ಕುಮಟಾ: ಜಗತ್ತಿನಾದ್ಯಂತ ಅಬ್ಬರಿಸುತ್ತಿರುವ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ನೀಡಿರುವ ಲಾಕ್‍ಡೌನ್ ಆದೇಶದ ನಾಲ್ಕನೆಯ ದಿನವಾದ ಗುರುವಾರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗೆ ಕೆಲ ಗಂಟೆಗಳ ಕಾಲ ಪಟ್ಟಣದ ಕೆಲವು ಕಿರಾಣಿ ಹಾಗೂ ತರಕಾರಿ ಅಂಗಡಿಗಳು ತೆರೆದಿದ್ದರಿಂದ ಸಾರ್ವಜನಿಕರು ಪಟ್ಟಣಕ್ಕೆ ಧಾವಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಅವಶ್ಯ ಸಾಮಗ್ರಿಗಳನ್ನು ಖರೀದಿಸಿದರು. ಜನಜಂಗುಳಿ ಪ್ರದೇಶಗಳಾದ ಗಿಬ್‍ವೃತ್ತ, ಮಾರುಕಟ್ಟೆ, ಮೀನು ಮಾರುಕಟ್ಟೆ, ಹೆಗಡೆ ವೃತ್ತ, ಮಾಸ್ತಿಕಟ್ಟೆ ಸರ್ಕಲ್ ಸೇರಿದಂತೆ ಇನ್ನಿತರ ಪ್ರದೇಶಗಳು ಜನರಿಲ್ಲದೇ, ಬಿಕೋ ಎನ್ನುತಿದ್ದವು. ತಾಲೂಕಾಡಳಿತ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಧ್ವನಿವರ್ಧಕಗಳ ಮೂಲಕ ಕೊರೋನಾ ವೈರಸ್ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.

RELATED ARTICLES  ಬೈಕ್ ಕಳವು ಪ್ರಕರಣ ಆರೋಪಿಗೂ ಕೊರೋನಾ ಪಾಸಿಟೀವ್ : ಶಿರಸಿ ಪೋಲೀಸರಲ್ಲಿ ಆತಂಕ..!

ಮಧ್ಯಾಹ್ನದ ಬಳಿಕ ಎಲ್ಲ ಪೆಟ್ರೋಲ್ ಬಂಕ್‍ಗಳು ಜಿಲ್ಲಾಡಳಿತದ ಆದೇಶದಂತೆ ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಇಂಧನವನ್ನು ನೀಡಲಿಲ್ಲ. ಇದರಿಂದ ಗ್ರಾಮೀಣ ಭಾಗಗಳಿಂದ ಆಗಮಿಸಿದ ಕೆಲ ವಾಹನ ಸವಾರರಿಗೆ ತೊಂದರೆಯುಂಟಾಯಿತು.

RELATED ARTICLES  ಭೂಮಿ ಹಕ್ಕಿಗಾಗಿ ಹೋರಾಟ: ಕುಮಟಾದಲ್ಲಿ ಪಾದಯಾತ್ರೆ ನಡೆಸಿ ಮನವಿ ನೀಡಿದ ಗ್ರಾಮಸ್ಥರು.

ಪೊಲೀಸ್ ಇಲಾಖೆ ಹಾಗೂ ತಾಲೂಕಾಡಳಿತ ಸಾರ್ವಜನಿಕರಿಗೆ ಅನಗತ್ಯವಾಗಿ ವಾಹನ ಚಲಾವಣೆ ಮಾಡದಂತೆ ಸಾಕಷ್ಟು ಬಾರಿ ವಿನಂತಿಸಿದರೂ ಕೆಲ ವಾಹನ ಸವಾರರು ಅನಗತ್ಯವಾಗಿ ವಾಹನ ಚಲಾವಣೆಗೆ ಮುಂದಾಗಿರುವುದರಿಂದ ಪಟ್ಟಣದ ಕೆಲ ಭಾಗಗಳಲ್ಲಿ ಪೊಲೀಸರು ಪುಂಡು ಪೋಕರಿಗೆ ಲಾಠಿ ರುಚಿ ತೋರಿಸಿದ ಘಟನೆ ನಡೆಯಿತು.