ಕುಮಟಾ: ತಾಲೂಕಿನ ಗೋಕರ್ಣ ಸಮೀಪದ ಮೊರರ್ಬಾ ಬಳಿ ಪ್ಯಾಸೆಂಜರ್ ಟೆಂಪೊ ಹಾಗೂ ಖಾಸಗಿ ಬಸ್ ನ ನಡುವೆ ಮುಖ್ಕಾಮುಕ್ಕಿ ಅಪಘಾತ ಸಂಭವಿಸಿ ಟೆಂಪೊದಲ್ಲಿ ಪ್ರಯಾಣಿಸುತ್ತಿದ್ದ ಐವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕಳುಹಿಸಲಾಗಿದೆ.

RELATED ARTICLES  ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ..!

ಮಂಗಳೂರಿನಿಂದ ಹುಬ್ಬಳ್ಳಿಯ ಕಡೆಗೆ ಹೊರಟಿದ್ದ ಗಣೇಶ ಟ್ರಾವೆಲ್ ಬಸ್ ಹಾಗೂ ಬಾದಾಮಿ ಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಟೆಂಪೊ ಮುಖ್ಕಾಮುಕ್ಕಿ ಢಿಕ್ಕಿ ಸಂಬವಿಸಿದೆ.

RELATED ARTICLES  ಗೋಕರ್ಣದ ಓಂ ಬೀಚ್ ಕಡಲ ತೀರದಲ್ಲಿ ಪ್ರವಾಸಿಗ ಸಾವು

ಬಾದಾಮಿ ತಾಲೂಕಿನ ಗುಳೆದಗುಡ್ಡ ಹುಲಿಯನಕೇರಿ ನಿವಾಸಿಗಳು ಇದರಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತ ದಲ್ಲಿ ನಾಲ್ಕು ವರ್ಷದ ದಿವ್ಯಾ ಶಿವಾನಂದ ಸ್ಥಿತಿ ಗಂಭೀರವಾಗಿದೆ.

ಇನ್ನುಳಿದಂತೆ ಮಕ್ಕಳು ತಾಯಿ ತಂದೆಯ ಸ್ಥಿತಿ ನೋಡಿ ಅಳುವ ದೃಶ್ಯ ಮನ ಕಲಕುವಂತಿತ್ತು.