ನಮ್ಮಲ್ಲಿ ಸಂಕಟ ಬಂದಾಗ ವೆಂಕಟರಮಣ ಎನ್ನುವ ಮಾತಿದೆ.ಈ ಮಾತಿನ ಪ್ರಕಾರವೇ ಹೇಳುವುದಾದರೆ ಅನಾರೋಗ್ಯವಾದಾಗ ವೈದ್ಯರು ,ಕಷ್ಟ ಬಂದಾಗ ದೇವರು ,ಇನ್ನೂ ಯುದ್ಧ ಬಂದಾಗ ಸೈನಿಕರು ನೆನಪಾಗುತ್ತಾರೆ.ಇದಕ್ಕೆ ಸಾಕ್ಷಿಯಾಗಿ ಕಾರ್ಗಿಲ್ ವಿಜಯ ದಿವಸ ನಿಂತಿದೆ.ಕಳೆದ 18 ವರ್ಷಗಳ ಹಿಂದೆ ನಮ್ಮ ಸೈನಿಕರು ಪಾಕಿಸ್ತಾನವನ್ನು ಕಾರ್ಗಿಲನಿಂದ ಹೆಡೆಮುರಿ ಕಟ್ಟಿದ್ದರು.ಆದರೆ ಕಳೆದ 17 ವರ್ಷಗಳಿಂದ ಇದರ ಯಾವುದೇ ಸಂಭ್ರಮವನ್ನು ಆಚರಿಸದ ನಮ್ಮವರು ಈ ಬಾರಿ ಕಳೆದ ಸಲದ ತಯಾರಿಗಿಂತ ಜೋರಾಗಿ ತಯಾರಿ ನಡೆಸಿ,ಅನೇಕ ಕಡೆಗಳಲ್ಲಿ ಕಾರ್ಗಿಲ ವಿಜಯ ದಿವಸ ಆಚರಿಸಿದ್ದಾರೆ.ಇದು ದೇಶಕ್ಕೆಂದು ಬಲಿದಾನಗೈದ ಹುತಾತ್ಮರನ್ನು ನೆನೆಯುವ ದಿನ ಎನ್ನುವ ಜೊತೆಯಲ್ಲಿ ದೇಶದ ಪವಿತ್ರ ಕೆಲಸ ಎಂದರೆ ತಪ್ಪಾಗಲಾರದು.ದೇಶದ ವಿಷಯ ಬಂದ ಕೂಡಲೇ ಯಾವುದೇ ಜಾತಿ,ಮತ, ಪಂಥ,ಪಕ್ಷ ಎಂಬ ಭೇದಭಾವವನ್ನು ಮರೆತು ನಾವೆಲ್ಲಾ ಒಂದೇ ಎನ್ನುವ ಭಾವಯುಕ್ತ ರಣಮಂತ್ರ ನಮ್ಮ ದೇಶದಲ್ಲಿ ಕಂಡು ಬರುತ್ತದೆ. ಹಾಗಾಗಿ ಈ ಆಚರಣೆಯಲ್ಲಿ ಯಾವುದೇ ರೀತಿಯ ಭೇದ ಭಾವವನ್ನು ತೋರದ ಉತ್ಸಾಹಿ ಪಡೆ ಕಾರ್ಗಿಲ ವಿಜಯ ದಿವಸ ಆಚರಣೆ ಮಾಡಿರುವುದು ಸೈನಿಕರಿಗೆ ಪ್ರೇರಣೆ ದೊರೆಯುವ ಜೊತೆಯಲ್ಲಿ ದೇಶ ಬಾಂಧವರಿಗೆ ಇದು ತುಂಬಾ ಸಂತಸದ ವಿಷಯವೇ.
