ಕುಮಟಾ : ಶ್ರೀ ಸಂಸ್ಥಾನ ಗೋಕರ್ಣದ ಶ್ರೀ ರಾಮಚಂದ್ರಾಪುರ ಮಠದಿಂದ ಪ್ರವಾಹ ಪೀಡಿತರಿಗೆ ಪರಿಹಾರ ಸಮಾಗ್ರಿ ವಿತರಣಾ ಕಾರ್ಯಕ್ರಮವನ್ನು ನೆರೆಹಾವಳಿ ಸಂಭವಿಸಿದ ಪ್ರದೇಶಗಳಲ್ಲೊಂದಾದ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯದಲ್ಲಿ ಶ್ರೀ ಮಠದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಭಾರಿಯ ಮಳೆಯಿಂದಾಗಿ ಅನಾಹುತಕ್ಕೆ ಒಳಗಾದ ಪ್ರದೇಶದ ನಿರಾಶ್ರಿತರಿಗೆ ಶ್ರೀ ರಾಮಚಂದ್ರಾಪುರ ಮಠದಿಂದ ಬಂದಂತಹ ಪರಿಹಾರ ಸಮಾಗ್ರಿಗಳನ್ನು ನೇರ ಶ್ರೀ ರಾಮಚಂದ್ರಾಪುರ ಮಠದ ಎಲ್ಲಾ ಪದಾಧಿಕಾರಿಗಳು ಸೇರಿ ವಿತರಿಸಿದರು.
ಈ ಸಂದರ್ಭದಲ್ಲಿ ಕೆನರಾ ಹೆಲ್ತ್ ಕೆರ್ ಸೆಂಟರ್‍ನ ಮಾಲೀಕರಾದ ಡಾ. ಜಿ.ಜಿ ಹೆಗಡೆಯವರು ಮಾತನಾಡಿ, ದಶಮಾನಗಳ ಕಾಲದಿಂದ ಕಾಣದಂತಹ ಪ್ರವಾಹವು ಈ ಭಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ್ದು, ಜನಜಿವನ ಅಸ್ಥವ್ಯಸ್ಥವಾಗಿದೆ, ಅನೇಕರ ಆಸ್ತಿ ಪಾಸ್ತಿಗಳು ನಾಶವಾಗಿದೆ, ಅದೃಷ್ಠವಷಾತ್ ಅಘನಾಶಿನಿ ನದಿಯ ಪ್ರವಾಹದಿಂದ ಯಾವುದೆ ಜೀವಹಾನಿ ಉಂಟಾಗಿಲ್ಲ, ಆದ ಕಾರಣ ನಡೆದಾಡುವ ದೇವರಂತೆ ಇರುವ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆದೇಶದ ಮೇರೆಗೆ ನೇರೆಸಂತ್ರಸ್ಥರಿಗೆ ಪರಿಹಾರ ಸಮಾಗ್ರಿಗಳನ್ನು ವಿತರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪರಿಹಾರ ಸಾಮಾಗ್ರಿಗಳನ್ನು ಸ್ವೀಕರಿಸಿದ ಸ್ಥಳೀಯರು ಮಾತನಾಡಿ, ಇದುವರೆಗೂ ಪರಿಹಾರ ಸಾಮಾಗ್ರಿಗಳ ವಿತರಣೆಗೆಂದು ನಮ್ಮ ಗ್ರಾಮಕ್ಕೆ ಯಾರೂ ಬಂದಿಲ್ಲವಾಗಿದ್ದು, ಇಂದು ಶ್ರೀ ರಾಮಚಂದ್ರಾಪುರ ಮಠದಿಂದ ಪ್ರವಾಹ ಪೀಡಿತರಿಗೆ ಪರಿಹಾರ ಸಮಾಗ್ರಿ ವಿತರಿಸಿದ್ದಾರೆ. ಶ್ರೀ ರಾಮಚಂದ್ರಾಪುರ ಮಠಕ್ಕೆ ನಮ್ಮೆಲ್ಲ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೆವೆ ಹಾಗೂ ಶ್ರೀ ಗುರುಗಳ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದರು.
ಈ ಸಂದರ್ಭದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪದಾಧಿಕಾರಿಗಳಾದ ಸೇವಾ ಖಂಡದ ಶ್ರೀ ಸಂಯೋಜಕರಾದ ಮಹೇಶ ಚಟ್ನಳ್ಳಿ, ಮಂಡಲಾಧ್ಯಕ್ಷರಾದ ಜಿ.ಎಸ್ ಹೆಗಡೆ, ಉಪಾಧ್ಯಕ್ಷರಾದ ಅರುಣ ಹೆಗಡೆ, ರವೀಂದ್ರ ಭಟ್ ಸೋರಿ, ಜಯದೇವ ಬಳಗಂಡಿ,ಗಣೇಶ ಜೋಶಿ, ವಿನಾಯಕ ಭಟ್ಟ, ಅಮರನಾಥ ಭಟ್ಟ, ಆರ್.ಜಿ ಉಗ್ರು, ವಸಂತ ರಾವ್, ಮಾತೃ ವಿಭಾಗದ ರೇಣುಕಾ ಹೆಗಡೆ, ಸ್ವಾತಿ ಭಾಗವತ ಹಾಗೂ ಮುಂತಾದವರು ಹಾಜರಿದ್ದರು.