ಕುಮಟಾ: ಚಿರತೆಯೊಂದು ಆಯ ತಪ್ಪಿ ಬಾವಿಗೆ ಬಿದ್ದಿರುವ ಘಟನೆ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ. ನಾಯಿಯನ್ನ ಅಟ್ಟಿಸಿಕೊಂಡು ಬಂದ ಚಿರತೆ ಇದಾಗಿತ್ತು ಎನ್ನಲಾಗಿದೆ.
ಅರಣ್ಯ ಇಲಾಖೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಬಾವಿಗೆ ವಿದ್ದಿರುವ ಚಿರತೆಯನ್ನ ಮೇಲೆತ್ತುವ ಕಾರ್ಯಚರಣೆ ಬರದಿಂದ ಸಾಗಿದೆ.
ಬರ್ಗಿ ಗ್ರಾಮದ ವಸಂತ ಶಿವು ನಾಯ್ಕ ಅವರ ಮನೆಯ ಬಾವಿಯಲ್ಲಿ ಚಿರತೆ ಬಿದ್ದಿದ್ದು ಮನೆಯವರು ಭಯಭೀತರಾಗಿದ್ದಾರೆ.ಚಿರತೆ ಬಾವಿಯಲ್ಲಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ತಂಡೋಪ ತಂಡವಾಗಿ ಬಂದು ಚಿರತೆ ನೋಡಲು ಮುಗಿಬಿಳುತ್ತಿದ್ದಾರೆ.