್ಷೆ ಅವುಗಳಿಗೆ ಇರಬಹುದು. ಆದರೆ ಅದಕ್ಕೆ ತಕ್ಕ ಅರ್ಹತೆ ಅವುಗಳಿಗಿರುವದಿಲ್ಲ. ಇಂದ್ರಿಯಗಳಾಚೆಗಿನ ಸುಖ ಶೋಧನೆ ಅವುಗಳಿಗೆ ಅಸಾಧ್ಯ. ಆದರೆ ಇಂದ್ರಿಯಸುಖ ಎಂದೂ ನಿರಂತರ ಸುಖವಲ್ಲ; ಸಂಪೂರ್ಣ ಸುಖವಲ್ಲ.