ಶಿರಸಿ: ಯಕ್ಷ ಶಾಲ್ಮಲಾ ಸಂಸ್ಥೆಯು ಸ್ವರ್ಣವಲ್ಲೀಯ ಯಕ್ಷೋತ್ಸವದಲ್ಲಿ ಹಮ್ಮಿಕೊಂಡ ತೆಂಕಿನ ಯಕ್ಷಗಾನ ಕಲಾಸಕ್ತರ ಗಮನ ಸೆಳೆಯಿತು.
ಸ್ವರ್ಣವಲ್ಲೀಯಲ್ಲಿ ಪ್ರದರ್ಶನಗೊಂಡ ಸುರತ್ಕಲ್ ಕಾಟಿಪಳ್ಳದ ಶ್ರೀಮಹಾಗಣತಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ ಕಲಾವಿದರು ಅಗರಿ ಶ್ರೀನಿವಾಸ ಭಾಗವತರು ಬರೆದ ಶ್ರೀದೇವಿ ಮಹಿಷ ಮರ್ಧಿನಿ ಆಖ್ಯಾನವನ್ನು ಪ್ರಸ್ತುತಗೊಳಿಸಿದರು. ಭಾಗವತರಾಗಿ ಕಾವ್ಯಶ್ರೀ ಅಜೇರು, ಮದ್ದಲೆಯಲ್ಲಿ ಗುರುಪ್ರಸಾದ ಬೋಳಿಂಜಡ್ಕ, ಚಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ಚಕ್ರತಾಳದಲ್ಲಿ ರೇವತಿ ನವೀನ್ ಸಹಕಾರ ನೀಡಿದರು.
ಆಖ್ಯಾನದ ನಿರ್ದೇಶಕರೂ ಆದ ಪೂರ್ಣಿಮಾ ಯತೀಶ ರೈ, ಮಾಲತಿ ವೆಂಕಟೇಶ, ರೇವತಿ ನವೀನ್, ಸಾಯಿಸುಮ ನಾವಡ, ಛಾಯಾಲಕ್ಷ್ಮೀ ಆರ್.ಕೆ., ಸಾಕ್ಷ ವಾಯ್.ರೈ, ಜಿತಾಶ್ರೀ, ವೈಷ್ಣವಿ ರಾವ್, ದಿಶಾ, ಚೈತ್ರಾ ಎಚ್., ಪ್ರತಿಷ್ಠ ರೈ, ಅಶ್ವಿನಿ ಆಚಾರ್ಯ, ಕೃತಿ ರಾವ್, ಅನುಶ್ರೀ ಭಟ್ಟ, ಮೈತ್ರಿ ಭಟ್ಟ ಇತರರು ಮುಮ್ಮೇಳದಲ್ಲಿದ್ದರು.