ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ 2019-20 ಸಾಲಿನ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಸಂಘದ ಅಡಿಕೆ ವ್ಯಾಪಾರ ಅಂಗಳದಲ್ಲಿ ನೆರವೇರಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿರಸಿ ಇದರ ನ್ಯಾಯಾಧೀಶರಾದ ಶ್ರೀ ಶಾಂತವೀರ ಶಿವಪ್ಪ ಹಾಗೂ ಯೂಥ್ ಫಾರ್ ಸೇವಾ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದ ಶ್ರೀ ವೆಂಕಟೇಶ ಮೂರ್ತಿ ಆಗಮಿಸಿದ್ದರು. ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಪ್ರಾಸ್ತಾವಿಕ ಮಾತನಾಡಿದ ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಹೆಗಡೆ ಕಡವೆ ಇವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಘದ ಸದಸ್ಯರ ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. 2019-20ನೇ ಸಾಲಿನಲ್ಲಿ ಒಟ್ಟೂ 417 ವಿದ್ಯಾರ್ಥಿಗಳಿಗೆ ರೂ.7,82,000 ಗಳನ್ನು ಸಂಘದಿಂದ ವಿದ್ಯಾರ್ಥಿ ವೇತನವಾಗಿ ವಿತರಿಸಲಾಗಿದೆ ಎಂದು ತಿಳಿಸಿದರು. ದಿ. ನೇತ್ರಾವತಿ ಶ್ರೀಪಾದ ಹೆಗಡೆ ಕಡವೆಯವರ ಸ್ಮರಣಾರ್ಥ ಇರಿಸಿರುವ ದತ್ತಿನಿಧಿ ಹಾಗೂ ದಿ. ರವೀಂದ್ರ ಗ. ತೇಲಂಗ ಕೊರ್ಲಕಟ್ಟಾ ಅವರ ಸ್ಮರಣಾರ್ಥ ಇರಿಸಿರುವ ದತ್ತಿನಧಿಗಳಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನಗಳಿಸಿರುವ ಕುಮಾರಿ ವಿಭಾ ಪರಮೇಶ್ವರ ಹೆಗಡೆ ಶಿರಸಿ ಅವರಿಗೆ ದತ್ತಿನಿಧಿ ಪುರಸ್ಕಾರವಾಗಿ ರೂ.1,600ಗಳನ್ನು ನೀಡಲಾಗಿದೆ. ಹಾಗೂ ಶ್ರೀ ರಾಮಚಂದ್ರ ನರಸಿಂಹ ಹೆಗಡೆ ಕಿಬ್ಬಳ್ಳಿ ಬೈರುಂಬೆ ಹಾಗೂ ಶ್ರೀ ಕಾರ್ತಿಕ ಶ್ರೀಕಾಂತ ಹೆಗಡೆ ಗುಡ್ಡೆಕಣ ಅವರು ಇರಿಸಿರುವ ದತ್ತಿನಿಧಿಯಿಂದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ 8ನೇ ಸ್ಥಾನಗಳಿಸಿರುವ ವಿದ್ಯಾರ್ಥಿಗಳಾದ ಕುಮಾರ ನಿತೀಶ ತಿಮ್ಮಪ್ಪ ಹೆಗಡೆ ಕಲಸೊಳ್ಳಿ ಹಾಗೂ ಕುಮಾರ ಮಹೇಶ ಭಾಸ್ಕರ ಹೆಗಡೆ ಬಳಸುತ್ತು ಇವರಿಗೆ ತಲಾ ರೂ.1,450ನ್ನು ದತ್ತಿನಿಧಿ ಪುರಸ್ಕಾರವಾಗಿ ನೀಡಲಾಯಿತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಸಂಘದ ಪ್ರದಾನ ವ್ಯವಸ್ಥಾಪಕರು, ಸಿಬ್ಬಂದಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಕೇಂದ್ರಬಿಂದುಗಳಾದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದರು.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ಭರ್ಜರಿ ಪ್ರಶಸ್ತಿಗಳನ್ನು ಬಾಚಿಕೊಂಡ ಮಣಕೋಣ ಶಾಲೆಯ ವಿದ್ಯಾರ್ಥಿಗಳು