ಬೆಂಗಳೂರು: ಸತ್ಯಶೋಧ ಮಿತ್ರಮಂಡಳಿ ಹೆಸರಿನಲ್ಲಿ ಸಮಾಜದ ಶಾಂತಿ- ನೆಮ್ಮದಿಗೆ ಧಕ್ಕೆ ತರುತ್ತಿದ್ದ, ಶ್ರೀರಾಮಚಂದ್ರಾಪುರ ಮಠ ಕುರಿತಾಗಿ ನಿರಂತರ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುವ ಮೂಲಕ ಕೋಟ್ಯಂತರ ಶಿಷ್ಯ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದ ಫೇಸ್‍ಬುಕ್ ಗ್ರೂಪ್ ಅನ್ನು ಫೇಸ್‍ಬುಕ್ ಸಂಸ್ಥೆ ನಿಯಮಾನುಸಾರ ರದ್ದುಗೊಳಿಸಿದೆ.


ಹಲವು ದಿನಗಳಿಂದ ಕುಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಈ ತಂಡದ ವಿರುದ್ಧ ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್ ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಈ ಬಗ್ಗೆ ಎಫ್‍ಐಆರ್ ದಾಖಲಿಸಿ, ಗ್ರೂಪ್ ಅಡ್ಮಿನ್ ಹಾಗೂ ಅದರಲ್ಲಿ ಬರೆಯುತ್ತಿದ್ದವರಿಗೆ ನೋಟಿಸ್ ನೀಡಿದ್ದರು. ಪ್ರಕರಣವನ್ನು ಸಿಐಡಿ ಸಂಸ್ಥೆಯ ಸೈಬರ್ ಅಪರಾಧ ಠಾಣೆಗೆ ವರ್ಗಾಯಿಸಲಾಗಿತ್ತು.

RELATED ARTICLES  ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಜಾಗತಿಕ ಯೋಗ ದಿನಾಚರಣೆ.


ಕೂಲಂಕಷ ತನಿಖೆ ನಡೆಸಿ ದೂರಿನ ಸತ್ಯಾಂಶವನ್ನು ಮನಗಂಡ ಸೈಬಲ್ ಅಪರಾಧ ವಿಭಾಗ, ಫೇಸ್‍ಬುಕ್‍ಗೆ ವರದಿ ಸಲ್ಲಿಸಿ, ಗ್ರೂಪ್ ರದ್ದುಪಡಿಸಲು ಶಿಫಾರಸ್ಸು ಮಾಡಿತ್ತು. ಹಲವು ವಾರಗಳ ಕಾಲ ಗುಂಪಿನ ಬರಹಗಳನ್ನು ಸಮಗ್ರವಾಗಿ ಪರಿಶೀಲಿಸಿದ ಫೇಸ್‍ಬುಕ್ ಸಂಸ್ಥೆ, ಕಾನೂನಿಗೆ ವಿರುದ್ಧವಾದ ಅವಹೇಳನಕಾರಿ ಬರಹಗಳೇ ತುಂಬಿದ್ದನ್ನು ಮನಗಂಡು ಸತ್ಯಶೋಧ ಮಿತ್ರ ಮಂಡಳಿ ಗುಂಪನ್ನು ಅನೂರ್ಜಿತಗೊಳಿಸಿದೆ. ಶ್ರೀಮಠದ ಅವಹೇಳನ ವಿರುದ್ಧ ಹಲವು ನ್ಯಾಯಾಲಯಗಳು ನಿರ್ಬಂಧ ಆದೇಶ ನೀಡಿದ್ದರೂ ಅದನ್ನು ಉಲ್ಲಂಘಿಸಿ ಈ ಕೂಟ ಕಾರ್ಯನಿರ್ವಹಿಸುತ್ತಿತ್ತು.

RELATED ARTICLES  ಕಾರವಾರವನ್ನ ಸ್ವಚ್ಚವಾಗಿಡಲು ಎಲ್ಲರೂ ಶ್ರಮಿಸುವ ಅಗತ್ಯವಿದೆ: ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ


ಶಾಂತಾರಾಮ ಹೆಗಡೆಕಟ್ಟೆ, ಗಣಪತಿ ಭಟ್ಟ ಜಿಗಳೇಮನೆ, ಸಿ.ಬಿ.ಲಕ್ಷ್ಮೀನಾರಾಯಂ, ನಿರಂಜನ ಕುಗ್ವೆ, ಪ್ರಕಾಶ್ ಕಾಕಾಲ್, ಶಂಕರ ಭಟ್ ಮತ್ತಿತರರು ಗುಂಪಿನ ಸಕ್ರಿಯ ಸದಸ್ಯರಾಗಿ ಅಪಪ್ರಚಾರದಲ್ಲಿ ತೊಡಗಿದ್ದರು ಎನ್ನಲಾಗಿದೆ.