ಶುಭಾ ಗಿರಣಿಮನೆ
ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತೇವೆ. ಮಾವು ಈ ಬಾರಿ ರಾಜ್ಯದಾದ್ಯಂತ ಉತ್ತಮವಾಗಿ ಬೆಳೆದಿದೆ. ಮಾವು ಕೃಷಿ ಹೆಚ್ಚಳವಾಗಿದ್ದಲ್ಲದೆ, ಅನುಕೂಲಕರ ವಾತಾವರಣದಿಂದ ಹೋದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಮಾವು ಎಲ್ಲರೂ ಇಷ್ಟ ಪಡುವಂತಹ ಹಣ್ಣು. ಮಾವಿನ ಮರ ಉಷ್ಣ ಪ್ರದೇಶದಲ್ಲಿ ಪ್ರಪಂಚದಾದ್ಯಂತ ಕಂಡುಬರುತ್ತದೆ. ಕರ್ನಾಟಕದಲ್ಲಿ ಒಂದು ವರ್ಷ ಉತ್ತಮ ಬೆಳೆ ಬಂದರೆ ಮತ್ತೊಂದು ವರ್ಷ ಕಡಿಮೆ ಬೆಳೆ ಬರುತ್ತದೆ. ಈ ಬಾರಿ ಮಾವು ಬಂಪರ್ ಬೆಳೆ ಎಂದು ಕೃಷಿ ಇಲಾಖೆ ಹೇಳಿದೆ.
ಈ ಬಾರಿ ಪ್ರತೀಶತ 97ರಷ್ಟು ಮಾವು ಉತ್ಪಾದನೆಯಾಗಿದೆ. ಕಳೆದ 2016ರಲ್ಲಿ ಹೆಚ್ಚಿನ ಮಾವು ಫಸಲು ಬರುವ ವರ್ಷವಾಗಿದ್ದರೂ ಸರಿಯಾದ ಮಾವಿಗೆ ತಕ್ಕುದಾದ ವಾತಾವರಣ ಇಲ್ಲವಾಗಿದ್ದರಿಂದ ನಿರೀಕ್ಷಿತ ಪರಮಾಣದಲ್ಲಿ ಮಾವು ಬೆಳೆ ಬಂದಿರುವುದಿಲ್ಲ. ಈ ಬಾರಿ ಮಾವು ಶುದ್ಧವಾಗಿದ್ದು ಯಾವುದೇ ರೀತಿಯ ವಿಷಪೂರಿತ ರಾಸಾಯನಿಕ ಬಳಸಿ ಹಣ್ಣು ಮಾಡುವುದಿಲ್ಲ ಎಂದು ಕೃಷಿ ಇಲಾಖೆ ಹೇಳಿಕೊಂಡಿದೆ ಮಾವು ನಿತ್ಯ ಹಸಿರಾಗಿರುವ ಮರ. ಇದು ತೇವಾಂಶವಿರುವ ಹಾಗೂ ಕಾಡು ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವುದು ಕಾಣುತ್ತೇವೆ. ಈ ಮಾವು ನಾಟಿ ಗಿಡಗಳಲ್ಲಿ ಹೂವರಳಿ ಕಾಯಿ ಮಾಗಿ ಹಣ್ಣಾದಾಗ ಇರುವ ರುಚಿಯೇ ಬೇರೆ. ಈಗ ಸಂಶೋಧನೆಯಿಂದ ಕಸಿ ಕಟ್ಟಿ ಬೆಳೆಯುವ ಮಾವಿನ ಮರದ ಹಣ್ಣುಗಳ ರುಚಿಯೇ ಬೇರೆ ಇರುತ್ತದೆ. ಕೆಲವು ಮಾವಿನ ಹಣ್ಣಿನ ಹೆಸರುಗಳು ನಮ್ಮಲ್ಲಿ ಪ್ರಸಿದ್ಧಿಯಾಗಿವೆ. ಆಲ್‍ಫಾನ್ಸೋ, ರಸಪುರಿ, ಸಿಂಧೂರ, ಮಲಗೋವ, ಮಲ್ಲಿಕಾ, ನೀಲಂ ಹೀಗೆ ಹಲವಾರು ಉತ್ತಮ ತಳಿಯ ಮಾವನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ ಮಾವು ಬೆಳೆಯಲು ಬೇಕಾದ ಗೊಬ್ಬರ, ಔಷಧಗಳನ್ನು ಸಬ್ಸಿಡಿ ರೂಪದಲ್ಲಿ ರೈತರಿಗೆ ಸರಕಾರ ನೆರವು ನೀಡುತ್ತಿದೆ. ಸರಕಾರ ಮಾವು ಕೊಯ್ಲು ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ತರಬೇತು ಹಾಗೂ ತಂತ್ರಜ್ಞಾನ ದ ಮೂಲಕ ರೈತರಿಗೆ ಉಪಯೋಗವಾಗಲೆಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹತ್ತಿರ ಹೊಗಳಗೆರೆ ಎನ್ನುವಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪಿಸಿದೆ. ಮಾವು ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ, ಈ ನಿಗಮದಲ್ಲಿ ಮಾವಿನ ಹಣ್ಣಿನ ರಸದಿಂದ ಜಾಮ್- ಉಪ್ಪಿನ ಕಾಯಿ ತಯಾರಿಕಾ ಘಟಕ, ಮಾವಿನ ತಳಿಗಳ ಸಂಶೋಧನೆ ಹೀಗೆ ಹಲವಾರಿ ಯೋಜನೆಗಳನ್ನು ಈ ಕೇಂದ್ರ ಹೊಂದಿದೆ.
