ಎಚ್ಚರ ಬಂಧುಗಳೇ ಎಚ್ಚರ
ಇನ್ನಾರುದಿನ ಘನಘೋರ.
ಅಬ್ಬರಿಸಲಿದೆ ಕೊರೋನಾ
ಸಾವಧಾನ ಇರಲಿ ವ್ಯವಧಾನ.

ಹಿರಿಯರನು ಎಳೆಯರನು ಬರಸೆಳೆದು ಕೊಳ್ಳಲಿದೆ.
ಸ್ಥಿಮಿತ ಕಳೆದುಕೊಂಡವರ ಎಳೆದೊಯ್ಯಲಿದೆ.
ಸಾಕು ಸಾಕಿನ್ನೂ ಮಾಡದಿರಿ ಹುಡುಗಾಟ ಬಲಿಯಾಗದಿರಿ ತಿಳಿದು ತಿಳಿದೂ ಯಮನ ಹೂಟ.

ಏನೇ ಆದರೂ ಯಾರೂ ಮನೆಬಿಟ್ಟು ಹೊರಬಾರದಿರಿ.
ಏನಿಲ್ಲದಿದ್ದರೂ ಕೊರಗಿ ದಿನ ದೂಡದಿರಿ.
ಒಪ್ಪತ್ತು ಉಪವಾಸ ವೃತಗಳ ಈದೇಶ
ಸೋಲಬೇಕೇನು ಕಾಣದ ರೋಗಾಣುವಿಗೆ ?

RELATED ARTICLES  ಬಯಸಿದೆತ್ತರ ನೆಮ್ಮದಿ ಕೊಟ್ಟೀತೆ?

ನಮಗಾಗಿ ಜೀವವನು ಪಣಕಿಟ್ಟು ಹೋರಾಡುತಿಹ ವೈದ್ಯರನು ಶುಶ್ರೂಷಕಿಯರನು ಆರಕ್ಷಕರನು ಅಧಿಕಾರಿಗಳನು ಹಗಲಿರುಳು ಕಣ್ಬಿಟ್ಟು ದೇಶಕೋಶವ ಕಾಯ್ವ ವೀರಯೋಧರನು ಒಮ್ಮೆ ನೆನಪಿಸಿಕೊಳ್ಳಿ
ನಿಮ್ಮ ತೀಟೆಯ ನೆಪಕೆ ಇಡದಿರಿ ಬದುಕಿ ಕೊಳ್ಳಿ!

ತಿಳಿದಷ್ಟು ಸುಲಭ ಅಲ್ಲ ಈ ಕೊರಾನಾ
ಸುಭದಲಿ ಬಾರದು ಈ ಪೀಡೆಗೆ ಮರಣ.
ಮದ್ದೊಂದೇ ಇದಕೆ ಅಜ್ಞಾತ .
ಹರಡದಂತೆ ತಡೆವ ಎಲ್ಲರೂ ದೃಢ ಮನದಿ.
ಇದ್ದೇಲೇ ಇರುವ ಮನೆ ಬಿಟ್ಟು ಹೊರಬರದೇ ಇದ್ದಲೇ ಇರುವ.

RELATED ARTICLES  10 ಸಾವಿರ ಟೆಲಿಕಾಂ ಟವರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ BSNL

ಕೈಬಾಯಿ ಕಣ್ಣುಗಳ ಉಜ್ಜಿಕೊಳ್ಳದೇ ಆಗಾಗ ಕೈಗಳ ತೊಳೆದು ಕೊಳ್ಳುತಲಿರುವ .
.ಮನೆಮನವ ಆಗಾಗ ತೊಳೆದು ಕೊಳ್ಳುತ ಪರಿಶುದ್ದತೆಯ ಕಾಪಿಡುವ.

ಗೆಲುವ ಎಲ್ಲರೂ
ಸೇರಿ ಈ ಮಹಾ ಸಮರವ
ಸಾವಧಾನ ಇರಲಿ ಸಾವಧಾನ ಕಳೆದು‌ಕೊಳ್ಳದಿರಿ ಎಂದಿಗೂ ವ್ಯವಧಾನ.

ರಚನೆ .ಚಿದಾನಂದ ಭಂಡಾರಿ ಕಾಗಾಲ.