ಲೇಖಕರು :- ಪ್ರಭಾ ಮತ್ತು ವೆಂಕಟರಮಣ ಭಟ್ಟ.ಪುಣೆ.

 

Think before you leap … ಜಿಗಿಯುವ ಮುನ್ನ ಜಾಗರೂಕತೆ ಇರಬೇಕು.
(ಇಸವಿ ಸನ ೧೯೪೬ರಲ್ಲಿ ಕುಮಾರಿ ರಾಧಾಳಿಗೆ ಲಗ್ನ ನಿಶ್ಚಯ ಪೂರ್ವ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಮಂಗಳೂರು
ಫೆಬ್ರುವರಿ ೧೯೪೬
ಚಿ. ರಾಧೆಗೆ ಆಶೀರ್ವಾದ
ನಿನ್ನ ತಂದೆಯ ಪತ್ರ ಬಂದು ಮುಟ್ಟಿತು. ವಿಷಯ ತಿಳಿಯಿತು.
‘Think before you leap’ ಜಿಗಿಯುವ ಮುನ್ನ ಜಾಗರೂಕತೆ ಇರಬೇಕು. ಮನಸ್ಸಿನ ಸೆಳೆತ ಪ್ರಪಂಚದ ಕಡೆ ಇದ್ದಲ್ಲಿ ಏನೂ ತೊಂದರೆಯಿಲ್ಲ; ದುಃಖವಿಲ್ಲ. ಇಬ್ಬರ ಸಂಸಾರವೂ ಸುಖಮಯವಾಗುತ್ತದೆ. ಗಾಡಿಯ ಚಕ್ರದಂತೆ ಪತಿ-ಪತ್ನಿ ಒಂದೇ ವಿಚಾರದವರಿದ್ದಾರೆ ಎಂದಾದರೆ ಸಿಹಿ ಸಂಸಾರ ಮಾಡಿಕೊಂಡು ಎಷ್ಟು ಶಕ್ಯವೋ ಅಷ್ಟು ಪರಮಾರ್ಥ ಸಾಧಿಸಲಿಕ್ಕಾಗುತ್ತದೆ. —– ಅವರವರ ಅಧಿಕಾರಕ್ಕೆ ತಕ್ಕಾಗಿ ಪ್ರವೃತ್ತಿ ಅಥವಾ ನಿವೃತ್ತಿ ಅವರವರ ಪಾಲಿಗೆ ಬರುತ್ತದೆ. ಪ್ರವೃತ್ತಿಯ ಅಧಿಕಾರ ಪಡೆದು ಬಂದವರಿಗೆ ಪ್ರವೃತ್ತಿ ಮಾರ್ಗದಿಂದಲೇ ಪರಮಾರ್ಥದ ಕಡೆಗೆ ಹೊರಳಬೇಕಾಗುತ್ತದೆ. ಒಮ್ಮೆಲೇ ನಿವೃತ್ತಿ ಅವರ ಪ್ರಕೃತಿಯ ಶಕ್ತಿಯ ಹೊರಗೆ ಇರುತ್ತದೆ …..
‘ಪ್ರಪಂಚ ಸಾಧಿಸಿ ಪರಮಾರ್ಥ ಮಾಡಿದ ಆ ಮನುಷ್ಯನಿಗೋ ಭಲೇ ಭಲೇ!’
ಅದಕ್ಕೂ ಮುಂದೆ ಹೋಗಿ ನಾನು ಹೀಗೆ ಸೇರಿಸಿ ಹೇಳುತ್ತೇನೆ ….
‘ನಮ್ಮ ಅಧಿಕಾರಕ್ಕಿಂತಲೂ ಅಧಿಕತಮ ಉಪದೇಶ ಗುರು ಮಾಡಿದರೆ ಅದನ್ನು ಹೊತ್ತು ಸಂಭಾಳಿಸುವ ಭಾರವೂ ಅವನದೇ ಎಂದುಕೊಂಡು ಇದ್ದುಬಿಡಬೇಕು’
ವಿವೇಕಾನಂದರ ಮೇಲೆ ಒಂದು ದೊಡ್ಡ ಶ್ರೀಮಂತ ಮನೆಯ ಹೆಣ್ಣುಮಗಳ ಪ್ರೇಮ ಅಂಕುರಿಸಿತ್ತು …..
