Home Uttara Kannada ಭೂಮಿ ಹಕ್ಕಿಗಾಗಿ ಹೋರಾಟ: ಕುಮಟಾದಲ್ಲಿ ಪಾದಯಾತ್ರೆ ನಡೆಸಿ ಮನವಿ ನೀಡಿದ ಗ್ರಾಮಸ್ಥರು.

ಭೂಮಿ ಹಕ್ಕಿಗಾಗಿ ಹೋರಾಟ: ಕುಮಟಾದಲ್ಲಿ ಪಾದಯಾತ್ರೆ ನಡೆಸಿ ಮನವಿ ನೀಡಿದ ಗ್ರಾಮಸ್ಥರು.

ಕುಮಟಾ: ಮಾಸೂರ ಕ್ರಾಸ್ ಕುಮಟಾ ಹಾಗೂ ಊರಿನ ಸಮಸ್ತ ನಾಗರಿಕರು ಸೇರಿ ಇಂದು ತಮ್ಮ ವಾಸ ಸ್ಥಳಕ್ಕೆ ಸೂಕ್ತ ದಾಖಲೆಗಳಿದ್ದು ಯಾವುದೋ ಅಸಾಧ್ಯ ದಾಖಲೆಯೊಂದು ಇಲ್ಲ ಎಂಬ ಕಾರಣಕ್ಕೆ ಹಕ್ಕು ಪತ್ರ ನೀಡಲು ನಿರಾಕರಿಸಲಾಗಿದೆ ಈ ಬಗ್ಗೆ ವಿಚಾರಿಸಿ ಹಕ್ಕು ಪತ್ರ ನೀಡುವ ಕುರಿತು ಸೂಕ್ತ ಆದೇಶ ನೀಡಬೇಕಾಗಿ ವಿನಂತಿಸಿ ಮಾಸೂರ ಕ್ರಾಸ್ ನಿಂದ ಕುಮಟಾ ಸಹಾಯಕ ಆಯುಕ್ತರ ಕಛೇರಿಯವರೆಗೆ ಪಾದಯಾತ್ರೆ ಮೂಲಕ ಮೆರವಣಿಗೆ ಸಾಗಿ ಮಾನ್ಯ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಹೊಲನಗದ್ದೆ ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ಪಟಗಾರ ಸರಕಾರದಿಂದ ನಮಗೆ ಸಿಗಬಹುದಾದ ಎಲ್ಲ ಸವಲತ್ತುಗಳನ್ನು ಸದರ ಕ್ಷೇತ್ರದಲ್ಲಿರುವ ನಮ್ಮ ವಿಳಾಸದಿಂದಲೇ ಅನುಭವಿಸಿ ಬರುತ್ತಿದ್ದೇವೆ. ಅಲ್ಲದೆ ನಾವು ವಹಿವಾಟು ಮಾಡಿ ಬಂದಿರುವ ಸ್ಥಳವಾಗಿದೆ.ಆದರೆ ಇಲ್ಲಿಯ ತನಕ ನಮಗೆ ಸದರ ಜಾಗದ ಸಕ್ರಮ ಹಕ್ಕನ್ನು ನೀಡಿಲ್ಲವೆಂದು ಆರೋಪಿಸಿದರು .