ಕುಮಟಾ: ಹಾಸನ ನಗರದ ಬಿ.ಕಾಟೀಹಳ್ಳಿಯಲ್ಲಿರುವ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ 17 ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ. ದಿನೇಶ್ ಎಂ ಗಾಂವಕರರವರು ಮೈಸೂರು ವಿಶ್ವವಿದ್ಯಾನಿಲಯದ “ಸಿಂಡಿಕೇಟ್ ಸದಸ್ಯರಾಗಿ” ನೇಮಕಗೊಂಡಿರುತ್ತಾರೆ.
ಇವರು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾ. ಹಿರೇಗುತ್ತಿಯ ನಿವೃತ್ತ ಶಿಕ್ಷಕರಾದ ಶ್ರೀ. ಮೋಹನ್ ಯು ಗಾಂವಕರ ಮತ್ತು ಶ್ರೀಮತಿ ಮಹೇಶ್ವರಿ. ಕೆ ನಾಯಕ ರವರ ದ್ವಿತೀಯ ಪುತ್ರರಾಗಿರುತ್ತಾರೆ. ಶ್ರೀಯುತರನ್ನು ಶ್ರೀ ಬ್ರಹ್ಮ ಜಟಕ ಯುವಕ ಸಂಘ ಹಿರೇಗುತ್ತಿ ಅಧ್ಯಕ್ಷರು, ಸದಸ್ಯರು, ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಎನ್ ರಾಮು ಹಿರೇಗುತ್ತಿ