‘ನೌಕರಿಯ ಬಗ್ಗೆ ಯಾಕೆ ತಿರುಕರಂತೆ ತಿರುಗುತ್ತಿರುವೆ? ನನ್ನೊಂದಿಗೆ ಮದುವೆಯಾದರೆ ನನ್ನ ಸಂಪೂರ್ಣ ಜೀವನ ನಿಮ್ಮದೇ. ನನ್ನನ್ನು ನಿಮ್ಮ ಕಾಲ್ಕೆಳಗಿನ ದಾಸಿಯನ್ನಾಗಿ ಬೇಕಾದರೂ ಇಟ್ಟಿಕೋ’
ಹೀಗೆಂದು ಅವಳು ವಿವೇಕಾನಂದರಿಗೆ ಅವರ ಪೂರ್ವಾಶ್ರಮದಲ್ಲಿ ಪತ್ರ ಕಳುಹಿಸಿದ್ದಳು. ಆಗ ವಿವೇಕಾನಂದರು …..
‘ಈ ಮಲಮಾಂಸದ ದೇಹದ ಮೇಲೆ ಪ್ರೇಮ ಇಡುವ ಬದಲು ಅದನ್ನೇ ಆನಂದರೂಪಿ ಪರಮೇಶ್ವರನ ಮೇಲೆ ಇಟ್ಟರೆ ಇಂತಹ ದುಃಖಮಯ ಸಂಸಾರದಿಂದ ನಿನಗೆ ಶಾಶ್ವತ ಬಿಡುಗಡೆಯಾಗುತ್ತದೆ!’ ಎಂದು ಅವಳಿಗೆ ಬರೆದು ತಿಳಿಸಿದ್ದರು …. ಇದು ಅವರ ಚರಿತ್ರದಲ್ಲಿದೆ.
ನಾರಾಯಣ ಮಹಾರಾಜ ಎಂದೊಬ್ಬರು ಮಹಾತ್ಮರಿದ್ದರು. ಅವರನ್ನು ಲಗ್ನವಾಗುವ ಇಚ್ಛೆ ತೋರಿಸಿದ ಹೆಣ್ಣುಮಗಳಿಗೆ ಅವರು ಸ್ಪಷ್ಟ ಶಬ್ಧಗಳಲ್ಲಿ ಹೇಳಿದರು ….. ‘ನನ್ನೊಂದಿಗೆ ಲಗ್ನವಾಗುವದು ಮತ್ತು ಕಂಬದೊಂದಿಗೆ ಮದುವೆಯಾಗುವದು ಎರಡೂ ಒಂದೇ.’
ನಮ್ಮ ಮನಸ್ಸಿನಲ್ಲಿರುವ ವಿಚಾರ ಸ್ಪಷ್ಟರೀತಿ ತಿಳಿಸಿದಾಗ ಬೇರೆಯವರಿಗೆ ತೊಂದರೆಯಾಗುವದಿಲ್ಲ ….. ಮದುವೆಯಾದ ಮೇಲೆ ಎಷ್ಟೋ ಜನರ ವೈರಾಗ್ಯ ನಿಲ್ಲುವದಿಲ್ಲ …..
ಅಳುತ್ತಳುತ್ತಿರುವ ಸವಾರನನ್ನು ಕುದುರೆಯ ಮೇಲೆ ಕೂರಿಸಿಯಾದರೂ ಏನು ಪ್ರಯೋಜನ?
‘ತುಕಾ ಹೇಳುತ್ತಾನೆ …. ‘ನಿಶ್ಚಯದ ಬಲದಿಂದಲೇ – ಫಲ’
‘ಋತುಮಯಃ ಪುರುಷಃ’ ಹೇಗೆ ನಿಶ್ಚಯವೋ ಹಾಗೆಯೇ ಆ ಮನುಷ್ಯನಾಗುತ್ತಾನೆ …. ‘ಮನುಷ್ಯ ಯಾವುದರ ಬಗ್ಗೆ ಸತತ ಧ್ಯಾನದಲ್ಲಿರುತ್ತಾನೋ ಅದನ್ನೇ ಪಡೆಯುತ್ತಾನೆ’
ಶ್ರೀಧರ

RELATED ARTICLES  ಮಕ್ಕಳ ಅಟಗಳು ಅಂದು ಇಂದು