ಸೈನ್ಯವು ಕೂಡಾ ರಾಜಕೀಯದಿಂದ ದೂರ ಉಳಿದ ಪರಿಣಾಮ ಎಲ್ಲಾ ಜನರಿಗೂ ,ಸೈನ್ಯದ ಮೇಲೆ ವಿಶ್ವಾಸವಿದೆ.ಈ ವಿಶ್ವಾಸವು ಜನರ ಆಕ್ರೋಶದಿಂದ ಅಥವಾ ನೋವಿನ ಮೂಲಕ ಸೈನಿಕರು ಹುತಾತ್ಮರಾದಾಗ ಹೊರ ಹೊಮ್ಮುತ್ತದೆ.ಅವರಿಗಾಗಿ ಕ್ಷಣ ಹೊತ್ತು ಮನಸ್ಸು ಮಿಡಿಯುತ್ತದೆ. ಇತ್ತೀಚ್ಚಿಗಷ್ಠೆ ಕಾಂಗ್ರೆಸ ವಕ್ತಾರ ರಶೀದ್ ಅಲ್ವಿ ಕಾರ್ಗಿಲ ಯುದ್ಧ ಅದು ನಮ್ಮ ದೇಶದ ಯುದ್ದವಲ್ಲ ಅದು ಬಿಜೆಪಿಯ ಯುದ್ಧ ಹಾಗಾಗಿ ನಾವು ಏಕೆ ಆಚರಣೆ ಮಾಡಬೇಕು ಎಂದಿದ್ದಾರೆ .ಸೈನಿಕರು ರಾಜಕೀಯ ಮಾಡುವ ರೀತಿಯಲ್ಲಿ ಹೇಳುತ್ತಿದ್ದಿರಲ್ಲಾ , ನಮ್ಮ ಸೈನ್ಯ ರಾಜಕೀಯ ಪಕ್ಷಗಳ ಜೊತೆ ಸೇರಿ ಕೊಂಡದ್ದು ಯಾವಾಗ…..?ಅನ್ನೋದು ಮೊದಲು ಹೇಳಬೇಕಿದೆ. ಅಷ್ಟಕ್ಕೂ ಕಾರ್ಗಿಲನ ಗೆಲುವು ಬಿಜೆ.ಪಿಯ ಗೆಲುವು ಎನ್ನುವ ಭಾವನೆ ಇದ್ದರೆ ,ಕಾರ್ಗಿಲ್ ಯುದ್ಧಕ್ಕೆಂದು ಯಾವ ಬಿ.ಜೆ. ಪಿ ನಾಯಕ ಹುತಾತ್ಮನಾದ ಹೇಳಿ….?ಆಕಸ್ಮಾತ ಯುದ್ದದ್ದಲ್ಲಿ ಸೋಲು ಭೀತಿ ಎದುರಾದಲ್ಲಿ ,ತಾನು ಯುದ್ಧ ಭೂಮಿಗೆ ಹೊರಡಲು ಸಿದ್ದನಾಗಿದ್ದೇನೆ ಅಂತಾ ಯಾವ ನಾಯಕ ಹೇಳಿದ್ದ ಹೇಳಿ ನೋಡೋಣ………?(ಯುದ್ಧ ಭೂಮಿಗೆ ರಕ್ಷಣಾ ಮಂತ್ರಿಗಳು ಭೇಟಿ ನೀಡಿದ್ದರ ಬಗ್ಗೆ ಹೆಮ್ಮೆ ಇದೆ) ಕಾರ್ಗಿಲ ದೇಶದ ಭಾಗ ವಿನಃ ,ಅದು ಬಿಜೆಪಿಯ ಪ್ರಧಾನ ಕಛೇರಿಯಲ್ಲ.ಅವರು ಮಾತ್ರವೇ ಅದಕ್ಕಾಗಿ ಯುದ್ಧ ಮಾಡಲು.ಆ ಸಮಯದಲ್ಲಿ ಕಾಂಗ್ರೆಸನ ಆಡಳಿತವಿದ್ದರು ಅವರು ಕೂಡಾ ಇದನ್ನೇ ಮಾಡುತ್ತಿದ್ದರೇ ವಿನಃ ನಮ್ಮ ಭೂಮಿಯನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಡುತ್ತಿರಲಿಲ್ಲ.
