ಗೋಕರ್ಣ: ಮತದಾನದಿನ ‌ಅಂದ್ರೆ ರಜಾ ದಿನ ಎಂಬಂತೆ ಮೋಜು ಮಸ್ತಿ ಮಾಡೋರಿಗೆ ಭಾರೀ ಶಾಕಿಂಗ್ ನ್ಯೂಸ್ ಒಂದು ಕಾದಿದೆ

ಹೌದು ಮತದಾನದ ದಿನದಂದು ರಜಾ ಹಿನ್ನಲೆಯಲ್ಲಿ ಪ್ರವಾಸಕ್ಕೆ ತೆರಳುವವರಿಗೆ ಶಾಕ್ ನೀಡಿದೆ ಗೋಕರ್ಣದ ಈ ಹೊಟೆಲ್.

ಮತದಾನದ ದಿನ ಪ್ರವಾಸದ ಮೋಜಿಗಾಗಿ ಬರುವವರಿಗೆ ಯಾವುದೆ ಆಹಾರ ನೀಡದಿರಲು ಹೊಟೆಲ್ ಮಾಲೀಕರು ನಿರ್ಧರಿಸಿದ್ದಾರಂತೆ. ಈ ಕುರಿತು ಹಾಕಲಾದ ಫಲಕವೊಂದು ಇದೀಗ ಫುಲ್ ವೈರಲ್ ಆಗಿದೆ.

RELATED ARTICLES  ನಾಮಪತ್ರ ಸಲ್ಲಿಸಿದ ನಿವೇದಿತ ಆಳ್ವಾ : ಸಹಸ್ರಾರು ಕಾರ್ಯಕರ್ತರ ಜೊತೆ ಶಕ್ತಿ ಪ್ರದರ್ಶನ.

ಲಿ ಏ. 18 ಹಾಗು 23 ರಂದು ಚುನಾವಣೆ ನಡೆಯಲಿದ್ದು, ಆ ದಿನ ಮತದಾನ ಮಾಡದೇ ಬರುವ ಪ್ರವಾಸಿಗರಿಗೆ ಯಾವುದೇ ಊಟ, ಉಪಹಾರ ನೀಡದಿರಲು ಗೋಕರ್ಣದ ಪೈ ರೆಸ್ಟೋರೆಂಟ್ ನಿರ್ಧರಿಸಿದೆ.

RELATED ARTICLES  ಹೊಸಾಡ ಗೋ ಶಾಲೆಯಲ್ಲಿ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ.

ಈ ಕುರಿತು ಜಾಗೃತಿ ಪತ್ರ ಪ್ರಿಂಟಿಸಿ ಗೋಡೆಗೆ ಅಂಟಿಸಿರುವ ಮಾಲೀಕರು, ಅ ದಿನ ಮತದಾರರು ತಮ್ಮ ಊರಿನಲ್ಲಿಯೇ ಇದ್ದು ಮತದಾನ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಅ ಮೂಲಕ ಕಡ್ಡಾಯ ಮತದಾನ ಜಾಗೃತಿ ಮಾಡುವಲ್ಲಿ ವಿಶೇಷ ಪ್ರಯತ್ನ ನಡೆಸಿದ್ದು ಅದು ಮೆಚ್ಚುಗೆ ಪಡೆದಿದೆ.