ಶಿರಸಿ: ದಿ. ಶ್ರೀಪಾದ ಹೆಗಡೆ ಕಡವೆಯವರ 24 ನೇ ಸಂಸ್ಮರಣೆ , ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಇಲ್ಲಿನ ಟಿ.ಎಸ್.ಎಸ್. ಸೇಲ್ ಯಾರ್ಡ ನಲ್ಲಿ ಜು.24 ರಂದು ಮಧ್ಯಾಹ್ನ 3.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು  ಟಿ.ಎಸ್.ಎಸ್. ಸಂಸ್ಥೆ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾಹಿತಿ ನೀಡಿದ್ದಾರೆ.

ಹಿರಿಯ ಸಹಕಾರಿ ಶ್ರೀಪಾದ ಕಡವೆ ಅವರ ಸಂಸ್ಕರಣೆಯನ್ನು ಪ್ರತಿ ವರ್ಷವೂ ಅವರ ಒಡನಾಡಿಗಳೊಂದಿಗೆ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಅವರ ಕುರಿತು ಸಮಗ್ರ ಮಾಹಿತಿಯುಳ್ಳ ಪುಸ್ತವನ್ನೂ ಸಹ ಹೊರ ತರಲಾಗುತ್ತಿದೆ. ಟಿ.ಎಸ್.ಎಸ್., ಭೈರುಂಬೆ ಪ್ರೌಢಶಾಲೆ, ಎ.ಪಿ.ಎಮ್.ಪಿ.ಸಿ., ಕೆಡಿಸಿಸಿ ಬ್ಯಾಂಕ್ ಸೇರಿದಂತೆ ಹತ್ತಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಅವರ ಸಂಸ್ಕರಣೆಯನ್ನು ತೋಟಗಾರ್ಸ ಕೋ ಆಪರೇಟಿವ್ ಸೇಲ್ ಸೊಸೈಟಿ ಮತ್ತು ಎಸ್.ಆರ್.ಕಡವೆ ಅಭ್ಯುದಯ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES  ಕೋಳಿ ಅಂಕದ ಅಡ್ಡೆಯ ಮೇಲೆ ದಾಳಿ : ಕುಮಟಾದಲ್ಲಿ 12 ಬೈಕ್ ಹಾಗೂ ಇತರ ವಸ್ತುಗಳು ವಶಕ್ಕೆ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಾಗರದ ಮಾಜಿ ಶಾಸಕ, ಹಿರಿಯ ಸಹಕಾರಿ ಎಲ್.ಟಿ.ತಿಮ್ಮಪ್ಪ ಹೆಗಡೆ ಆಗಮಿಸಲಿದ್ದು, ಇಂಜಿನಿಯರ್ ಎಮ್.ಕೆ.ಹೆಗಡೆ ಬಿಸ್ಲಕೊಪ್ಪ ಅವರಿಗೆ ಸನ್ಮಾನ ನೆರವೇರಲಿದೆ. ಅಧ್ಯಕ್ಷತೆಯನ್ನು ಟಿ.ಎಸ್.ಎಸ್. ಅಧ್ಯಕ್ಷ ಶಾಂತಾರಾಮ ಹೆಗಡೆ ಶಿಗೇಹಳ್ಳಿ ವಹಿಸಿಕೊಳ್ಳಲಿದ್ದಾರೆ.

RELATED ARTICLES  ಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶನ.

ಕಾರ್ಯಕ್ರಮದಲ್ಲಿ ಪ್ರೊ.ಟಿ.ಜಿ.ಭಟ್ಟ ಹಾಸಣಗಿ ರಚಿತ ದಿ.ಶ್ರೀಪಾದ ಹೆಗಡೆ ಕಡವೆಯವರ ಜೀವನ – ಸಾಧನೆಯ ಸಹಕಾರಿ ಹರಿಕಾರ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ನಂತರ ಸಮಯಮಿತಿ ಯಕ್ಷಗಾನ ಪ್ರದರ್ಶನವಿದ್ದು, ಯಕ್ಷಚಂದನ ದಂಟಕಲ್ ಇವರಿಂದ ಧರ್ಮಾಂಗದ ದಿಗ್ವಿಜಯ ನಡೆಯಲಿದೆ.