ಯಾವ ರಾಜಕೀಯ ನಾಯಕನು ,ಯಾವ ಪಕ್ಷವು ಮಾಡದ ದೇಶದ ರಕ್ಷಣೆಯ ಕೆಲಸ ನಮ್ಮ ಸೈನಿಕರು ಮಾಡಿದ್ದಾರೆ ಅಂದರೆ ಅದು ನಮ್ಮ ಸೈನಿಕರ ಗೆಲವು .ಆ ಸೈನಿಕರ ಗೆಲುವೇ ನಮ್ಮ ಭಾರತದ ಗೆಲುವು ಎನ್ನುವ ಬದಲು ಬಿಜೆಪಿಯ ಯುದ್ಧ ಎನ್ನುವ ನಿಮ್ಮ ಬುದ್ಫಿಗೆ ಯಾವ ಪಾರಿತೋಷಕ ಕೊಡಬೇಕು ಹೇಳಿ……? ರಾಷ್ಟ್ರದ ಗೆಲುವನ್ನು ಪಕ್ಷಕ್ಕೆ ಹೋಲಿಸಿದ ನೀವು ನಾಳೆಯ ದಿನ ಚೀನಾ ಏನಾದ್ರು ಭಾರತದ ಮೇಲೆ ದಾಳಿ ಮಾಡಿದರೆ ಸದ್ಯ ಬಿಜೆಪಿಯ ಆಡಳಿತವಿದೆ ,ಚೀನಾ ವಿರುದ್ಧ ಭಾರತ ಯುದ್ಧ ಗೆದ್ದರೆ ಅದರ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ನೀವು ಯುದ್ದದ್ದ ಪರಿಸ್ಥಿತಿಯಲ್ಲಿ ತಮಗೆ ಸಂಬಂದವಿಲ್ಲದಂತೆ ಕೈಕಟ್ಟಿ ಕೊಳ್ಳುತ್ತಿರೆನು……? ನಿಮ್ಮ ಹೇಳಿಕೆ ಪ್ರಕಾರವೇ ಪ್ರತಿಯೊಂದು ಯುದ್ಧವನ್ನು ಅವರವರ ಪಕ್ಷಗಳಿಗೆ ಸಿಕ್ಕ ಗೆಲುವು ಎನ್ನುತ್ತಾ ಸಾಗಿದರೆ 1962 ರ ಯುದ್ದದಲ್ಲಿ ಭಾರತ ಸೋತಿತು ಎನ್ನುವ ಬದಲು, ಭಾರತ ಸೋತಿಲ್ಲಾ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ ಸೋತಿತು ಅಂದರೆ ಸುಮ್ಮನೀರುತ್ತಿರಾ….ಇಲ್ಲಾ ಆ ಸೋಲು ,ಕಾಂಗ್ರೆಸನ ಸೋಲು ಅಂತಾ ಒಪ್ಪಿಕೊಳ್ಳುತ್ತಿರಾ ಹೇಳಿ….? ಸ್ವಾಮಿ ನಿಮ್ಮ ಮಾತಿನ ಪ್ರಕಾರವೇ ಹೇಳುವದಾದರೆ ಅದು ಭಾರತದ ಯುದ್ಧವಲ್ಲ , ಅದು ಭಾರತದ ಸೋಲಲ್ಲ…..ಅದು ಕಾಂಗ್ರೆಸನ ಯುದ್ಧ ,ಅದು ಕಾಂಗ್ರೆಸನ ಸೋಲು ಎಂದು ಇನ್ನೊಂದು ಹೇಳಿಕೆ ಕೊಡಿ ಆಗ ನಿಮ್ಮ ಮೊದಲ ಮಾತಿಗೆ ತೂಕ ಬಂದರೂ ಬರಬಹುದು ಯಾರಿಗೆ ಗೊತ್ತು …..? ನಿಮ್ಮ ಮಾತಿನ ವರಸೆ ಹೇಗಿದೆ ಅಂದರೆ ಇತ್ತೀಚ್ಚಿಗೆ ಹುತಾತ್ಮ ಸೈನಿಕ ಹೆಣ್ಣುಮಗಳು ತನ್ನ ತಂದೆಯನ್ನು ಕೊಂದದ್ದು ಪಾಕಿಸ್ತಾನವಲ್ಲ ,ತಂದೆಯನ್ನು ಕೊಂದದ್ದು ಯುದ್ಧ ಎಂದು ಹೇಳಿದ್ದಳು…. ಅವಳ ಮಾತಿನ ಆಧಾರವಾಗಿಟ್ಟು ಕೊಂಡು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೆಹ್ವಾಗ ತ್ರಿಶತಕ ಹೊಡೆದದ್ದು ನಾನಲ್ಲ,ನನ್ನ ಬ್ಯಾಟ ಎಂದು ಹೇಳಿದ ಹಾಗೆ ಆಯಿತು.
