ಹೊನ್ನಾವರ: ತಾಲೂಕಿನ ಎಸ್.ಡಿ.ಎಮ್ ಮಹಾವಿದ್ಯಾಲಯದ ‘ಪ್ಲೇಸ್‍ಮೆಂಟ್ ಸೆಲ್’ ಆಶ್ರಯದಲ್ಲಿ ಜು. 6 ರಂದು ಉತ್ತರ ಕನ್ನಡದ ಜಿಲ್ಲಾ ಮಟ್ಟದ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

     ಮಂಗಳೂರು ಮೂಲದ ‘DIYA SYSTEMS’ ಕಂಪನಿಯು ತಾಂತ್ರಿಕ ಹುದ್ದೆಗಳಿಗಾಗಿ ಸಂದರ್ಶನ ನಡೆಸಲಿದೆ. 100 ಹುದ್ದೆಗಳ ಅವಶ್ಯಕತೆ ಇದ್ದು, ರೂ. 15,000 ದಿಂದ 17000 ಸಂಬಳ ನೀಡಲಾಗುವುದು ಹಾಗೂ ಆಯ್ಕೆಯಾದ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ತಿಳಿಸಲಾಗಿದೆ.

RELATED ARTICLES  ಅತ್ಯುತ್ತಮ ಶಿಕ್ಷಣಕ್ಕಾಗಿ ಮೊದಲ ಆಯ್ಕೆ ವಿಧಾತ್ರಿ ಅಕಾಡೆಮಿ.

    ಉತ್ತರ ಕನ್ನಡ ಜಿಲ್ಲೆಯ ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ. ಎಂ.ಸಿ.ಎ ಎಂ.ಕಾಂ, ಎಂ.ಎಸ್ಸಿ ಹಾಗೂ ಬಿ.ಇ. ಪದವಿ ಹೊಂದಿದ ಆಸಕ್ತ ಅಬ್ಯರ್ಥಿಗಳು ಹಾಜರಾಗಬಹುದು. ಅಭ್ಯರ್ಥಿಗಳು ಆಂಗ್ಲ ಭಾಷೆಯಲ್ಲಿ ಸಂವಹನ ಕೌಶಲ್ಯ ಮತ್ತು ಕಂಪ್ಯೂಟರ್ ಪ್ರಭುತ್ವ ಹೊಂದಿರುವುದು ಅಗತ್ಯವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಮತ್ತು ಮೂಲ ದಾಖಲೆಗಳೊಂದಿಗೆ ಮುಂಜಾನೆ 9.30 ಗಂಟೆಗೆ ಕಾಲೇಜಿನಲ್ಲಿ ಹಾಜರಿರಲು ಕೋರಿದೆ.

RELATED ARTICLES  ಕುಮಟಾದಲ್ಲಿ ವಿದ್ಯುತ್‌ ವ್ಯತ್ಯಯ.