ಹೊಗಳಿ ಹೊಗಳಿ ಅಟ್ಟವೇರಿಸಬೇಡ ಎಂಬ ಮಾತಿದೆ.ಅದರೆ ಈ ಹೊಗಳಿಕೆ ಅಥವಾ ಪ್ರಶಂಸೆ ಮತ್ತೇನನ್ನೋ ಸಾಧನೆ ಮಾಡುವ ಮುನ್ಸೂಚನೆಯೂ ಅಗಬಹುದು. ಮಕ್ಕಳಿಗೆ ಬಹುಮಾನ ಕೊಟ್ಟು ಪ್ರಶಂಸಿಸಿದರೆ ಅದು ಮಕ್ಕಳ ಶ್ರಮಕ್ಕೆ ತಕ್ಕ ಪ್ರತಿಫಲವೂ ಹೌದು. ಪೈಪೋಟಿಗೆ ಅಧಾರವೂ ಹೌದು. ಪ್ರಶಂಸೆ ಪ್ರಾಮಾಣಿಕ ಪ್ರಯತ್ನಕ್ಕೆ ಸಿಗಬೇಕು. ಅಲ್ಲಿ ಅಹಂಕಾರದ ಬಿಮ್ಮು ಮೂಡಬಾರದು. ಉತ್ತಮ ಪೈಪೋಟಿ ಉನ್ನತ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ. ಕಾರಣ ಪ್ರಶಂಸೆ ಮತ್ತು ಪೈಪೋಟಿ ಒಂದೆ ನಾಣ್ಯದ ಎರಡು ಮುಖಗಳು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅದನ್ನು ಬೆಳಕಿಗೆ ತಂದು ಪ್ರಶಂಸೆ ಮಾಡಿ ಪೈಪೋಟಿಗೆ ಅನುವು ಮಾಡಬೇಕಾದದ್ದು ಇಂದಿನ ವಿದ್ಯಾಭ್ಯಾಸದ ಗುರಿಯಾಗಲಿ.
ಕೀಳರಿಮೆ ತೊಲಗಿ ಉತ್ಸಾಹ ಒಡಮೂಡಲಿ.
ಕಲ್ಪನಾಅರುಣ