ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿರುವ ಗೋವುಗಳ ಉದರಂಭರಣಕ್ಕಾಗಿ ಹಸಿಹುಲ್ಲನ್ನು ಕತ್ತರಿಸಿ ಕೊಡುವ ಕಾರ್ಯಕ್ರಮ.
ಕಳೆದ ವರ್ಷ ಕಾಸರಗೋಡು ವಲಯದಿಂದ ಪ್ರಾರಂಭವಾದ ಈ ಕಾರ್ಯಕ್ರಮ ನಂತರ ಇತರ ವಲಯ,ಮಂಡಲ,ಮಹಾಮಂಡಲಕ್ಕೆ ಪಸರಿಸುವಂತೆ ಮಾಡಿದ್ದು ಕಾಮದುಘಾ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿಯವರು.
ಕಾಸರಗೋಡು ವಲಯಾಧ್ಯಕ್ಷ ಅರ್ಜುನಗುಳಿ ಶಂಕರನಾರಾಯಣ ಭಟ್ ನೇತೃತ್ವದಲ್ಲಿ ತಾ.13/10/2019ನೇ ಆದಿತ್ಯವಾರದಂದು ಕಾಸರಗೋಡು ವಿದ್ಯಾನಗರ ಕುರುಡರಶಾಲೆಯ(blind school) ಎದುರಿರುವ ಮಹಾತ್ಮಗಾಂಧಿ ಕಾಲೊನಿ ಯಲ್ಲಿರುವ ಹಸಿಹುಲ್ಲನ್ನು ಕತ್ತರಿಸಿ ನೀಡಲಾಯಿತು.
ಶ್ರೀಮತಿ ಕಿರಣಮೂರ್ತಿ ಹಾಗೂ ಡಾ. ವೈ.ವಿ.ಕೃಷ್ಣಮೂರ್ತಿ ದಂಪತಿಗಳ ಮಗ ಅಶ್ವಿನಿರಮಣನ ಜನ್ಮದಿನದ ಅಂಗವಾಗಿ ಸಾಗಾಟದ ಖರ್ಚುನ್ನು ನೀಡಿ ಜನ್ಮದಿನವನ್ನು ಆಚರಿಸಿದರು.
ಬೆಂಗಳೂರು ನಿವಾಸಿ,ಮಹಾಮಂಡಲ ಕಾರ್ಯಾಲಯ ಕಾರ್ಯದರ್ಶಿ, ಆಗಿದ್ದ.ಪ್ರಸ್ತುತ ಶಾಸನ ತಂತ್ರದ
ಆಡಳಿತ ಖಂಡದ ಅಂತರ್ಜಾಲ ವಿಭಾಗದ ಸಹಕಾರ್ಯದರ್ಶಿಯಾದ ಅಂಬಿಕಾ ವೆಂಕಟೇಶ ದಂಪತಿಗಳು ಬಂದದ್ದು ವಿಶೇಷವಾಗಿತ್ತು. ಕಳೆದ ವರ್ಷದ ಮೇವಿನ ಸೇವೆಯ ವಿವರ ತಿಳಿದಿದ್ದ ದಂಪತಿಗಳು ನಮಗೂ ಈ ರೀತಿ ಸೇವೆ ಮಾಡಬೇಕೆಂಬ ಭಾವನೆಯಿಂದ ಇಂದು ಹುಲ್ಲು ಕಟಾವು ಮಾಡುವ ಜಾಗಕ್ಕೆ ಬಂದು,ಕಾರ್ಯಕರ್ತರ ಶ್ರಮ ನೋಡಿ ,ಸ್ವತಃ ಹುಲ್ಲು ಕಟ್ಟ ಮಾಡಿದರು.ಇಷ್ಟಕ್ಕೇ ತೃಪ್ತಿ ಆಗದ ದಂಪತಿಗಳು ಮುಂದಿನ ಹುಲ್ಲುಸಾಗಾಟದ ವೆಚ್ಚ. ೨೦೦೦ ಸಾವಿರ ಸಮರ್ಪಣೆ ಮಾಡಿದರು.
ಮಾತೃತ್ವಮ್ ಪಧಾನರಾದ ಈಶ್ವರಿ ಶ್ಯಾಮ್ ಭಟ್, ಶಾಮ ಭಟ್ ಬೇರ್ಕಡವು,ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಬಿಂಧು-ಸಿಂಧು ಪ್ರಧಾನ ಈಶ್ವರ ಭಟ್ ಉಳುವಾನ, ಕಾಸರಗೋಡು ವಲಯ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್, ಉಪಾಧ್ಯಕ್ಷ ಬಿ.ಮಹಾಬಲ ಭಟ್,ಸಂಘಟನಾ ಕಾರ್ಯದರ್ಶಿ ಮಹೇಶ ಮನ್ನಿಪ್ಪಾಡಿ, ಕೋಶಾಧಿಕಾರಿ ರಮೇಶ ಭಟ್, ಗುರಿಕ್ಕಾರಾದ ತೆಕ್ಕೇಕರೆ ಶಂಕರನಾರಾಯಣ ಭಟ್, ಮಾತೃಪ್ರಧಾನೆ ಪ್ರೇಮಲತಾ ಸಿ ಭಟ್,ಸವಿತಾ ಯಸ್.ಯನ್.ಭಟ್,ಸವಿತಾ ಆರ್ ಭಟ್ ,ವೈ.ಕೆ.ಗೋವಿಂದ ಭಟ್,ಈಶ್ವರಚಂದ್ರ ಟಿ,ಪ್ರೇಮ್ ಪ್ರಕಾಶ,ಯಸ್.ಯನ್.ಪ್ರಸಾದ, ಗೋಶಾಲೆ ಕಾರ್ಯದರ್ಶಿ ಶ್ರೀಧರ ಭಟ್,ಕಿರಣಶಂಕರ ಭಟ್,ಶ್ರೀ ರಾಮ ಶರ್ಮ ಎಡಕ್ಕಾನ ಉಪಸ್ಥಿತರಿದ್ದು ಹುಲ್ಲು ಕತ್ತರಿಸುವಲ್ಲಿ ಸಹಕರಿಸಿದರು.ಕಾಸರಗೋಡು ಸೇವಾ ಪಧಾನ ಮುರಳಿ ಮೊಗ್ರಲ್ ಹುಲ್ಲು ಕಟಾವು ಮಾಡಿ ಸಹಕರಿಸಿದರು.
ಹವ್ಯಕಸೇವಾ ಭಾರತೀ ಟ್ರಸ್ಟ್ ನ ಡಾ.ವೆಂಕಟಗಿರಿಯವರು ಹುಲ್ಲುಕತ್ತರಿಸುವಲ್ಲಿಗೆ ಬಂದು ಕಾರ್ಯಕರ್ತರ ಶ್ರಮಕ್ಕೆಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮದ ನಂತರ ಸವಿತಾ ಯಸ್.ಯನ್.ಭಟ್ ಮತ್ತು ಸವಿತಾ ಆರ್.ಭಟ್ಟರು ತಿಂಡಿ,ಚಾ ವ್ಯವಸ್ಥೆ ಮಾಡಿದ್ದು ಕಾರ್ಯಕರ್ತರ ಹೊಟ್ಟೆ ತುಂಬಿಸಿತು.
ವರದಿ :ಕೇಶವಪ್ರಸಾದ ಎಡಕ್ಕಾನ ಮುಳ್ಳೇರಿಯ ಸಂಘಟನಾ ಕಾರ್ಯದರ್ಶಿ