Home Information ಅತ್ಯುತ್ತಮ ಶಿಕ್ಷಣಕ್ಕಾಗಿ ಮೊದಲ ಆಯ್ಕೆ ವಿಧಾತ್ರಿ ಅಕಾಡೆಮಿ.

ಅತ್ಯುತ್ತಮ ಶಿಕ್ಷಣಕ್ಕಾಗಿ ಮೊದಲ ಆಯ್ಕೆ ವಿಧಾತ್ರಿ ಅಕಾಡೆಮಿ.

ಕುಮಟಾ : ಮಂಗಳೂರು ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಈಗಾಗಲೇ ಅತ್ಯುತ್ತಮ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆ ಎಂಬಂತೆ ವಿಧಾತ್ರಿ ಅಕಾಡೆಮಿ ಕಾರ್ಯ ಮಾಡುತ್ತಿದ್ದು, ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ ಬಂಡಾರಕರ್ ರವರ ಸರಸ್ವತಿ ಪಿಯು ಕಾಲೇಜಿನ ಮೂಲಕ ಉತ್ತರ ಕನ್ನಡದಲ್ಲಿಯೇ ಪ್ರಥಮವಾಗಿ ವಿದ್ಯಾರ್ಥಿಗಳಿಗೆ ಅದೇ ವಿಧದಲ್ಲಿ ಮಾರ್ಗದರ್ಶನ ಮಾಡುತ್ತಿದೆ.

KCET, JEE (Mains), NEET, NATA, NDA, AGRI ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಳೆದೊಂದು ವರ್ಷದಿಂದ ಕರೋನಾ ಸಂಕಷ್ಟದ ಸಮಯದಲ್ಲಿಯೂ ಆನ್ಲೈನ್ ಮೂಲಕ ಅತ್ಯುತ್ತಮ ಮಾರ್ಗದರ್ಶನ ನೀಡಿ ಸೈ ಎನಿಸಿಕೊಂಡಿರುವ ಸಂಸ್ಥೆ ಇದಾಗಿದೆ. ವಿದ್ಯಾರ್ಥಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಮಾರ್ಗದರ್ಶನ ಮಾಡುತ್ತ, ಅವರಿಗೆ ಅಗತ್ಯವಾದ ಶೈಕ್ಷಣಿಕ ಪರಿಕರ ಹಾಗೂ ಪ್ರಾಯೋಗಿಕ ತರಗತಿ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ.

ಅತ್ಯುತ್ತಮ ಪ್ರಾಧ್ಯಾಪಕ ವೃಂದ : ಮಂಗಳೂರು-ಬೆಂಗಳೂರು ಹುಬ್ಬಳ್ಳಿ-ಧಾರವಾಡಗಳಲ್ಲಿ ಸರಿ ಸುಮಾರು 10ರಿಂದ 20 ವರ್ಷ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಪ್ರಾಧ್ಯಾಪಕರು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಧಾರೆ ಎರೆಯುತ್ತಿದ್ದಾರೆ. ಪ್ರಾಯೋಗಿಕ ತರಗತಿಗಳು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ರೂಪಿಸಲು ತಮ್ಮ ಪರಿಪೂರ್ಣ ಶ್ರಮ ವಹಿಸುತ್ತಿರುವುದು ಶ್ಲಾಘನೀಯ ಎಂದು ಪಾಲಕರು ಈಗಾಗಲೇ ಮೆಚ್ಚುಗೆ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರತೀ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಗಮನ : ಪ್ರತಿ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉಪನ್ಯಾಸಕರು ಪ್ರತ್ಯೇಕ ಗಮನ ನೀಡುತ್ತಿದ್ದು ಇದರ ಜೊತೆಗೆ ಅತ್ಯುತ್ತಮವಾದ ಯೋಜನೆಗಳೊಂದಿಗೆ ರಿವಿಸನ್ ಟೆಸ್ಟ್ ಗಳು ನಡೆಯಲಿದೆ.

ಸುಸಜ್ಜಿತವಾದ ಲ್ಯಾಬೋರೇಟರಿ : ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಸುಸಜ್ಜಿತವಾದ ಲ್ಯಾಬೋರೇಟರಿ ಗಳನ್ನು ಸಂಸ್ಥೆ ಒಳಗೊಂಡಿದ್ದು ಯಾವೆಲ್ಲಾ ಅವಶ್ಯಕತೆಗಳ ಅಗತ್ಯತೆ ಇದೆಯೋ ಅವುಗಳನ್ನು ನಿರಂತರವಾಗಿ ವಿದ್ಯಾರ್ಥಿಗಳಿಗೆ ಪೂರೈಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿ ರೂಪಿಸುವ ದೃಷ್ಟಿಯಿಂದ ಸ್ಟೇಟ್ ಆಫ್ ಆರ್ಟ್ ಲ್ಯಾಬೋರೇಟರಿ ಗಳು ಬಳಕೆಯಲ್ಲಿದೆ.