ದೇಶದ ಭದ್ರತೆಗೆ ಸಂಬಂಧಿಸಿ ಯುದ್ಧ ನಡೆದರೆ ಅದು ಪಕ್ಷಗಳ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ ಎನ್ನುವ ಆಧಾರದ ಮೇಲೆ ಹೇಳುವುದಾದರೆ ….ಅಲ್ಲ ಸಲ್ಲದ ಬಾಂಗ್ಲಾ ವಿಷಯಾದಲ್ಲಿ ಸ್ವತಃ ನಾವೇ ಒಳ ಹೋಗಿ ಅನೇಕ ಸೈನಿಕರನ್ನು ಕಳೆದುಕೊಂಡು ಪಾಕಿಸ್ತಾನದ ವಿರುದ್ಧ ಗೆದ್ದದ್ದು ಪಕ್ಷದ ಪ್ರತಿಷ್ಠೆಗಾಗಿಯೇ…….?. 1999ರಲ್ಲಿ ಬಿಜೆಪಿಯ ಸರ್ಕಾರವಿತ್ತು ಹಾಗಾಗಿ ಅವರು ದೇಶಕ್ಕೆ ಒದಗಿದ ಸಮಸ್ಯೆ ನಿವಾರಿಸಲು ಯುದ್ಧ ಮಾಡಬೇಕಾಗಿ ಬಂತು.ಆದರೆ ನೀವು ಯಾವ ಉದ್ದೇಶದಿಂದ ಅಲ್ಲ ಸಲ್ಲದ ಬಾಂಗ್ಲಾ ವಿಷಯದಲ್ಲಿ ಸ್ವತಃ ಆಗಿನ ಸರ್ಕಾರವೇ ಒಳ ಹೋಗಿ ಅನೇಕ ಸೈನಿಕರನ್ನು ಕಳೆದುಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿದ್ದು ಏಕೆ …..? ನಿಮ್ಮ ಪಕ್ಷದ ಪ್ರತಿಷ್ಠೆಗಾಗಿಯೇ…..?ನಿಮ್ಮ ಪಕ್ಷದ ಪ್ರತಿಷ್ಠೆಗಾಗಿ ಸೈನಿಕರನ್ನು ಬಲಿ ಕೊಡುವುದು ಸರಿಯೇ…..?ಅಕಸ್ಮಾತ 1999ರಲ್ಲಿ ಬಿಜೆಪಿಗೆ ಪ್ರತಿಷ್ಠೆಗಾಗಿಯೇ ಯುದ್ಧ ಮಾಡುವ ಛಾತಿ ಇರುವುದಾದರೆ 2004ರ ವರೆಗೆ ಅಧಿಕಾರದಲ್ಲಿದ್ದ ಆ ಪಕ್ಷವೇ ಮತ್ತೆ ,ಮತ್ತೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಗೆಲ್ಲಬಹುದಿತ್ತಲ್ಲ….?ಯಾಕೆ ಯುದ್ಧ ಮಾಡಲಿಲ್ಲ…..?
ಬಿಜೆಪಿ ಆಡಳಿತದ ಅವಧಿಯಲ್ಲಿ ಕಾರ್ಗಿಲ ಯುದ್ಧವೇನೋ ಗೆದ್ದದ್ದು ಎಷ್ಟು ಸತ್ಯವೋ ಹಾಗೆಯೇ ಕಾಂಗ್ರೆಸ ಸರ್ಕಾರದ ಆಡಳಿತದ ಅವಧಿಯಲ್ಲಿ 1948 ,1965 ,1971ರಲ್ಲಿ 3 ಬಾರಿ ಪಾಕಿಸ್ತಾನದ ವಿರುದ್ಧವಾಗಿ ಭಾರತವು ಕೂಡಾ ಯುದ್ಧ ಮಾಡಿ ಗೆದ್ದಿತ್ತು. ಆದನ್ನು ಭಾರತದ ಗೆಲುವು ಎನ್ನಬೇಕೇ ಅಥವಾ ಕಾಂಗ್ರೆಸನ ಗೆಲುವು ಎನ್ನಬೇಕೆ. ಅಕಸ್ಮಾತ ನಿಮ್ಮ ಗೆಲುವೇ ಅನ್ನುವ ಹಾಗೆ ಇದ್ದರೆ , ಯುದ್ಧ ಗೆದ್ದಿರುವ ಸಂಭ್ರಮದ ಆಚರಣೆ ಮಾಡುವ ಅವಕಾಶವಿತ್ತಲ್ಲವೇ ನಿಮಗೆ…..?.