Home Information ಮಾ.೨ ರಂದು‌ ಕುಮಟಾದಲ್ಲಿ ‘ವರದಪುರದ ವರದಯೋಗಿ’ ನಾಟಕ.

ಮಾ.೨ ರಂದು‌ ಕುಮಟಾದಲ್ಲಿ ‘ವರದಪುರದ ವರದಯೋಗಿ’ ನಾಟಕ.

ಕುಮಟಾ : ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಸಹಯೋಗದಲ್ಲಿ ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಕುಮಟಾ  ಪಟ್ಟಣದ ಗಿಬ್ ಹೈಸ್ಕೂಲ್ ಮೈದಾನದಲ್ಲಿ ನಡೆದಾಡುವ ದೇವರೆಂದೇ ನಂಬಿಕೆ ಹೊಂದಿದ್ದ ಭಗವಾನ್ ಸದ್ಗುರು ಶ್ರೀಧರ ಸ್ವಾಮಿ ಜೀವನ ಆದಾರಿತ ಅಪರೂಪದ ನಾಟಕ ‘ವರದಪುರದ ವರದಯೋಗಿ’ ಮಾ.೨  ಶನಿವಾರ ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೆ ಧರಣಿಮಂಡಲ ಮದ್ಯದೊಳಗೆ, ಸೂರ್ಯ ಚುಂಬನ ಹೀಗೆ ಹಲವಾರು ಸಮಾಜಮುಖಿ ಯಶಸ್ವಿ ನಾಟಕಗಳನ್ನು ಬರೆದ ಹೊನ್ನಾವರ ಮಣ್ಣಿಗೆಯ ಎಂ.ಜಿ.ವಿಷ್ಣು ಅವರು ಈ ಶ್ರೀಧರ ಸ್ವಾಮಿಗಳ ಕುರಿತಾದ ನಾಟಕಕ್ಕೆ ರಂಗರೂಪ ಕೊಟ್ಟಿದ್ದು,    ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ರಂಗ ತಪಸ್ವಿ ಜಿ.ಡಿ.ಭಟ್ಟ ಕೆಕ್ಕಾರು ಅವರು ನಿರ್ದೇಶನ ಮಾಡಿದ್ದಾರೆ. 

ಸುಮಾರು 45 ಕ್ಕೂ ಹೆಚ್ಚು ಕಲಾವಿದರು ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದು, ಈಗಾಗಲೆ ಯಶಸ್ವಿ 3 ಪ್ರದರ್ಶನಗಳನ್ನು ಈ ನಾಟಕ ಕಂಡಿದೆ. ಇದೀಗ ನಾಲ್ಕನೇ ಪ್ರದರ್ಶನಕ್ಕೆ ಅಣಿಯಾಗುತ್ತಿದೆ. ಅದ್ಭುತವಾದ ಸಂಗೀತ, ಅಪರೂಪದ ನೆರಳು ಬೆಳಕಿನ ಸಂಯೋಜನೆ , ಉತ್ತಮ ಧ್ವನಿ ಹಾಗೂ ವಿಶಿಷ್ಟವಾದ ವಸ್ತ್ರ ವಿನ್ಯಾಸ , ಎಲ್ಲಾ ಕಲಾವಿದರ ಅತ್ಯುತ್ತಮ ಅಭಿನಯ ಪ್ರೇಕ್ಷಕರನ್ನ ಬೇರೊಂದು ಲೋಕಕ್ಕೆ ಕೊಂಡೊಯ್ಯುವಂತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಧರ ಸ್ವಾಮಿಗಳ ಭಕ್ತರು, ಕಲಾಭಿಮಾನಿಗಳು ಆಗಮಿಸಿ ನಾಟಕದ ಯಶಸ್ಸಿಗೆ ಸಹಕರಿಸಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.