ಶಿರಸಿ: ಇಲ್ಲಿಯ ಎ.ಪಿ.ಎಮ್.ಸಿ ಯಾರ್ಡ್‍ನಲ್ಲಿರುವ ಕದಂಬ ಮಾರ್ಕೆಟಿಂಗ್‍ನಲ್ಲಿ ಮಾ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಸಾವಯವ ಕೃಷಿ ಉತ್ಪನ್ನಗಳ ಹಾಗೂ ಗೃಹ ಉತ್ಪನ್ನಗಳ ಸಂತೆ ನಡೆಯಲಿದೆ. ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪ ಕೃಷಿ ನಿರ್ದೇಶಕ ನಟರಾಜ ಹಾಗೂ ಶಿವಪ್ರಸಾದ ಗಾಂವ್ಕಾರ್ ಉಪಸ್ಥಿತರಿರುವರು.

RELATED ARTICLES  ಮಾ.೨ ರಂದು‌ ಕುಮಟಾದಲ್ಲಿ 'ವರದಪುರದ ವರದಯೋಗಿ' ನಾಟಕ.

ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಶಿರಸಿ ಹಾಗೂ ಕದಂಬ ಮಾರ್ಕೇಟಿಂಗ್ ಸೌಹಾರ್ದ ಸಹಕಾರಿಯ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ. ಸಂತೆಯಲ್ಲಿ ಸಿರಿಧಾನ್ಯಗಳ ತಿನಿಸುಗಳು, ಜೋಯಿಡಾದ ಸಾಂಪ್ರದಾಯಿಕ ಅಕ್ಕಿ ತಳಿಗಳು, ಸಿದ್ದಾಪುರದ ಕೆಂಪಕ್ಕಿ, ಭಟ್ಕಳದ ಉಂಡೆ ಬೆಲ್ಲ, ಅಂಕೋಲದ ಕಲ್ಲಂಗಡಿ ಹಾಗೂ ಕಾಪ್ಸಿಕಮ್, ಹೊನ್ನಾವರದ ಕೋಕಂ ಹಾಗೂ ವಿವಿಧ ಸ್ಥಳೀಯ ಆರೋಗ್ಯಕರ ಪೇಯಗಳು, ಯಲ್ಲಾಪುರದ ಜೇನುತುಪ್ಪ, ಗೋಕರ್ಣದ ಮೆಣಸು, ಬದನೆ, ಕುಂಬಳಕಾಯಿ ಮತ್ತಿತರ ತರಕಾರಿಗಳು ಹಾಗೂ ತಮ್ಮಲ್ಲಿರುವ ವಿಶೇಷ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ಸಂತೆಯಲ್ಲಿ ಭಾಗವಹಿಸಬಹುದು.

RELATED ARTICLES  ಚಂದ್ರಯಾನ-2 ಮತ್ತು ಬಾಹ್ಯಾಕಾಶ ವಿಜ್ಞಾನದ ಕುರಿತು ಕೊಂಕಣ ಎಜ್ಯುಕೇಶನ್‍ನಲ್ಲಿ ರಸಪ್ರಶ್ನೆ ಸ್ಪರ್ಧೆ

ಮಾಹಿತಿಗಾಗಿ ಮಹೇಂದ್ರ 8105425880, ವಿಕಾಸ 8277227228 ಇವರನ್ನು ಸಂಪರ್ಕಿಸಬಹುದು ಎಂದು ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.