ಶಿರಸಿ :  ಆಸ್ಟಿಯೋ ಜೆನಿಸಿಸ್ ಇಂಪರ್ಪೆಕ್ಟಾ ಎಂಬ ಅತಿ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ರಮೇಶ ಹೆಗಡೆ ಜೀವನೋತ್ಸಾಹದ ಚಿಲುಮೆ. ಬಾಲ್ಯದಿಂದ ಇದುವರೆಗೂ (35- 40 ವಯಸ್ಸು)ಪುಟ್ಟ ಕೋಣೆಯೇ ಅವರ ಪ್ರಪಂಚ. ಎದ್ದು ಓಡಾಡಲೂ ಆಗದ ಸ್ಥಿತಿ. ಪ್ರತಿಯೊಂದಕ್ಕೂ ಬೇರೆಯವರನ್ನೇ ಅವಲಂಭಿಸಬೇಕಾದ ಜೀವನ ಅವರದು.

ಆದರೆ ಇದಕ್ಕೆಲ್ಲ ಕುಗ್ಗದೆ ಓದು, ಬರವಣಿಗೆಯಲ್ಲೆ ಬದುಕು ಕಾಣುತ್ತಿದ್ದಾರೆ. ಇದುವರೆಗೆ ಆರು ಕವನ ಸಂಕಲನ ಪ್ರಕಟವಾಗಿದೆ. ಜಯಂತ್ ಕಾಯ್ಕಿಣಿಯವರಂತಹ ಹಿರಿಯರು ಶಿರಸಿಗೆ ಬಂದರೆ ರಮೇಶ ಹೆಗಡೆಯವರ ಭೇಟಿ ಮಾಡಿ ಕುಶಲ ವಿಚಾರಿಸಲು ಮರೆಯುವುದಿಲ್ಲ‌. ಇವರ ಮತ್ತೊಂದು ಕನ್ನಡ ಗಝಲ್ ಸಂಕಲನ ಸದ್ಯದಲ್ಲೇ ಸ್ವಸ್ತಿ ಪ್ರಕಾಶನದಿಂದ ಪ್ರಕಟವಾಗಲಿದೆ. ಪುಟ್ಟ ಕೋಣೆಯಲ್ಲಿ ಮಲಗಿಕೊಂಡೆ ಪದವಿ ಪರೀಕ್ಷೆ ಬರೆದಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು‌ ಭಾಷೆಗಳಲ್ಲಿ ಹಿಡಿತ ಅವರ ಶಕ್ತಿ. ಅಪ್ಪ ಅಮ್ಮ ಕೂಡಾ ಹಾಸಿಗೆ  ಹಿಡಿದಿದ್ದಾರೆ. ಶಿರಸಿಯಲ್ಲಿ ಸಣ್ಣ ಇಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿರುವ ಅಣ್ಣ ರಾಜೇಶನ ದುಡಿಮೆಯಷ್ಟೇ ಈ ಕುಟುಂಬಕ್ಕೆ ಆಧಾರ.

RELATED ARTICLES  ರಾಷ್ಟ್ರಮಟ್ಟದ ಪ್ರತಿಭೆ ಬಾಡದ ಪ್ರಥಮ್

‌ತೀವ್ರ ಅನಾರೋಗ್ಯದಿಂದ ನಿನ್ನೆ ರಾತ್ರಿ ರಮೇಶ ಹೆಗಡೆಯವರನ್ನು ಶಿರಸಿಯ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಮಯದಲ್ಲಿ ನಾವು ನೀಡುವ ಸಣ್ಣ ಮೊತ್ತ ಕೂಡಾ ಅವರ ಆಸ್ಪತ್ರೆ ವೆಚ್ಚ ಭರಿಸಲು ಉಪಯೋಗವಾಗುತ್ತದೆ. ಹಣ ಸಹಾಯ ಮೂಲಕ ನಮ್ಮ ನಡುವಿನ ಸೂಕ್ಷ್ಮ ಮನಸಿನ ಕವಿಯನ್ನು ಉಳಿಸಿಕೊಳ್ಳೋಣ.

RELATED ARTICLES  ಚರ್ಚಗಳಲ್ಲಿ ನಡೆಯುವ ಲೈಂಗಿಕ ಶೋಷಣೆ ಪ್ರಕರಣಗಳ ಹಿನ್ನೆಲೆಯಲ್ಲಿ ಚರ್ಚಗಳು ಮತ್ತು ಮಿಶನರಿ ಸಂಸ್ಥೆಗಳ ತಪಾಸಣೆ ಮಾಡಿ : ಹೊನ್ನಾವರದಲ್ಲಿ ಮನವಿ ಸಲ್ಲಿಕೆ.

ರಮೇಶ ಹೆಗಡೆಯವರಿಗೆ ಸಹಾಯ ಮಾಡಲಿಚ್ಛಿಸಿರುವವರು ಅವರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು.

ಬ್ಯಾಂಕ್ ಖಾತೆಯ ವಿವರಗಳು:

Ramesh Govind Hegde,
KVGB Bank,
Sirsi Branch,
A/c 89043335298
IFSC code:KVGB0009502

Ramesh Hegde contact number:
: +91 99647 17756
+91 90366 55660