ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ಕೋಲಾಹಲ ಎಬ್ಬಿಸಿದ ಕ್ಯಾರ್ ಚಂಡಮಾರುತದ ಭೀಕರತೆಗೆ ತೀರ ಪ್ರದೇಶಗಳಲ್ಲಿ ಹಲವೆಡೆ ಅವಘಡಗಳು ಸಂಭವಿಸಿವೆ, ನಿನ್ನೆಯಿಂಲೇ ಆರಂಭವಾದ ಭಾರಿ ಗಾಳಿಮಳೆಗೆ ಗೋಕರ್ಣ ಗ್ರಾಮದ ಬೇಹಿತ್ತಲ, ಬಿಜ್ಜೂರು, ದಂಡೇಬಾಗ, ಇನ್ನೂ ಹಲವೆಡೆ ವಿದ್ಯುತ್ ಕಂಬ ಹಾಗೂ ಮರಗಳು ಬಿದ್ದು ಅವಾಂತರ ಸೃಷ್ಟಿಸಿದೆ! ಬಿಡದೇ ಸುರಿಯುತ್ತಿರುವ ಭಾರಿ ಮಳೆ ನಡುವೆಯೇ ಇಲ್ಲಿನ ಹೆಸ್ಕಾಂ ಸಿಬ್ಬಂದಿಗಳಿಂದ ದುರಸ್ತಿ ಹಾಗೂ ತೆರವು ಕಾರ್ಯನಡೆದಿದೆ.
(ಬಹುಶಃ ಸಂಜೆ 6:00 ಘಂಟೆ ನಂತರ ವಿದ್ಯುತ್
ಸಂಪರ್ಕ ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.)