ಆ ಅವಕಾಶವನ್ನು ನೀವು ಬಳಸಿ ಕೊಳ್ಳಬಹುದಿತ್ತಲ್ಲವೇ……? ಯಾಕೆ ನೀವು ಆ ಅವಕಾಶವನ್ನು ಕೈಚಲ್ಲಿದ್ದೀರಿ….?. ಯಾಕಂದರೆ ನಿಮಗೆ ಗೊತ್ತಿರೋದು ವರ್ಷಕ್ಕೊಂದು ನಡೆಯುವ ರಾಷ್ಟ್ರೀಯ ಕಾಂಗ್ರೆಸ ಅಧಿವೇಶನ ಮಾತ್ರ.ಸೈನಿಕರಿಗೆ ಗೌರವ ಸಲ್ಲಿಸುವ ಅಂತಹ ಅವಕಾಶ ನೀವು ಬಳಸಿ ಕೊಂಡಿಲ್ಲ .ಸೈನಿಕರ ಬಲಿದಾನದ ಮಹತ್ವ ಏನು ಎನ್ನುವುದನ್ನು ನೀವಿನ್ನು ತಿಳಿದಿಲ್ಲ.ಸೈನಿಕರು ಸಾಯುವುದಕ್ಕಾಗಿಯೇ ಸೈನ್ಯವನ್ನು ಸೇರುತ್ತಾರೆ ಎಂದು ಅಸಂಬದ್ಧ ಹೇಳಿಕೆ ಕೊಡುವವರಿಗೆ ಸೈನಿಕರ ಬಲಿದಾನದ ಮಹತ್ವ ತಿಳಿಯುವುದಾದರು ಹೇಗೇ………..? ಹೇಳಿ.ಅಷ್ಟಕ್ಕೂ ಕಾರ್ಗಿಲ ಯುದ್ಧಕ್ಕೆ ಕಾರಣ ನಿಮ್ಮವರೇ ಆರಂಭವಾದ ಮೊದಲ ಯುದ್ಧ 1948 ರಲ್ಲಿ ನಾವೂ ಯುದ್ಧವನ್ನು ಗೆದ್ದಿಯೂ ಸಹಿತ ವಿಶ್ವಸಂಸ್ಥೆಯಲ್ಲಿ ಮಂಡಿಯುರಿದ್ದು ತಪ್ಪು.ಆ ತಪ್ಪಿನ ಫಲವೇ 41 ವರ್ಷಗಳ ನಂತರದ ಕಾರ್ಗಿಲ್ ಯುದ್ದ.
ಮನೋಜ ಕುಮಾರ ಪಾಂಡೆ ಸಂದರ್ಶನದಲ್ಲಿ ನನಗೆ ಬೇಕಾಗಿರುವುದು ಪರಮವೀರ ಚಕ್ರ ಬೇಕು ಎಂದರೆ ವಿನಃ ನನಗೆ ರಾಜಕೀಯ ಪಕ್ಷದ ಸದಸ್ಯಸತ್ವವನ್ನು ಬೇಡಲಿಲ್ಲ. ಯಾಕಂದರೆ ರಾಜಕೀಯದ ಮನಸ್ಸು ಅವರಿಗೆ ಇರಲಿಲ್ಲ.ಆದರೆ ನಿಮ್ಮವರು ಹಾಗಲ್ಲ ಸೈನ್ಯವನ್ನು ರಾಜಕೀಯಕ್ಕೆ ತಂದು ನಿಲ್ಲಿಸಿ ಬಿಡಲು ಹೇಸುವುದಿಲ್ಲ.ನಿಮ್ಮ ಕಾಂಗ್ರೆಸನ ಲಾಲ್ ಬಹುದ್ದೂರ ಶಾಸ್ತ್ರಿ ,ಸರದಾರ ಪಟೇಲ್ ,ಇಂದಿರಾ ಗಾಂಧಿ ,ರಾಜೀವ ಗಾಂಧಿ ,ಪ್ರಣಬ್ ಮುಖರ್ಜಿ ,ಇತ್ತೀಚ್ಚಿಗಷ್ಟೇ ನಿಧನಾರಾದ ಧರಂ ಸಿಂಗರಂತಹ ನಾಯಕರ ಮೇಲೆ ಹೆಮ್ಮೆ ಇದೆ.ಆದರೆ ತಾವುಗಳು ಇಂತಹ ಮೊಂಡು ಹೇಳಿಕೆಯನ್ನು ನೀಡಿ ,ನಮಗೆ ಕಾಂಗ್ರೆಸ ಬಗ್ಗೆ ಇದ್ದ ಗೌರವವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬೇಡಿ.ಅಷ್ಟಕ್ಕೂ ಕಾರ್ಗಿಲ ಈ ದೇಶಕ್ಕೆ ಸಂಬಂಧಿಸಿದ್ದು ವಿನಃ ,ಬಿಜೆಪಿಗೋ ,ಕಾಂಗ್ರೆಸಿಗೋ ಸಂಬಂಧಿಸಿದ್ದು ಅಲ್ಲ ಎನ್ನುವ ಮಾತು ನೆನಪಿರಲಿ.