ಬಸ್ ಹಾಗೂ ಊಟದ ವ್ಯವಸ್ಥೆ : 27 ವರ್ಷಗಳಿಂದ  ಶಿಕ್ಷಣದಲ್ಲಿ  ವೈವಿದ್ಯತೆಯ ಮೂಲಕ ಹೆಸರುಗಳಿಸಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ಗೋಕರ್ಣ, ಹೊನ್ನಾವರ, ಅಂಕೋಲಾ ದಂತಹ ಪಟ್ಟಣದ ಪ್ರದೇಶಗಳಿಗೆ ಹಾಗೂ ಬಾಡ, ಚಂದಾವರ, ನವಿಲಗೋಣನಂತಹ ಹಳ್ಳಿಗಳಿಗೆ ಸುಸಜ್ಜಿತ ಶಾಲಾ ಬಸ್ ವ್ಯವಸ್ಥೆ ಕಲ್ಪಿಸಿದೆ. ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಶುದ್ಧ, ಹಾಗೂ ಸ್ವಾದಿಷ್ಟ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿರುವ ಮೂಲಕ ಜನ ಮೆಚ್ಚುಗೆ ಗಳಿಸಿದೆ. ವಿಶಾಲ ಕ್ರೀಡಾಂಗಣ, ಸ್ಮಾರ್ಟ ಕ್ಲಾಸ್, ಕ್ರೀಡೋಪಕರಣಗಳು, ವಿಜ್ಞಾನ ಲ್ಯಾಬ್‍ಗಳನ್ನು ಒದಗಿಸಿರುವ ಕೊಂಕಣ ಎಜ್ಯುಕೇಶನ್ ವಿಧಾತ್ರಿ ಅಕಾಡೆಮಿ ಜೊತೆಗೆ ಸೇರಿ ಅತ್ಯುನ್ನತ ಕಾಲೇಜು ಶಿಕ್ಷಣ ನೀಡುತ್ತಿದೆ.

ಹಾಸ್ಟೇಲ್ ವ್ಯವಸ್ಥೆ : ಕುಮಟಾ ಹಾಗೂ ಸುತ್ತಮುತ್ತಲ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹೊರ ಜಿಲ್ಲೆ ಹಾಗೂ ಬೇರೆ ಬೇರೆ ಕಡೆಗಳಿಂದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಂಡುಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

ನಿರಂತರ ಪಾಲಕರ ಸಭೆ : ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಪಾಲಕರ ಜೊತೆಗೆ ನಿರಂತರ ಸಂವಹನವನ್ನು ಕಾಲೇಜು ನಡೆಸಲಿದ್ದು, ನಿರಂತರವಾಗಿ ಪಾಲಕರ ಸಭೆ ಮಾಹಿತಿ ವಿನಿಮಯ ಕಾರ್ಯಕ್ರಮ ಹಾಗೂ ವಿವಿಧ ನುರಿತ ಉಪನ್ಯಾಸಕರಿಂದ ಉಪನ್ಯಾಸ ಕಾರ್ಯಕ್ರಮ ಇವುಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳ ಹೆಜ್ಜೆ ಹೆಜ್ಜೆಯನ್ನೂ ಗಮನಿಸಿ ಅವರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದೆ.

ಶೈಕ್ಷಣಿಕ ಪರಿಕರಗಳು : ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಅಗತ್ಯವಾದ ಶೈಕ್ಷಣಿಕ ಪರಿಕರಗಳು ಪಠ್ಯಪುಸ್ತಕಗಳು ಹಾಗೂ ಬೇರೆ ಬೇರೆ ಕಡೆಗಳಲ್ಲಿ ಬಳಕೆಯಾಗುತ್ತಿರುವ ಜ್ಞಾನದ ಅಭಿವೃದ್ಧಿಯ ದೃಷ್ಟಿಯಿಂದ ಉಪಯುಕ್ತ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ.

ಎಲ್ಲಾ ಪ್ರಯೋಜನಗಳು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾದರೆ ಸರಸ್ವತಿ ಪಿ.ಯು ಕಾಲೇಜ್ ಕುಮಟಾದಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು ಕುಮಟಾದ ಕಲಭಾಗದ ವಿದ್ಯಾಗಿರಿಯಲ್ಲಿರುವ ಸರಸ್ವತಿ ಪಿ.ಯು ಕಾಲೇಜನ್ನು ಸಂಪರ್ಕಿಸಬಹುದು. ಸಂಪರ್ಕ ಹಾಗೂ ಮಾಹಿತಿಗಾಗಿ 9972664155, 9972663855 ಅನ್ನು ಸಂಪರ್ಕಿಸಬಹುದು.

Konkan