ಕರ್ನಾಟಕದ ಉತ್ತಮ ತಳಿಯ ಮಾವಿನ ಹಣ್ಣುಗಳು ವಿದೇಶಕ್ಕೆ ರಪ್ತಾಗುವುದು ಹೆಚ್ಚು. ಮಹಾರಾಷ್ಟ್ರ, ಪುಣೆಗಳಲ್ಲಿಗೆ ಹೋಗಿ ಅಲ್ಲಿ ಬ್ರ್ಯಾಂಢ್ ನೇಮ್ ಇರಿಸಿಕೊಂಡು ಹೊರದೇಶಕ್ಕೆ ರಪ್ತಾಗುತ್ತದೆ. ಯಾವ ಪ್ರಮಾಣದಲ್ಲಿ ರಪ್ತಾಗುತ್ತದೆ ಎನ್ನುವುದು ತಿಳಿಯದಿದ್ದರೂ ಕರ್ನಾಟಕದಿಂದ ರಪ್ತಾಗುವ ಮಾವು ಮಹಾರಾಷ್ಟ್ರದ ರತ್ನಗಿರಿ ಎನ್ನುವ ಹೆಸರಿನಿಂದ ಹೊರದೇಶಕ್ಕೆ ರಪ್ತಾಗುತ್ತದೆ. ನಮ್ಮ ಕರ್ನಾಟಕದಲ್ಲಿ ಮಾವನ್ನು ಶೇಖರಿಸಲು ಅವಶ್ಯವಾಗಿರುವ ತಂಪು ಉಗ್ರಾಣವನ್ನು ಹೆಚ್ಚಿನದಾಗಿ ನಿರ್ಮಿಸುವುದು ಅಗತ್ಯವಿದೆ. ಆಗ ಮಾವು ಬೆಳೆಗಾರನಿಗೆ ಹೆಚ್ಚಿನ ಬೆಲೆಯೊಂದಿಗೆ ಗುಣಮಟ್ಟದ ಹಣ್ಣನ್ನು ನೀಡಲು ಸಹಕಾರಿಯಾಗುತ್ತದೆ.
ಈಗ ಮಾರು ಮಾರಿಗೆ ಮಾವಿನ ಹಣ್ಣನ್ನು ರಾಶಿಯನ್ನು ಚೆಂದವಾಗಿಸಿ ಇಟ್ಟು ಗ್ರಾಹಕರನ್ನು ಸೆಳೆದು ಸಣ್ಣ ಬೆಳೆಗಾರರು ತಮ್ಮ ಹಣ್ಣನ್ನು ಇದ್ದ ಜಾಗದಲ್ಲಿಯೇ ಮಾರಾಟ ಮಾಡುತ್ತಾರೆ. ಆಗೆಲ್ಲ ನಿಗದಿತ ಬೆಲೆ ಅಂತೇನು ಇಲ್ಲ. ಒಂದು ಕೇಜಿಗೆ 150 ರೂಪಾಯಿಯೀ ಸಿಗಬಹುದು ಅದೇ ಹಣ್ಣಿಗೆ 300 ರೂಪಾಯಿಯೂ ಸಿಗಬಹುದು. ನಿರ್ಧಾರಿತ ಬೆಲೆ ಇಲ್ಲದ್ದರಿಂದ ರೈತ ಬಂದ ಹಣವೆಲ್ಲ ಲಾಭ ಎಂದು ತಿಳಿಯುತ್ತ ಸಂತೋಷದಿಂದಲೆ ಸಿಹಿಯಾದ ಹಣ್ಣನ್ನು ಮಾರುತ್ತಾನೆ. ಮಾವು ಬೆಳೆಗೆ ಸರಿಯಾದ ಮಾರುಕಟ್ಟೆಯ ಜೊತೆ ಉತ್ತಮ ಬೆಲೆಯೂ ಸಿಗಲಿ ಎನ್ನುವುದು ಮಾವು ಬೆಳೆಗಾರರ ಕೋರಿಕೆ ಇದೆ. ಇದರ ಬಗ್ಗೆ ಸರಕಾರ ಹೆಚ್ಚಿನ ಚಿಂತನೆ ನಡೆಸಿ ಸಹಕಾರ ನೀಡಲಿ ಎನ್ನುವುದು ನಮ್ಮ ಉದ್ದೇಶವಾಗಿದೆ