ಗೋಕರ್ಣ : ಪ ಪೂ ಕಾಶಿ ಸಿಂಹಾಸನಾಧೀಶ್ವರ  ಶ್ರೀ ಶ್ರೀ ೧೦೦೮ ಡಾ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಜಂಗಮವಾಡಿ ಮಠ, ವಾರಾಣಸಿ – ಇವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಚಿತ್ತೈಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .  

ಪೂಜ್ಯ ಶ್ರೀ ಷ. ಬ್ರ. ಅಭಿನವ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ , ಪಂಚವಣಗಿಹಿರೇಮಠ ,  ಪ ಪೂ ಶ್ರೀ ಶ್ರೀ ಕಲ್ಯಾಣಸ್ವಾಮಿಗಳು , ಶ್ರೀ ಕಲ್ಯಾಣಸ್ವಾಮಿ ಮಹಾಸಂಸ್ಥಾನ ಮಠ ಇವರೂ ಸಹ ಉಪಸ್ಥಿತರಿದ್ದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ವೇ ಅನಂತ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು . 

RELATED ARTICLES  ಹಿರೇಗುತ್ತಿ ಸರಕಾರಿ ಪದವಿ ಪೂರ್ವ ಕಾಲೇಜು-ವಾಣಿಜ್ಯ ಹಾಗೂ ವಿಜ್ಞಾನದಲ್ಲಿ ನೂರಕ್ಕೆ ನೂರುಫಲಿತಾಂಶ

ಕಳೆದ ಎರಡು ವರ್ಷಗಳಿಂದ ಪುಣ್ಯ ಕ್ಷೇತ್ರದಲ್ಲಿ ಲಿಂಗ ದೀಕ್ಷೆ ನೀಡುತ್ತಾ ಬಂದಿದ್ದು ಅದರಂತೆ ಸೋಮವಾರ 50ಕ್ಕೂ ಹೆಚ್ಚು ರಷ್ಯನ್ನರಿಗೆ ಲಿಂಗ ದೀಕ್ಷೆ ನೀಡಲಾಯಿತು. ರವಿವಾರ ಇಲ್ಲಿನ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿ ಉಪದೇಶ ಕಾರ್ಯಕ್ರಮ ನಡೆಯಿತು. ಇದಕ್ಕೂ ಪೂರ್ವದಲ್ಲಿ ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಹೂ- ಹಾರಹಾಕಿ ಶ್ರೀಗಳನ್ನು ಬರಮಾಡಿಕೊಂಡರು. ಸೋಮವಾರ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಆವಾರದಲ್ಲಿ ಲಿಂಗ ದೀಕ್ಷೆ ನೀಡಲಾಯಿತು.ಪ ಪೂ ಕಾಶಿ ಜಗದ್ಗುರುಗಳು ಇದೇ ಸಂದರ್ಭದಲ್ಲಿ  ವಿದೇಶಿ ಭಕ್ತರಿಗೆ ಲಿಂಗದೀಕ್ಷೆ  ನೀಡಿದರು .   

RELATED ARTICLES  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಇಂದು ಪೋಷಣಾ ಅಭಿಯಾನ ಉದ್ಘಾಟನೆ