(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಜೀವನವನ್ನು ದಿನ-ದಿನವೂ ಉಚ್ಚಮಟ್ಟಕ್ಕೆ ಏರಿಸುವದೇ ಮನುಷ್ಯಧರ್ಮ. ಇದೇ ಮಾನವ ಜೀವನದ ವೈಶಿಷ್ಟ್ಯ.
ಮಾನವ ತನ್ನನ್ನು ತಾನೇ ಈ ಉನ್ನತಮಾರ್ಗಕ್ಕಾಗಿ ಪಳಗಿಸಿಕೊಳ್ಳಬಲ್ಲ. ಪರಿಪೂರ್ಣತೆಗಾಗಿ, ಹುಟ್ಟಿನಿಂದ ಹಂಬಲಿಸಿದ ಅಖಂಡ ಸುಖಕ್ಕಾಗಿ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳಬಲ್ಲ.

ಬರೇ ಆಹಾರಾದಿಗಳಲ್ಲೇ ತೊಡಗಿದ ಜೀವನವು ಪಶು-ಪಕ್ಷಿಗಳ ಜೀವನವಾಗಿರುವದು. ಈ ರೀತಿಯ ಜೀವನ ಪ್ರಾಣಿಗಳ ಲಕ್ಷಣ.
ಮನುಷ್ಯ ದೇಹದ ವೈಶಿಷ್ಟ್ಯ ಬರೇ ದೇಹ ಬದುಕಿರುವದಕ್ಕಾಗಲೀ ಅಥವಾ ಕೇವಲ ವ್ಯವಹಾರಿಕ ಜೀವನಕ್ಕಾಗಿಯಾಗಲೀ ಅಲ್ಲ; ಇದಕ್ಕಿಂತ ಹೆಚ್ಚಿನದನ್ನು ಸಾಧಿಸುವುದಕ್ಕಾಗಿಯೇ ಮನುಷ್ಯದೇಹವಿದೆ!

RELATED ARTICLES  ಗೋವೆಂದರೆ ಬರಿಯ ದೇವರಲ್ಲ ಭಾರತೀಯರ ಪಾಲಿಗೆ ಎಲ್ಲವೂ..

ಶಬ್ಧ, ಸ್ಪರ್ಶ, ರೂಪ, ರಸ, ಗಂಧಗಳೂ, ಆಹಾರ, ನಿದ್ರಾ, ಭಯ, ಮೈಥುನಾದಿಗಳೂ ಎಲ್ಲ ಕಡೆಗೂ ಇರುವ ಸಾಮಾನ್ಯ ಅನುಭವಗಳು. ಇವುಗಳ ವೈವಿಧ್ಯತೆ ಮತ್ತು ಸಂಗ್ರಹವೇ ಮನುಷ್ಯದೇಹದ ಪರಮಕರ್ತವ್ಯವೆಂದು ತಿಳಿಯಕೂಡದು. ‘ಇವೇ ನಮ್ಮ ಜೀವನಧ್ಯೇಯ; ಜೀವನದಲ್ಲಿ ಸಾಧಿಸುವದು ಇದೇ’ ಎಂದೂ ಭಾವಿಸಬಾರದು.

RELATED ARTICLES  ಎದೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಜನಪ್ರಿಯ ಚಲನಚಿತ್ರ ನಟ.

ದೇಹಸುಖಕ್ಕೆ ಅನುಕೂಲವಾದ ಉಪಕರಣಗಳನು್ನ ಹೆಚ್ಚಿಸುತ್ತಾ ಅವುಗಳ ಸಲುವಾಗಿಯೇ ಪರಿಶ್ರಮಪಡುತ್ತಾ ಆಯುಷ್ಯವನ್ನು ಕಳೆಯುವದು ಮನುಷ್ಯ ಜನ್ಮದ ಲಕ್ಷಣವೆನಿಸುವದಿಲ್ಲ. ಇಂದ್ರಿಯಸುಖಕ್ಕಿಂತಲೂ, ವಿಷಯಸುಖಕ್ಕಿಂತಲೂ, ದೇಹಸುಖಕ್ಕಿಂತಲೂ ಪದಾರ್ಥಸುಖಕ್ಕಿಂತಲೂ ಹೆಚ್ಚಿನದನ್ನು ಸಾಧಿಸುವದೇ ಮನುಷ್ಯಜನ್ಮದ ಗುರಿಯಾಗಿದೆ. ಆ ಹೆಚ್ಚಿನ ಗುರಿಗಾಗಿಯೇ ಮನುಷ್ಯನು ಪ್ರಯತ್ನಮಾಡಬೇಕಾದದ್ದು ಮುಖ್ಯ!