ಲೇಖನ :- ಸಚಿನ್ ಹಳದೀಪುರ

ಸದ್ಯಕ್ಕೆ ಭಾರತದಲ್ಲಿ ಕೇಂದ್ರದ ಆಡಳಿತ ಪಕ್ಷದಲ್ಲಿ ಮಿಂಚುತ್ತಿರುವ ಹೆಸರುಗಳ ಪೈಕಿ ಅರುಣ ಜೇಟ್ಲಿ ಎಂಬ ಹೆಸರು ಕೂಡಾ ಒಂದೂ. ಇವರ ಧೀರತೆಯ ಮಾತುಗಳು , ದೂರದ್ರಷ್ಠಿತ್ವದ ಆಡಳಿತ ಎಲ್ಲರಿಗೂ ಕಣ್ಣು ಮಿಣಕಿಸುತ್ತಿರುವುದು ಸುಳ್ಳಲ್ಲ.ಅದು ಹಾಗೆಯೇ ಮುಂದುವರಿಯಲ್ಲಿ ಎನ್ನುವ ಆಶಯ , ಮುಂದುವರಿಯುತ್ತಾರೆ ಎನ್ನುವ ಭರವಸೆ ನನ್ನದು.

ಇನ್ನೂ ನೇರವಾಗಿ ವಿಷಯಕ್ಕೆ ಬರುತ್ತೇನೆ……..

ಇತ್ತೀಚ್ಚಿಗೆ ಸಿ. ಎ. ಜಿ ಯ ವರದಿ ಪ್ರಕಾರ ಚೀನಾ ಮತ್ತು ಭಾರತದ ಯುದ್ಧ ಆರಂಭವಾದರೇ……., ಯುದ್ಧ ಆರಂಭವಾದ 10 ದಿನದಲ್ಲಿ ಭಾರತದ ಶಸ್ತ್ರಾಸ್ತಗಳು ಖಾಲಿಯಾಗಲಿವೆ ಎನ್ನುವ ವರದಿ ಕೇಳಿ ಈಡಿಯ ದೇಶದ ಜನ ಬೆಕ್ಕಸ ಬೆರಗಾಗಿದ್ದು ನಿಜಾ……ಆದರೆ ಸಿ.ಎ.ಜಿ ಯ ವರದಿಯ 2 ದಿನಗಳ ತರುವಾಯ ಅರುಣ ಜೇಟ್ಲಿ ಮಾತನಾಡುತ್ತ ನಮ್ಮ ದೇಶ ಯುದ್ಧಕ್ಕೆ ಸಿದ್ಧವಾಗಿ ನಿಂತಿದೆ ಎಂದರು.ಆಗ ಮತ್ತೆ ಜನತೆಯ ಮುಖದಲ್ಲಿ ಒಂದೂ ರೀತಿಯ ಹರ್ಷ ಕಂಡು ಬಂದಿತು.ಆದರೆ ತಮ್ಮ ಈ ಮಾತನ್ನು ಒಪ್ಪಿಕೊಳ್ಳುವುದು ಹೇಗೆ….?ಎನ್ನುವುದೇ ನನ್ನ ಪ್ರಶ್ನೆ.ಸಿ.ಎ. ಜಿ ಯ ವರದಿ ಬಂದ ತಕ್ಷಣ ಅಗಸ್ಟನಲ್ಲಿ ಅನೇಕ ಶಸ್ತ್ರಾಸ್ತಗಳು ಸೇನೆ ಬಂದು ಸೇರಿ ಕೊಳ್ಳಲಿವೆ ಎನ್ನುವ ಮಾತುಗಳು ಶಸ್ತ್ರಾಸ್ತ್ರಗಳ ಕೊರತೆಯನ್ನು ಸಮದೂಗಿಸುವ ಪ್ರಯತ್ನ ಅಲ್ಲವೇ…..? ಪರೋಕ್ಷವಾಗಿ ನಮ್ಮಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಎಂದು ಒಪ್ಪಿಕೊಂಡಂತೆ ಅಲ್ಲವೇ…..?ಆಗಲಿ ಬಿಡಿ ಜನತೆಗೆ ಗಾಬರಿ ಆಗದಿರಲಿ ಎನ್ನುವ ಸದುದ್ದೇಶದಿಂದ ಹೇಳಿದ್ದೆ ಆದಲ್ಲಿ ಬಹಳ ಒಳ್ಳೆಯದು.ಆದರೆ ಕೆಲವೊಮ್ಮೆ ಅಮೃತವೂ ವಿಷವಾಗುತ್ತದೆಯಂತೆ.ಯಾಕೆಂದರೆ ಈ ಹಿಂದೆ 1962ರಲ್ಲಿ ಭಾರತ ಮತ್ತು ಚೀನಾ ಯುದ್ಧ ಆರಂಭವಾಗುವ ವೇಳೆಯಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಇದ್ದಾಗಲೂ ಸಹಿತ ಸೈನಿಕರನ್ನು ಹುರಿದುಂಬಿಸುವ ಭರದಲ್ಲಿ,ಜನತೆಯ ಮೆಚ್ಚುಗೆ ಪಡೆಯುವಲ್ಲಿ “ಚೀನಾದೊಂದಿಗೆ ಯುದ್ಧ ಮಾಡಲು ನಾವೂ ಸಂಪೂರ್ಣವಾಗಿ ಸಿದ್ಧರಿದ್ದೇವೆ “ಎನ್ನುವ ಘೋಷಣೆಗಳು ಕೇಳಿ ಬಂದಿದ್ದವು.ನಂತರದಲ್ಲಿ ಆದದ್ದು ನಮಗೆ ಗೊತ್ತಿದ್ದೆ.ನಮ್ಮವರು ಹೇಳಿದ್ದೆ ಒಂದೂ……. ಮಾಡಿದ್ದೆ ಒಂದೂ………. ಆದದ್ದೇ ಒಂದೂ……ಹಾಗಾಗಿ 1962ರ ಯುದ್ಧದಲ್ಲಿ 2000 ಸೈನಿಕರನ್ನು ನಾವು ಕಳೆದುಕೊಳ್ಳಬೇಕಾಗಿ ಬಂತು. ಅವತ್ತಿನ ಅವಮಾನ ಇವತ್ತಿಗೂ ನಮ್ಮನ್ನು ಕಾಡುತ್ತಿದೆ ಜೊತೆಯಲ್ಲಿಯೇ ನಮ್ಮವರ ರಕ್ತ ಕುದಿಯುವಂತೆ ಮಾಡುತ್ತದೆ.1962ರ ಕದನ ಈಗಾ ಇತಿಹಾಸವೇ ಅದು ಮತ್ತೆ ಮರಕಳುಹಿಸದೆ ಇರಲಿ .ಹಾಗಂತ ಇತಿಹಾಸವೆಂದರೆ ಹಿಂದೆ ನಡೆದದ್ದು ಈಗಾ ಯಾಕೆ ಎಂದು ಮರೆಯುವಂತಿಲ್ಲ. ಯಾಕಂದರೆ ಇತಿಹಾಸದ ಸೋಲಿನ ಪಾಠವೇ ನಮಗೆ ಮುಂದಿನ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತದೆ.ಹಿಂದಿನ ತಪ್ಪುಗಳನ್ನು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿ ನಮ್ಮ ಸೈನಿಕರ ಪ್ರಾಣವನ್ನು ಕಾಪಾಡುವ ಹೊಣೆಯನ್ನು ನಿಮ್ಮ ಮೇಲೆ ಇದೆ .ಯಾವುದೇ ಕಾರಣದಿಂದಲೂ ನಮ್ಮವರಿಗೆ ತೊಂದರೆ ಆಗದ ರೀತಿಯಲ್ಲಿ ನಿಮ್ಮ ನಡೆ ,ನುಡಿ ಇರಲಿ .ನಮ್ಮಲ್ಲಿ ಕೊರತೆ ಇದ್ದಿರಬಹುದು ಅದನ್ನು ಬೇರೆಯವರು(ಅಮೆರಿಕ) ಬರಿಸುತ್ತಾರೆ ಎನ್ನುವ ನಂಬಿಕೆ ಕೂಡಾ ಒಳ್ಳೆಯದಲ್ಲ.ಅಕಸ್ಮಾತ ನಮ್ಮ ಬಳಿ ಶಸ್ತ್ರಾಸ್ತ್ರ ಇದ್ದದ್ದೇ ಹೌದಾದರೆ , ಸಿ.ಎ. ಜಿ ಯ ವರದಿ ಸಂಪೂರ್ಣ ಸುಳ್ಳು ಎಂಬ ಹೇಳಿಕೆ ನೀಡು ಬಹುದಿತ್ತಲ್ಲ……ಆದರೆ ನೀವು ಆ ಹೇಳಿಕೆ ನೀಡದೆ ,ಯುದ್ಧಕ್ಕೆ ನಾವು ಸಿದ್ಧರಿದ್ದೇವೆ ಎನ್ನುವ ಹೇಳಿಕೆ ನೀಡಿದ್ದೀರಿ.ಯುದ್ಧದ ಸಮಯದಲ್ಲಿ ಎಂತಹದ್ದೇ ಪರಿಸ್ಥಿತಿ ಬಂದರೂ ದೃತಿಗೆಡದ ಸೈನಿಕರು ನಮ್ಮಲ್ಲಿ ಇದ್ದಾರೆ. ಹಾಗಂತ ಅವರನ್ನು ಮೃತ್ಯುಕೂಪಕ್ಕೆ ತಳ್ಳುವ ತಪ್ಪು ನಿಮ್ಮಿಂದ ಆಗದಿರಲಿ.ಮುಂದಿನ ದಿನಗಳಲ್ಲಿ ಎಂತದ್ದೆ ಪರಿಸ್ಥಿತಿ ಎದುರಾದಲ್ಲಿ ನಿಮ್ಮ ಆಡಳಿತದ ಹೊಣೆಗಾರಿಕೆಯು ಉತ್ತಮವಾಗಿರಲಿ ಎನ್ನುವ ಆಶಯದ ಮೇಲೆ ಪೂರ್ಣವಿರಾಮವನ್ನು ನೀಡುತ್ತಿದ್ದೇನೆ.

RELATED ARTICLES  ಭಾಗ್ಯಗಳ ಸುರಿಮಳೆ ಇದ್ದರೂ ಸರಕಾರಿ ಶಾಲೆ ಸೋರುತಿದೆ ಏಕೆ?